
ನಟ, ರ್ಯಾಪರ್ ಚಂದನ್ ಶೆಟ್ಟಿ ಅವರೊಂದಿಗೆ ಡಿವೋರ್ಸ್ ಪಡೆದ ನಿವೇದಿತಾ ಗೌಡ ದಿನಕ್ಕೊಂದರಂತೆ ಹಾಟ್ ವಿಡಿಯೋಶೂಟ್ ಮಾಡುತ್ತಲೇ, ನೆಗೆಟಿವ್ ಕಮೆಂಟ್ಸ್, ಛೀಮಾರಿಗಳಿಂದಲೇ ಸಕತ್ ಫೇಮಸ್ ಆಗ್ತಿದ್ದಾರೆ. ಪ್ರಸಿದ್ಧಿ ಹೇಗೆ ಪಡೆಯಲಿ ಅವರಿಗೆ ಒಂದಿಷ್ಟು ಷೋಗಳಲ್ಲಿ ಅವಕಾಶವಂತೂ ಇದ್ದೇ ಇರುತ್ತದೆ. ಅದರ ಜೊತೆ ಒಂದಿಷ್ಟು ಅದೃಷ್ಟ ಇದ್ದರೆ, ಒಳ್ಳೊಳ್ಳೆ ಅವಕಾಶಗಳೂ ಸಿಗುತ್ತವೆ. ಅದೇ ರೀತಿ ನಿವೇದಿತಾ ಗೌಡ ಬೇರೆ ಬೇರೆ ಕಡೆ ಗೆಸ್ಟ್ ಆಗಿ ಹೋಗುತ್ತಿದ್ದಾರೆ, ಕಾಮಿಡಿ ಕಿಚನ್ ಷೋ ಆಗಿರುವ ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ನಲ್ಲಿ ಸ್ಪರ್ಧಿಯಾಗಿದ್ದಾರೆ ನಟಿ. ಕಾಮಿಡಿ ಕುಕ್ಕಿಂಗ್ ಷೋ ಆಗಿರುವ ಇದರಲ್ಲಿ, ಅಡುಗೆಯ ಜತೆಗೆ ನಗುವಿನ ಔತಣ ಉಣಬಡಿಸಲಾಗುತ್ತಿದೆ. ಇದಾಗಲೇ ಈ ಷೋ ನೋಡುಗರಿಗೆ ಇದರ ಬಗ್ಗೆ ಗೊತ್ತಿದೆ. ಈ ಜೋಡಿಯಲ್ಲಿ ಒಬ್ಬರಿಗೆ ಅಡುಗೆ ಬರುತ್ತದೆ, ಮತ್ತೊಬ್ಬರಿಗೆ ಸರಿಯಾಗಿ ಗ್ಯಾಸ್ ಕೂಡ ಹಚ್ಚಲು ಬರುವುದಿಲ್ಲ. ಐವರು ನಳಪಾಕ ಪ್ರವೀಣರಿಗೆ ಸಹಾಯಕರಾಗಿ ಮತ್ತೈದು ನಗೆಪಾಕರು ಜತೆಯಾಗಿರುತ್ತಾರೆ. ಕುಕ್ ಹಾಗೂ ಕ್ವಾಟ್ಲೆಗಳು ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆಯೇ ಈ ಷೋ ಆಗಿದೆ.
ಅದರಲ್ಲಿ ನಿವೇದಿತಾ ಗೌಡ ಕೂಡ ಇದ್ದಾರೆ. ಇದೀಗ ಸ್ಪರ್ಧಿಗಳಿಗೆ ಕೆಲವೊಂದು ಟಾಸ್ಕ್ ಕೂಡ ಕೊಡಲಾಗುತ್ತದೆ. ಅದರಂತೆ ನಿವೇದಿತಾ ಅವರಿಗೆ ತರಕಾರಿ ಮಾರುವ ಟಾಸ್ಕ್ ನೀಡಲಾಗಿದೆ. ಅದರ ಬಗ್ಗೆ ವಾಹಿನಿ ಪ್ರೊಮೋ ಒಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಟೊಮೆಟೊ ಕೆ.ಜಿಗೆ 10 ರೂಪಾಯಿ, ಈರುಳ್ಳಿ 20 ರೂ. ಬೇಗ ತನ್ನಿ ತೆಗೆದುಕೊಳ್ಳಿ ಎನ್ನುವ ಶೀರ್ಷಿಕೆ ಕೊಡಲಾಗಿದೆ. ಅದರಲ್ಲಿ ನಿವೇದಿತಾರನ್ನು ತರಕಾರಿ ಮಾಡುವ ಹೆಂಗಸಿನ ರೂಪದಲ್ಲಿ ನೋಡಬಹುದು. ಇನ್ಸ್ಟಾಗ್ರಾಮ್ ಪ್ರೊಫೈಲ್ ಒಂದನ್ನು ಇದರಲ್ಲಿ ಶೇರ್ ಮಾಡಲಾಗಿದ್ದು, ಅದರಲ್ಲಿ ನಿವೇದಿತಾ ತರಕಾರಿ ಮಾರೋಳು ಎಂದು ಹೇಳಲಾಗಿದೆ. ಇದೊಂದು ಟಾಸ್ಕ್ ಅಷ್ಟೇ. ಹಾಗೆಂದು ತರಕಾರಿ ಮಾಡುತ್ತಾ ನಿವೇದಿತಾ ನಿಮ್ಮ ಮನೆಯ ಎದುರಿಗೆ ಬರುವುದಿಲ್ಲ ಮತ್ತೆ. ನಿಮ್ಮ ಮನೆಯಲ್ಲಿ ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಬಗ್ಗೆ ಡಿಟೇಲ್ಸ್ ವಾಹಿನಿ ಹಂಚಿಕೊಂಡಿದೆ.
ಕಳೆದ ಸಂಚಿಕೆಯಲ್ಲಿ ನಿವೇದಿತಾ ಗೌಡ ಅವರಿಗೆ ಹಸುವಿನ ಹಾಲು ಕರೆಯುವ ಟಾಸ್ಕ್ ಕೊಡಲಾಗಿತ್ತು. ಇದನ್ನು ಕೇಳಿ ನಿವೇದಿತಾ ಸುಸ್ತಾಗಿ ಹೋಗಿದ್ದರು. ಇವರಿಗೆ ಈ ಟಾಸ್ಕ್ ಕೊಟ್ಟಿರೋದಕ್ಕೆ ಇನ್ನಿಲ್ಲದ ತಮಾಷೆಯ ಕಮೆಂಟ್ಸ್ಗಳು ಬಂದಿದ್ದವು. ತುಂಡುಡುಗೆ ತೊಟ್ಟು ದೇಹ ಪ್ರದರ್ಶನ ಮಾಡುತ್ತಾ ರೀಲ್ಸ್ ಮಾಡಿಕೊಂಡಿದ್ದಾಕೆಗೆ ಹಸುವಿನ ಹಾಲು ಕರೆಯುವ ಟಾಸ್ಕ್ ಕೊಟ್ಟರೆ ಗತಿ ಏನು ಎಂದು ಕೆಲವರು ಪ್ರಶ್ನಿಸಿದರೆ, ಹಸು ಹಾಲು ಕೊಡುತ್ತದೆ ಎನ್ನೋದು ಈಕೆಗೆ ಗೊತ್ತಾ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದರು. ಎಲ್ಲಿಂದ ಹಾಲು ಕರೆಯುವುದು ಎನ್ನುವುದು ರೀಲ್ಸ್ ರಾಣಿಗೆ ಗೊತ್ತಿದ್ಯಾ ಎಂದು ಮತ್ತೆ ಕೆಲವರು ಕೇಳುತ್ತಿದ್ದರೆ, ಇನ್ನು ಕೆಲವು ತರ್ಲೆಗಳು ಬೇಡದ ಕಮೆಂಟ್ಸ್ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಗೌಡ ಅವರನ್ನು ಸ್ಪರ್ಧೆಗೆ ಆಯ್ಕೆ ಮಾಡಿರುವುದಕ್ಕೆ ಸಹಜವಾಗಿ ಇದರ ಟಿಆರ್ಪಿ ಕೂಡ ಏರುತ್ತಿದೆ ಎನ್ನುವುದು ಈ ಕಮೆಂಟ್ಸ್ ಮೂಲಕವೇ ತಿಳಿಯುತ್ತಿದೆ!
ಇನ್ನು ಕ್ವಾಟ್ಲೆ ಕಿಚನ್ ಕುರಿತು ಹೇಳುವುದಾದರೆ, ಇದರಲ್ಲಿ ಬಹಳ ಬೇಗ ಅಡುಗೆ ಮಾಡಿ ಮುಗಿಸಲು ಹೊರಟ ಪಾಕಪ್ರವೀಣರಿಗೆ ಕ್ವಾಟ್ಲೆ ಸಹಾಯಕರು ಅಡ್ಡಗಾಲಾಗಿ ನಿಲ್ಲುತ್ತಾರೆ. ಟಾರ್ಚರ್ ಕೊಡಲೆಂದೇ ಬಂದ ಕ್ವಾಟ್ಲೆಗಳು ಸ್ವತಃ ಜೋಕರ್‌ಗಳಾಗುವ ಪ್ರಸಂಗ ಕೂಡ ಇರುತ್ತದೆ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಈ ಶೋನಲ್ಲಿ ಕುಕ್‌ಗಳು ಎಲಿಮಿನೇಟ್ ಆಗುತ್ತಾರೆ. ಆದರೆ ಕ್ವಾಟ್ಲೆಗಳು ಎಲಿಮಿನೇಟ್ ಆಗುವುದಿಲ್ಲ. ಈ ಷೋನಲ್ಲಿ ಪ್ರತಿ ವಾರವೂ ಕುಕ್ ಮತ್ತು ಕ್ವಾಟ್ಲೆಗಳ ಜೋಡಿ ಬದಲಾಗುತ್ತಲೇ ಇರುತ್ತದೆ. . ಒಳ್ಳೆಯ ಸಹಾಯಕ ಬರಲಿ ಎಂದು ಕಾಯುತ್ತಿರುವ ಕುಕ್‌ಗಳಿಗೆ ಒಮ್ಮೆ ಅಡುಗೆ ಮನೆಯ ಕಡೆ ತಿರುಗಿಯೂ ನೋಡದ, ತರಕಾರಿಗಳನ್ನು ಗುರುತಿಸಲೂ ಬಾರದ ಕ್ವಾಟ್ಲೆ ಸಹಾಯಕರು ಸಿಗುತ್ತಾರೆ. ಇದರಿಂದ ಉಂಟಾಗುವ ಕಾಮಿಡಿಯಿಂದ ವೀಕ್ಷಕರಿಗೆ ಸಖತ್ ಮನರಂಜನೆ ಸಿಗುತ್ತದೆ. ನಟಿ ಶ್ರುತಿ ಮತ್ತು ಶೆಫ್ ಕೌಶಿಕ್ ಅವರು ‘ಕ್ವಾಟ್ಲೆ ಕಿಚನ್’ ತೀರ್ಪುಗಾರರಾಗಿರುತ್ತಾರೆ. ಈ ಕಾರ್ಯಕ್ರಮವನ್ನು ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ನಡೆಸಿಕೊಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.