ಎಲ್ಲೆಲ್ಲೂ ಸಂಗೀತವೇ... ಮಾಗದ ನೋವಿಗೆ ಮದ್ದಾಗುವ ಸಂಗೀತದ ಬಗ್ಗೆ ದಿಗ್ಗಜರ ಮಾತಿದು

By Anusha KbFirst Published Jun 21, 2022, 12:36 PM IST
Highlights

ಸಂಗೀತವೆಂಬುದು ಮಾಗದ ಗಾಯಕ್ಕೆ ಸಾಂತ್ವನದ ಮಳೆ ಸುರಿಸುವ ಒಂದು ಅದ್ಭುತ ಔಷಧಿ. ಹಲವು ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಸಂಗೀತಕ್ಕೂ ಒಂದು ದಿನವಿದೆ. ಪ್ರತಿ ವರ್ಷ ಜೂನ್‌ 21 ರಂದು ವಿಶ್ವ ಸಂಗೀತ ದಿನವನ್ನಾಗಿ ಆಚರಿಸಲಾಗುತ್ತದೆ. 

ಮುಂಬೈ: ಸಂಗೀತವೆಂಬುದು ಮಾಗದ ಗಾಯಕ್ಕೆ ಸಾಂತ್ವನದ ಮಳೆ ಸುರಿಸುವ ಒಂದು ಅದ್ಭುತ ಔಷಧಿ. ಹಲವು ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಸಂಗೀತಕ್ಕೂ ಒಂದು ದಿನವಿದೆ. ಪ್ರತಿ ವರ್ಷ ಜೂನ್‌ 21 ರಂದು ವಿಶ್ವ ಸಂಗೀತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಸಂಭ್ರಮದಿಂದ ಆಚರಿಸಲು ವಿಶ್ವದಾದ್ಯಂತ ಹಲವು ಗಾಯಕರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರಿಗೆ ಸಂಗೀತದಿಂದಾಗುವ ಖುಷಿಯ ಬಗ್ಗೆ ಮತ್ತು ಕೆಲವು ಸಂಗೀತ ಕಲಾವಿದರು ವಿಶ್ವ ಸಂಗೀತ ದಿನದಂದು ಅವರಿಗೆ ಸಂಗೀತ ಎಷ್ಟು ಮುಖ್ಯ ಎಂಬ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 


ಸೋನು ನಿಗಮ್ 
ನಾನು ವಿಶ್ವ ಸಂಗೀತ ದಿನದ ಬಗ್ಗೆ ಯಾವತ್ತು ಯೋಚಿಸುವುದಿಲ್ಲ. ಏಕೆಂದರೆ ನನ್ನ ಸಂಪೂರ್ಣ ಜೀವನವನ್ನೇ ಸಂಗೀತಕ್ಕೆ ಮುಡುಪಾಗಿಟ್ಟಿದ್ದೇನೆ. ನಾನಿದ್ದ ಕಡೆ ಸಂಗೀತ ಇರುತ್ತದೆ. ಆದ್ದರಿಂದ ಬರೀ ಒಂದು ದಿನವನ್ನು ಸಂಗೀತಾಕ್ಕೆ ಮೀಸಲಿಟ್ಟರೇ ಏನು ಅರ್ಥ ಎಂದು ಸೋನು ನಿಗಮ್‌ (sonu nigam) ಹೇಳಿದ್ದಾರೆ.

ಕವಿತಾ ಸೇಠ್

ಇಂದು ವಿಶ್ವ ಸಂಗೀತ ದಿನ, ನನಗೆ ಸಂಗೀತವೇ ಜಗತ್ತು. ಜಗತ್ತಿನಲ್ಲಿ ಸುಖ,ಶಾಂತಿ ಮತ್ತು ನೆಮ್ಮದಿ ಏನಾದರೂ ಇದ್ದರೆ ಅದು ಸಂಗೀತದಿಂದ ಮಾತ್ರ ಕಾಣಲು ಸಾಧ್ಯ ಖ್ಯಾತ ಗಾಯಕಿ ಕವಿತಾ ಸೇಠ್ (Kavita Seth) ಹೇಳಿದ್ದಾರೆ.

World Music Day 2022: ಸಂಗೀತವೆಂಬ ಸಾಂತ್ವನದ ಸೆಲೆ, ಮಾನಸಿಕ ಆರೋಗ್ಯಕ್ಕಿದು ಅತ್ಯುತ್ತಮ
 

ತಲತ್ ಅಜೀಜ್
ವರ್ಷದ ಪ್ರತಿ ಈ ದಿನವನ್ನು ಸಂಗೀತ ದಿನ ಎಂದು ನಾನು ನಂಬಿದ್ದೇನೆ . ನೋವು ಗುಣಪಡಿಸುವ ಮತ್ತು ಆರಾಮಗೊಳಿಸುವ ಶಕ್ತಿಯನ್ನು ಸಂಗೀತ ಮಾತ್ರ ಹೊಂದಿದೆ ಮತ್ತು ಇಂದಿನ ಒತ್ತಡದ ಸಮಯದಲ್ಲಿ, ಇದು ಹೆಚ್ಚು ಅವಶ್ಯಕವಾಗಿದೆ ಎಂದು ಗಾಯಕ ತಲತ್ ಅಜೀಜ್ (Talat Aziz)ಹೇಳುತ್ತಾರೆ.

ದಿವ್ಯ ಕುಮಾರ್
ನಾವು ಕಲಾವಿದರು, ನಮ್ಮ ಜೀವನದಲ್ಲಿ ಪ್ರತಿದಿನ ಸಂಗೀತವನ್ನು ಆನಂದಿಸುತ್ತೇವೆ. ಆದ್ದರಿಂದ, ಪ್ರತಿದಿನ ನಮಗೆ ಸಂಗೀತದ ದಿನವಾಗಿದೆ. ಸಂಗೀತವು ಜಗತ್ತಿನಲ್ಲಿ ಯಾವುದೇ ತಿಳಿದಿಲ್ಲದ ವಿಷಯವನ್ನು ತಿಳಿಸುವ ಏಕೈಕ ಭಾಷೆಯಾಗಿದೆ. ಇಂದಿನ ಕಾಲದಲ್ಲಿ ಸಂಗೀತಕ್ಕೆ ಪ್ರಪಂಚದ ಪ್ರತಿಯೊಂದು ಒತ್ತಡವನ್ನು ಗುಣಪಡಿಸುವ ಶಕ್ತಿಯಿದೆ ಎಂದು ನಾನು ಭಾವಿಸುತ್ತೇವೆ ಎಂದು ಹೇಳುತ್ತಾರೆ ಗಾಯಕಿ ದಿವ್ಯ ಕುಮಾರ್ (Divya Kumar)


ಪ್ರತಿದಿನವು ನನಗೆ ಸಂಗೀತ ದಿನ. ಆದರೆ ಒಂದು ನಿರ್ದಿಷ್ಟ ದಿನವನ್ನು ವಿಶ್ವ ಸಂಗೀತ ದಿನವನ್ನಾಗಿ ಆಚರಿಸುವುದು ಉತ್ತಮ ವಿಚಾರವೇ. ಏಕೆಂದರೆ ಸಂಗೀತ ಪ್ರಪಂಚದಾದ್ಯಂತ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಹೇಳಲು ಸಹಾಯ ಮಾಡುತ್ತದೆ ಮತ್ತು ಇದು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮೊಹಮ್ಮದ್ ಇರ್ಫಾನ್ (Mohammad Irfan) ಹೇಳುತ್ತಾರೆ. 

ಸೋನಮ್‌ ಕಪೂರ್ ಬೇಬಿ ಶವರ್‌ನಲ್ಲಿ ಸಂಗೀತಗಾರ ಲಿಯೋ ಕಲ್ಯಾಣ್ ಲುಕ್‌ ಟ್ರೋಲ್‌!
 

ನನಗೆ ಜೂನ್‌ 21 ಒಂದು ವಿಶೇಷ ದಿನ, ಅದನ್ನು ಗೌರವಿಸುವ ಮೂಲಕ ಆಚರಿಸುವುದು ಅದ್ಭುತವಾಗಿದೆ, ಸಂಗೀತವೇ ನನ್ನ ಪ್ರಾಣ ಮತ್ತು ಮಾನ. ನಾನು ವರ್ಷದ ಎಲ್ಲಾ ದಿನಗಳಲ್ಲಿ ನನ್ನ ಕಲೆಯನ್ನು ಆಚರಿಸುತ್ತೇನೆ, ಪ್ರಶಂಸಿಸುತ್ತೇನೆ ಮತ್ತು ಗೌರವಿಸುತ್ತೇನೆ. ಇಡೀ ಜಗತ್ತೇ ಸಂಗೀತವನ್ನು ಹಬ್ಬದಂತೆ ಆಚರಿಸುವುದನ್ನು ನೋಡಲು ಸಂತೋಷವಾಗಿದೆ. ಆದರೆ ಕಲಾವಿದಳಾಗಿ, ಪ್ರತಿದಿನ ನನ್ನ ಜೀವನದಲ್ಲಿ ಸಂಗೀತವನ್ನು ಹೊಂದಲು ನಾನು ಆಭಾರಿಯಾಗಿದ್ದೇನೆ ಅಂತಾರೆ ಗಾಯಕಿ ಅನುಷಾ ಮಣಿ (Anusha Mani)

ಆಕೃತಿ ಕಕ್ಕರ
ಸಂಗೀತವು ನನ್ನ ಜೀವನ ವಿಧಾನವಾಗಿದೆ. ನಾನು ನನ್ನ ಮೂರನೇ ವಯಸ್ಸಿನಿಂದಲೂ ಸಂಗೀತವನ್ನು ನಿರಂತರವಾಗಿ ಅಭ್ಯಾಸ ಮಾಡಿದ್ದೇನೆ ನನ್ನ ಅತ್ಯಂತ ನೈಸರ್ಗಿಕ ಸಂಬಂಧ ಈ ಸಂಗೀತಾ. ಸಂಗೀತಕ್ಕಾಗಿ ಕೇವಲ ಒಂದು ದಿನವನ್ನು ಮೀಸಲಿಡುವುದು ಮತ್ತು ಒಂದೇ ದಿನವನ್ನು ಆಯ್ಕೆ ಮಾಡುವುದು ನನಗೆ ವಿಚಿತ್ರವೆನಿಸುತ್ತದೆ, ಉತ್ತಮ ಗುಣಮಟ್ಟದ ಸಂಗೀತವನ್ನು ರಚಿಸುವುದೇ ನನ್ನ ಪ್ರತಿದಿನದ ಕನಸಾಗಿದೆ ಅಂತಾರೆ ಆಕೃತಿ ಕಕ್ಕರ್ (Akriti Kakar)

ಜಾವೇದ್ ಖಾನ್
ಸಂಗೀತವೇ ನನ್ನ ಜೀವನ , ಸಂಗೀತವೇ ನನ್ನ ಆತ್ಮ. ಅದಕ್ಕೆ ಯಾವುದೇ ಗಡಿಯ ಅಂತರವಿಲ್ಲ , ದೇಶ ಅಥವಾ ಧರ್ಮವಿಲ್ಲ. ಜಾತಿ ಮತ ಪಂಥಗಳ ಭೇಧ ಭಾವ ಇಲ್ಲ,ಇದು ಸಾರ್ವತ್ರಿಕವಾಗಿದೆ ಎಂದು ನಾನು ನಂಬಿದ್ದೇನೆ. ಹಾಗಾಗಿ ನನಗೆ ಪ್ರತಿದಿನವೂ ಸಂಗೀತದ ದಿನವೇ ಆಗಿದೆ ಎಂದು ಖ್ಯಾತ ಗಾಯಕ ಜಾವೇದ್ ಖಾನ್ (Javed Khan) ಹೇಳಿದ್ದಾರೆ. 

ಮೊಹ್ಸಿನ್ ಶೇಖ್(Mohsin Shaikh)
ಸಂಗೀತ ಎಂದರೆ ನನಗೆ ಜಗತ್ತು. ಸಂಗೀತ ಒಂದಿದ್ದರೆ ನನಗೆ ಏನು ಬೇಡ, ಸಂಗೀತಗಾರನಾಗಿರುವುದರಿಂದ ಸಂಗೀತವು ನನ್ನ ಭಾವನೆಗಳಿಗೆ ಪ್ರೋತ್ಸಾಹಿಸುತ್ತದೆ ಮತ್ತು ನನಗೆ ಶಕ್ತಿಯನ್ನು ನೀಡುತ್ತದೆ. ಇದು ನನಗೆ ಚಿಕಿತ್ಸೆ ಇದ್ದಂತೆ, ಅಭಿವ್ಯಕ್ತಿ ಮತ್ತು ಉತ್ಸಾಹ ತುಂಬುವ ಶಕ್ತಿ ಸಂಗೀತಕ್ಕಿದೆ. ಸಂಗೀತವಿಲ್ಲದೆ ನನ್ನ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿದಿನವು ನಾನು ಸಂಗೀತವನ್ನು ಆರಾಧಿಸುತ್ತೇನೆ ಎಂದರು.

ಅಸೀಸ್ ಕೌರ್
ಸಂಗೀತವಿಲ್ಲದೆ ನನ್ನ ಮುಂಜಾನೆಯ ಸಮಯ ವ್ಯರ್ಥವೆನಿಸುತ್ತದೆ ಮತ್ತು ನನ್ನ ರಾತ್ರಿಗಳು ಕೂಡ ಅಪೂರ್ಣವಾಗುತ್ತವೆ. ಸಂಗೀತವೇ ನನ್ನ ಮೂಲ ಶಕ್ತಿ. ಸಂಗೀತವನ್ನು ಪ್ರತಿಯೊಬ್ಬರೂ ಪ್ರತಿದಿನ ವಿವಿಧ ರೂಪಗಳಲ್ಲಿ ಆಚರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅದು ನಿಮ್ಮ ದಿನವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಬಹುದು ಅಥವಾ ಜೋಗುಳದೊಂದಿಗೆ ಕೊನೆಗೊಳ್ಳಬಹುದು. ಆದ್ದರಿಂದ ಪ್ರತಿದಿನ ಸಂಗೀತ ದಿನಾಚರಣೆಯೇ ಎಂದು ಅಸೀಸ್ ಕೌರ್ (Asees Kaur) ಅವರು ಹೇಳಿದ್ದಾರೆ .
 

click me!