ಹೆಂಡ್ತೀನ ಕಂಟ್ರೋಲ್​ನಲ್ಲಿ ಇಟ್ಕೊಳೋದು ಹೇಗೆ ಎಂದು ಹೇಳಿಕೊಟ್ಟ ಭಾಗ್ಯಲಕ್ಷ್ಮಿ ಆದಿ!

Published : Jul 18, 2025, 07:16 PM IST
Bhagyalakshmi Adi

ಸಾರಾಂಶ

ಹೆಂಡತಿಯನ್ನು ಕಂಟ್ರೋಲ್​ ಮಾಡುವುದು ಹೇಗೆ ಎಂದು ಭಾಗ್ಯಲಕ್ಷ್ಮಿ ಆದಿ ಪಾತ್ರಧಾರಿ ಹರೀಶ್​ ರಾಜ್​ ಹೇಳಿದ್ದಾರೆ ನೋಡಿ. 

ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್​, ಮೀಮ್ಸ್​ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್​ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್​ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್​ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್​, ಮೀಮ್ಸ್​ಗಳು ಸಕತ್​ ವೈರಲ್​ ಆಗುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಇದು ಭಾಗ್ಯಲಕ್ಷ್ಮಿ ಸೀರಿಯಲ್​ ಆದಿ ಕೊಟ್ಟಿರುವ ಟಿಪ್ಸ್​. ಹೆಂಡತಿಯನ್ನು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂದು ನಟ ಟಿಪ್ಸ್​ ಕೊಡಲು ಮುಂದಾಗಿದ್ದಾರೆ. ಆದರೆ ಆಗಿದ್ದೇ ಬೇರೆ!

ಆದಿ ಅಂದ್ರೆ ಸದ್ಯ ಭಾಗ್ಯಲಕ್ಷ್ಮಿ ವೀಕ್ಷಕರಿಗೆ ಬೇಸರ ತರಿಸಿರುವ ಹೆಸರು. ಏಕೆಂದರೆ, ತಂಗಿ ಕನ್ನಿಕಾ ಮತ್ತು ಅತ್ತೆಯ ಮಾತು ಕೇಳಿ, ಭಾಗ್ಯಲಕ್ಷ್ಮಿ ಮತ್ತು ಆಕೆಯ ಕುಟುಂಬದ ವಿರುದ್ಧ ಕಿಡಿ ಕಾರುತ್ತಿದ್ದಾನೆ. ಸಹಜವಾಗಿ ಸೀರಿಯಲ್​ಗಳಲ್ಲಿ ಗಂಡಸರಿಗೆ ಬುದ್ಧಿ ಇಲ್ಲ ಎಂದು ತೋರಿಸಲಾಗುತ್ತದೆ. ಇಲ್ಲಿ ಏನಿದ್ರೂ ಮಹಿಳೆಯರೇ ನಾಯಕಿಯರು, ಅವರೇ ವಿಲನ್ನು, ಗಂಡಸರು ಮುಗ್ಧರು ಇಲ್ಲವೇ ಯಾವುದೋ ವಿಲನ್​ ಮಹಿಳೆಯ ಕೈಗೊಂಬೆಗಳು ಅಷ್ಟೇ. ಭಾಗ್ಯಲಕ್ಷ್ಮಿಯಲ್ಲಿಯೂ ಸದ್ಯ ಆದಿಯ ರೋಲ್​ ಅದೇ. ಆದರೆ ಇದೀಗ ಭಾಗ್ಯಲಕ್ಷ್ಮಿಯ ಬಗ್ಗೆ ಒಳ್ಳೆಯ ಯೋಚನೆ ಬಂದಿದೆ ಎನ್ನುವುದೇ ನೆಮ್ಮದಿ. ಇಂತಿಪ್ಪ, ಆದಿ ಅರ್ಥಾತ್​

ಸೀಕ್ರೇಟ್​ ಇದೆ ಅಂದೆ. ಹೇಳ್ತೀನಿ ಅಂತ ಹೇಳಿಲ್ಲ ಎನ್ನುತ್ತಲೇ ತಮಾಷೆ ಮಾಡಿದ್ದಾರೆ. ನೀವು ಹೆಡ್ಡಿಂಗ್​ ನೋಡಿ ಇದರ ಮೇಲೆ ಕ್ಲಿಕ್​ ಮಾಡಿದ್ದೀರಾ ಎಂದ್ರೆ ನಿಮ್ಮ ಹೆಂಡ್ತೀನ ಕಂಟ್ರೋಲ್​ನಲ್ಲಿ ಇಟ್ಕೋಬೇಕು ಎನ್ನೋ ಆಸೆ ಇದೆ ಅಂತಾಯ್ತು. ನೀವು ಈ ವಿಡಿಯೋದ ಮೇಲೆ ಕ್ಲಿಕ್​ ಮಾಡಿದ್ದು ಗೊತ್ತಾದ್ರೆ, ಅವರೇ ನಿಮಗೆ ಸೀಕ್ರೇಟ್​ ಹೇಳ್ತಾರೆ ಎಂದು ತಮಾಷೆ ಮಾಡಿದ್ದಾರೆ. ಕೊನೆಗೆ ಪತ್ನಿ ಪಕ್ಕದಲ್ಲಿ ಬಂದಾಗ, ಸಾರಿ ಕೇಳುತ್ತಲೇ ಸ್ಯಾರಿ ಜಾಹೀರಾತು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಇದು ಸೀರೆಯ ಅಂಗಡಿಯ ಜಾಹೀರಾತು ಆದರೂ ಹೆಂಡತಿಯನ್ನು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂದು ತಿಳಿಯುವ ಕುತೂಹಲದಲ್ಲಿ ಹಲವರು ಇದನ್ನು ಕ್ಲಿಕ್​ ಮಾಡಿದ್ದಂತೂ ಸುಳ್ಳಲ್ಲ.

ಅಷ್ಟಕ್ಕೂ, ಕನ್ನಡ ಚಿತ್ರರಂಗದಲ್ಲಿ (Kannada Film Industry) ಹಾಗೂ ಕಿರುತೆರೆಯಲ್ಲಿ ತಮ್ಮ ನಟನಾ ಕೌಶಲ್ಯದಿಂದಲೇ ಜನಮನ ಗೆದ್ದ ನಟ ಕಲಾಕಾರ್ ಹರೀಶ್ ರಾಜ್. ಇವರು ತಮ್ಮ ನಟನಾ ಕರಿಯರ್ ಆರಂಭಿಸಿ ಬರೋಬ್ಬರಿ 25 ವರ್ಷಕ್ಕೂ ಆಧಿಕವಾಗಿದೆ ಅಂದ್ರೆ ನಂಬಲೇ ಬೇಕು. ಆದ್ರೆ ನಟ 25 ವರ್ಷಗಳ ಹಿಂದೆ ಹೇಗಿದ್ರೋ ಇವತ್ತು ಹಾಗೆಯೇ ಇದ್ದಾರೆ. ಹರೀಶ್ ರಾಜ್ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ 27 ವರ್ಷಗಳು ಸಂದಿವೆ. 25 ವರ್ಷಗಳಲ್ಲಿ 60ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಹರೀಶ್​ ರಾಜ್ ಗೆ​, ಪ್ರತಿಭಾವಂತ ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿದ ಹೆಮ್ಮೆ ಅವರಿಗೆ ಇದೆ. ರಾಜೇಂದ್ರ ಸಿಂಗ್ ಬಾಬು (Rajendra Singh Babuನಿರ್ದೇಶನದ ‘ದೋಣಿ ಸಾಗಲಿ’ ಚಿತ್ರದ ಮೂಲಕ 1997ರಲ್ಲಿ ಹರೀಶ್​ ರಾಜ್​ ತಮ್ಮ ಸಿನಿಮಾ ಕರಿಯರ್ ಆರಂಭಿಸಿದರು. ಅದೇ ವರ್ಷ ಗಿರೀಶ್ ಕಾಸರವಳ್ಳಿಯವರ ‘ತಾಯಿ ಸಾಹೇಬ’ ಚಿತ್ರದಲ್ಲಿ ನಟಿಸಿದರು. ಆ ಸಿನಿಮಾದಲ್ಲಿ ನಟಿ ಜಯಮಾಲ (Jayamala)ಪುತ್ರನ ಪಾತ್ರದಲ್ಲಿ ಇವರು ನಟಿಸಿದ್ದರು. ಒಂದು ಇಂಗ್ಲಿಷ್ ಸಿನಿಮಾ ಸೇರಿ, ಹಲವು ತಮಿಳು ಹಾಗೂ ಮಲಯಾಲಂ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಹರೀಶ್ ರಾಜ್. ಅಷ್ಟೇ ಅಲ್ಲ ಇವರು ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸುವ ಮೂಲಕ ಟಫ್ ಸ್ಪರ್ಧಿಯಾಗಿ ಸಹ ಕಾಣಿಸಿಕೊಂಡಿದ್ದಾರೆ. ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಆದಿಯಾಗಿ ಕಾಣಿಸಿಕೊಳ್ತಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?