ಕಿಲಾಡಿ ನಟಿ ಆಸ್ಪತ್ರೆ ಪಾಲು.. 'ಅನೆಸ್ತೇಷಿಯಾ ತಗೊಂಡಾಗ ಸಿಗೋ ಮಜವೇ ಬೇರೆ' ಅಂದಿದ್ಯಾಕೆ ಉರ್ಫಿ ಜಾವೇದ್?

Published : Aug 28, 2026, 06:12 PM IST
Urfi Javed

ಸಾರಾಂಶ

2016 ರಲ್ಲಿ 'ಬಡೇ ಭೈಯಾ ಕಿ ದುಲ್ಹನಿಯಾ' ಮೂಲಕ ನಟನೆ ಆರಂಭಿಸಿದ ಉರ್ಫಿ, ನಂತರ ಚಂದ್ರ ನಂದಿನಿ, ಮೇರಿ ದುರ್ಗಾ ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರಿಗೆ ಅಸಲಿ ಬ್ರೇಕ್ ಸಿಕ್ಕಿದ್ದು 'ಬಿಗ್ ಬಾಸ್ OTT' ಸೀಸನ್ 1 ರಿಂದ. ಈ ಕಿಲಾಡಿ ನಟಿ ಈಗ ಆಸ್ಪತ್ರೆ ಪಾಲಾಗಿದ್ದು, ಅಲ್ಲಿಯೂ ತಮ್ಮ ಕಿತಾಪತಿ ಬಿಟ್ಟಿಲ್ಲ!

Uorfi Javed hospitalized-ನೋವಿನಲ್ಲೂ ಉರ್ಫಿ ಜಾವೇದ್ ಹೇಳಿದ ಆ 'ಕಿಕ್' ವಿಷಯವೇನು?

ಸದಾ ತನ್ನ ವಿಚಿತ್ರ ಉಡುಗೆ-ತೊಡುಗೆ, ಬೋಲ್ಡ್ ಹೇಳಿಕೆಗಳಿಂದಲೇ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸುವ 'ಸೋಷಿಯಲ್ ಮೀಡಿಯಾ ಸೆನ್ಸೇಷನ್' ಉರ್ಫಿ ಜಾವೇದ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಉಡುಪಿನಿಂದ ಸುದ್ದಿಯಾಗುತ್ತಿಲ್ಲ, ಬದಲಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ.

ವರ್ಷಕ್ಕೊಮ್ಮೆ ಆಸ್ಪತ್ರೆ ಫಿಕ್ಸ್!

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಉರ್ಫಿ, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಇತ್ತೀಚಿನ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. "ಪ್ರತಿ ವರ್ಷವೂ ನನಗೆ ಆಸ್ಪತ್ರೆ ವಾಸ ತಪ್ಪಿದ್ದಲ್ಲ, ಇದು ನನ್ನ ವಾರ್ಷಿಕ ಸಂಪ್ರದಾಯದಂತಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಸುಸ್ತಾಗಿ ಮಲಗಿರುವ ಉರ್ಫಿ, ಕೈಗೆ ಐವಿ ಕ್ಯಾನುಲಾ (IV Cannula) ಚುಚ್ಚಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಫೋಟೋ ನೋಡಿ ಮರುಕ ಪಡುತ್ತಿದ್ದರೆ, ಉರ್ಫಿ ಮಾತ್ರ ತನ್ನದೇ ಆದ ತುಂಟತನದ ಶೈಲಿಯಲ್ಲಿ "ಅನೆಸ್ಥೇಷಿಯಾ ತಗೊಂಡಾಗ ಸಿಗುವ ಮಜಾವೇ ಬೇರೆ, ಅದು ಒಂಥರಾ ಕಿಕ್ ಕೊಡುತ್ತೆ" ಎಂದು ಹೇಳುವ ಮೂಲಕ ನೋವಿನಲ್ಲೂ ಹಾಸ್ಯದ ಮೊರೆ ಹೋಗಿದ್ದಾರೆ.

ಆರೋಗ್ಯದ ಹಿಂದಿದೆ ಕಣ್ಣೀರಿನ ಕಥೆ:

ನೋಡಲು ಗ್ಲಾಮರಸ್ ಆಗಿ ಕಂಡರೂ, ಉರ್ಫಿ ಜಾವೇದ್ ಕಳೆದ ಕೆಲವು ವರ್ಷಗಳಿಂದ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ತಮ್ಮ ಜೀವನದ ಅತ್ಯಂತ ಕಠಿಣ ದಿನಗಳ ಬಗ್ಗೆ ಮಾತನಾಡಿದ್ದ ಅವರು, ತಮ್ಮ ದೇಹದ ತೂಕ ಕೇವಲ 38 ಕೆಜಿಗೆ ಇಳಿದಿದ್ದನ್ನು ನೆನಪಿಸಿಕೊಂಡಿದ್ದರು. ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು ಮತ್ತು ವಿಪರೀತ ಒತ್ತಡ ಅವರ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಿದೆ. "ನಾನು ತುಂಬಾ ತೆಳ್ಳಗಾಗಿದ್ದರೂ, ಪೌಷ್ಟಿಕಾಂಶದ ಕೊರತೆಯಿಂದಾಗಿ ಮತ್ತು ವಿಚಿತ್ರವಾದ ಅಲರ್ಜಿಗಳಿಂದಾಗಿ ನನ್ನ ಮುಖ ಆಗಾಗ ಊದಿಕೊಳ್ಳುತ್ತದೆ" ಎಂದು ಅವರು ಈ ಹಿಂದೆ ನೋವು ತೋಡಿಕೊಂಡಿದ್ದರು.

ಮತ್ತೊಂದು ವಿಪರ್ಯಾಸವೆಂದರೆ, ಉರ್ಫಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಅವರ ಮನೆಯಲ್ಲಿ ಮೂರು ಮುದ್ದಾದ ಬೆಕ್ಕುಗಳಿವೆ. ಆದರೆ ವೈದ್ಯಕೀಯ ವರದಿಗಳ ಪ್ರಕಾರ ಅವರಿಗೆ ಬೆಕ್ಕುಗಳ ಅಲರ್ಜಿ ಇದೆಯಂತೆ! ಆದರೂ ಬೆಕ್ಕುಗಳನ್ನು ಬಿಟ್ಟಿರಲಾರದೆ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಿರುತೆರೆಯಿಂದ ಸ್ಪ್ಲಿಟ್ಸ್‌ವಿಲ್ಲಾ ವರೆಗೆ:

2016 ರಲ್ಲಿ 'ಬಡೇ ಭೈಯಾ ಕಿ ದುಲ್ಹನಿಯಾ' ಮೂಲಕ ನಟನೆ ಆರಂಭಿಸಿದ ಉರ್ಫಿ, ನಂತರ ಚಂದ್ರ ನಂದಿನಿ, ಮೇರಿ ದುರ್ಗಾ ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರಿಗೆ ಅಸಲಿ ಬ್ರೇಕ್ ಸಿಕ್ಕಿದ್ದು 'ಬಿಗ್ ಬಾಸ್ OTT' ಸೀಸನ್ 1 ರಿಂದ. ಅಲ್ಲಿಂದ ಶುರುವಾದ ಅವರ ಫ್ಯಾಷನ್ ಪ್ರಯಾಣ ಇಡೀ ದೇಶವೇ ಅವರತ್ತ ತಿರುಗಿ ನೋಡುವಂತೆ ಮಾಡಿತು. ಇತ್ತೀಚೆಗೆ ಅವರು ನಿಯಾ ಶರ್ಮಾ ಮತ್ತು ಸನ್ನಿ ಲಿಯೋನ್ ಜೊತೆ 'ಸ್ಪ್ಲಿಟ್ಸ್‌ವಿಲ್ಲಾ X6' ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡು ಮೋಡಿ ಮಾಡಿದ್ದರು.

ಸದ್ಯಕ್ಕೆ ಉರ್ಫಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಬೇಗ ಗುಣಮುಖರಾಗಿ ಬರಲಿ ಎಂದು ಅವರ ಲಕ್ಷಾಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಉರ್ಫಿ ಮತ್ತೆ ಯಾವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಈ ಸಿನಿಮಾ ಇಷ್ಟವಾಗದಿದ್ರೆ ನಡುರಸ್ತೆಯಲ್ಲೇ ತಲೆ ಬೋಳಿಸಿಕೊಳ್ತೀನಿ': ನಟಿ ಶ್ವೇತಾ ಲಕ್ಷ್ಮಣ್‌ ಚಾಲೆಂಜ್‌
ಎರಡನೇ ದಿನಕ್ಕೆ 200 ಕೋಟಿ ಕ್ಲಬ್‌ನತ್ತ ಯಶ್‌ ಟಾಕ್ಸಿಕ್‌, ಗಳಿಕೆ ಪ್ರಮಾಣದಲ್ಲಿ ಇಳಿಕೆ