ಸಂದೀಪ್ ರೆಡ್ಡಿ ವಂಗಾ: 'ಸ್ಪಿರಿಟ್‌'ಗಿಂತ ರಾಜಮೌಳಿಯ 'ವಾರಣಾಸಿ' ದೊಡ್ಡ ಚಿತ್ರ.. ಸನ್ನೆ ಮಾಡಿದ್ಯಾಕೆ ಈ ನಿರ್ದೇಶಕರು?

Published : Aug 27, 2026, 02:58 PM IST
Sandeep Reddy Vanga

ಸಾರಾಂಶ

ಸಂದೀಪ್ ರೆಡ್ಡಿ ವಂಗಾ ಇತ್ತೀಚೆಗೆ ತಮ್ಮ ಸಹೋದರ ಪ್ರಣಯ್ ರೆಡ್ಡಿ ವಂಗಾ ನಿರ್ಮಿಸಿರುವ 'ರೋಮಾಂಚಕಂ' ಚಿತ್ರದ ಪ್ರಚಾರದ ವೇಳೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರು ಸ್ವಾಭಾವಿಕವಾಗಿ ಅವರ ಮುಂಬರುವ ಬಿಗ್ ಬಜೆಟ್ ಸಿನಿಮಾ 'ಸ್ಪಿರಿಟ್' (Spirit) ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು.

Sandeep Reddy Vanga on Spirit & Varanasi Movies: ಸ್ಪಿರಿಟ್ ಹಾಗೂ ವಾರಣಾಸಿ ಸಿನಿಮಾಗಳ ಬಗ್ಗೆ ಮಾತನ್ನಾಡಿದ ಸಂದೀಪ್ ರೆಟ್ಟಿ ವಂಗಾ!

ಇದ್ದಕ್ಕಿದ್ದಂತೆ ಟಾಲಿವುಡ್ ಅಂಗಳದಲ್ಲಿ ಹೊಸದೊಂದು ಸಂಚಲನ ಶುರುವಾಗಿದೆ. ಅದಕ್ಕೆ ಕಾರಣ "ಅರ್ಜುನ್ ರೆಡ್ಡಿ" ಮತ್ತು "ಅನಿಮಲ್" ಖ್ಯಾತಿಯ ಸೌಂಡ್ ಮಾಡುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ! ಸಾಮಾನ್ಯವಾಗಿ ವಂಗಾ ಅಂದರೆ ಅಲ್ಲಿ ಒಂದಷ್ಟು ಖಡಕ್ ಮಾತುಗಳು, ರಗಡ್ ಸಿನಿಮಾ ಅಪ್‌ಡೇಟ್‌ಗಳು ಇರುತ್ತವೆ. ಆದರೆ ಈಗ ಅವರು ನೀಡಿರುವ ಒಂದು ಹೇಳಿಕೆ ಸಿನಿಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದೆ.

ರಾಜಮೌಳಿ ಚಿತ್ರವೇ "ದೊಡ್ಡದು" ಎಂದ ವಂಗಾ!

ಸಂದೀಪ್ ರೆಡ್ಡಿ ವಂಗಾ ಇತ್ತೀಚೆಗೆ ತಮ್ಮ ಸಹೋದರ ಪ್ರಣಯ್ ರೆಡ್ಡಿ ವಂಗಾ ನಿರ್ಮಿಸಿರುವ 'ರೋಮಾಂಚಕಂ' ಚಿತ್ರದ ಪ್ರಚಾರದ ವೇಳೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರು ಸ್ವಾಭಾವಿಕವಾಗಿ ಅವರ ಮುಂಬರುವ ಬಿಗ್ ಬಜೆಟ್ ಸಿನಿಮಾ 'ಸ್ಪಿರಿಟ್' (Spirit) ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು. ಈ ಸಂದರ್ಭದಲ್ಲಿ ಅವರು ಭಾರತೀಯ ಚಿತ್ರರಂಗದ ದೈತ್ಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ 'ವಾರಣಾಸಿ' ಚಿತ್ರದ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.

"ನನ್ನ ಸ್ಪಿರಿಟ್ ಚಿತ್ರಕ್ಕಿಂತಲೂ ರಾಜಮೌಳಿ ಅವರ ವಾರಣಾಸಿ ಸಿನಿಮಾ ದೊಡ್ಡದು" ಎಂದು ಸಂದೀಪ್ ವಂಗಾ ಸನ್ನೆ ಮಾಡುವ ಮೂಲಕ ಸಿನಿರಂಗದಲ್ಲಿ ಗೌರವ ಮತ್ತು ಕುತೂಹಲ ಎರಡನ್ನೂ ಒಟ್ಟಿಗೇ ಸೃಷ್ಟಿಸಿದ್ದಾರೆ. ಇಬ್ಬರು ದೊಡ್ಡ ನಟರ (ಪ್ರಭಾಸ್ ಮತ್ತು ಮಹೇಶ್ ಬಾಬು) ಸಿನಿಮಾಗಳು ಅಕ್ಕಪಕ್ಕದಲ್ಲೇ ಬಿಡುಗಡೆಯಾಗುತ್ತಿರುವ ಹೊತ್ತಲ್ಲಿ ವಂಗಾ ಅವರ ಈ ಮುಕ್ತ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

2027ಕ್ಕೆ ಬಾಕ್ಸ್ ಆಫೀಸ್ ಧಮಾಕಾ!

ಈ ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಅವರು ಬಹುನಿರೀಕ್ಷಿತ 'ಸ್ಪಿರಿಟ್' ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರ 2027ರ ಮಾರ್ಚ್ 5ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಇನ್ನು ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಅವರ ಅಡ್ವೆಂಚರ್ ಸಿನಿಮಾ 'ವಾರಣಾಸಿ' ಏಪ್ರಿಲ್ 7, 2027ಕ್ಕೆ ಬಿಡುಗಡೆಯಾಗಲಿದೆ. ಅಂದರೆ, ಕೇವಲ ಒಂದು ತಿಂಗಳ ಅಂತರದಲ್ಲಿ ಇಂಡಿಯನ್ ಸಿನೆಮಾ ಇತಿಹಾಸದ ಎರಡು ಬಿಗ್‌ ಬಜೆಟ್ ಸಿನಿಮಾಗಳು ಮುಖಾಮುಖಿಯಾಗಲಿವೆ!

ಸೆನ್ಸಾರ್ ಬಗ್ಗೆ ವಂಗಾ ಅವರ ಖಡಕ್ ಭವಿಷ್ಯ!

ಸಂದೀಪ್ ರೆಡ್ಡಿ ವಂಗಾ ಸಿನಿಮಾಗಳೆಂದರೆ ಅಲ್ಲಿ ವೈಲೆನ್ಸ್ ಮತ್ತು ಎಮೋಷನ್ಸ್ ತುಸು ಜೋರಾಗಿಯೇ ಇರುತ್ತದೆ. ಈ ಬಗ್ಗೆ ಮಾತನಾಡಿದ ಅವರು, "ನಾವು ಎಷ್ಟೇ ಪ್ರಯತ್ನಿಸಿದರೂ 'ಸ್ಪಿರಿಟ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು 'ಎ' (Adults Only) ಸರ್ಟಿಫಿಕೇಟ್ ನೀಡುವುದು ಖಚಿತ" ಎಂದು ನಗುತ್ತಲೇ ಹೇಳಿದರು. ಈಗಾಗಲೇ ಚಿತ್ರದ ಶೇ.50 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಭಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ವಂಗಾ ಶೈಲಿಯ ರಗಡ್ ಲುಕ್‌ನಲ್ಲಿ ನೋಡಲು ಕಾತರರಾಗಿದ್ದಾರೆ.

ತಾರಾಗಣದ ಅಬ್ಬರ:

'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಜೊತೆಗೆ 'ಅನಿಮಲ್' ಸುಂದರಿ ತ್ರಿಪ್ತಿ ಡಿಮ್ರಿ ಮತ್ತು ಬಾಲಿವುಡ್ ನಟ ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕೊರಿಯನ್ ಆಕ್ಷನ್ ಸ್ಟಾರ್ ಡಾನ್ ಲೀ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಫ್ಯಾನ್ಸ್ ನಿದ್ದೆಗೆಡಿಸಿವೆ.

ಇನ್ನೊಂದೆಡೆ ರಾಜಮೌಳಿಯವರ 'ವಾರಣಾಸಿ' ಚಿತ್ರದಲ್ಲಿ ಮಹೇಶ್ ಬಾಬು ಅವರಿಗೆ ಜೋಡಿಯಾಗಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ.

ಒಟ್ಟಿನಲ್ಲಿ 2027ರ ವರ್ಷವು ಭಾರತೀಯ ಚಿತ್ರರಂಗಕ್ಕೆ ಹಬ್ಬದಂತಿರಲಿದ್ದು, ಸಂದೀಪ್ ರೆಡ್ಡಿ ವಂಗಾ ಅವರ ಈ ಪ್ರಾಮಾಣಿಕ ಮಾತುಗಳು ಸಿನಿರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಸ್ಪಿರಿಟ್ ವರ್ಸಸ್ ವಾರಣಾಸಿ - ಈ ಜಿದ್ದಾಜಿದ್ದಿಯಲ್ಲಿ ಗೆಲುವು ಯಾರದ್ದು ಎಂಬುದನ್ನು ಕಾದು ನೋಡಬೇಕಿದೆ!

ಚಿತ್ರದ ಮುಖ್ಯ ತಾರಾಗಣ: ಸುಮಂತ್ ಪ್ರಭಾಸ್ (Sumanth Prabhas) ಅನಂತಿಕಾ ಸನಿಲ್ ಕುಮಾರ್ (Ananthika Sanilkumar)

ಉಪೇಂದ್ರ ಲಿಮಾಯೆ (Upendra Limaye)ವೆಂಕಟೇಶ್ ಕಾಕುಮನು (Venkatesh Kakumanu)ನರೇಂದ್ರ ರವಿ (Narendra Ravi)ಮಣಿ ಏಗೂರ್ಲ (Mani Aegurla)ಸಾಯಿ ಸೊಹಾನ್ (Sai Sohan)

ನಿರ್ದೇಶನ: ವೇಣು ಗೋಪಾಲ್ ರೆಡ್ಡಿ (Venu Gopal Reddy)

ನಿರ್ಮಾಪಕರು: ಪ್ರಣಯ್ ರೆಡ್ಡಿ ವಂಗಾ (Pranay Reddy Vanga)

ಪ್ರಸ್ತುತಪಡಿಸುತ್ತಿರುವವರು: ಸಂದೀಪ್ ರೆಡ್ಡಿ ವಂಗಾ (Sandeep Reddy Vanga)

ಬ್ಯಾನರ್: ಭದ್ರಕಾಳಿ ಪಿಕ್ಚರ್ಸ್ (Bhadrakali Pictures)

ಬಿಡುಗಡೆ ದಿನಾಂಕ: 05 ಮಾರ್ಚ್2027

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kichch Sudeep: 'ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ' ಎಂದು ಕಿಚ್ಚ ಸುದೀಪ್ ಪೋಸ್ಟ್.. ಕಾರಣವೇನು ಗೊತ್ತಾ?
'ಸ್ಯಾಂಡಲ್‌ವುಡ್ ಶೈನಿಂಗ್' ಸೆಷನ್‌ನಲ್ಲಿ ಸಪ್ತಮಿ ಗೌಡ ಹೇಳಿದ್ದೇನು? 'ಪ್ಯಾನ್ ಇಂಡಿಯಾ ಸಿನಿಮಾ' ಸೀಕ್ರೆಟ್ ತೆರೆದಿಟ್ಟ ನಟಿ!