ಅಂಬಾರಿ ಅಲ್ಲ ಇದು ಸ್ಕೂಟರ್... ಕ್ರಿಯೇಟಿವಿಟಿಗೆ ಬೆರಗಾದ ಆನಂದ್ ಮಹೀಂದ್ರಾ

Published : Jun 19, 2022, 09:58 AM ISTUpdated : Jun 19, 2022, 10:03 AM IST
ಅಂಬಾರಿ ಅಲ್ಲ ಇದು ಸ್ಕೂಟರ್... ಕ್ರಿಯೇಟಿವಿಟಿಗೆ ಬೆರಗಾದ ಆನಂದ್ ಮಹೀಂದ್ರಾ

ಸಾರಾಂಶ

ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ಸೃಜನಾತ್ಮಕ ಪ್ರತಿಭೆಗಳಿಗೆ ಸದಾ ಪ್ರತಿಕ್ರಿಯಿಸುತ್ತಿರುತ್ತಾರೆ. ಹಲವು ಕ್ರಿಯೇಟಿವಿಟಿಯ ವಿಡಿಯೋಗಳನ್ನು ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡುತ್ತಾ ಜೀವನಾನುಭವದ ಬಗ್ಗೆ ಅವರು ತಮ್ಮ ಮಾತನ್ನು ಹೇಳುತ್ತಿರುತ್ತಾರೆ.

ಮುಂಬೈ: ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ಸೃಜನಾತ್ಮಕ ಪ್ರತಿಭೆಗಳಿಗೆ ಸದಾ ಪ್ರತಿಕ್ರಿಯಿಸುತ್ತಿರುತ್ತಾರೆ. ಹಲವು ಕ್ರಿಯೇಟಿವಿಟಿಯ ವಿಡಿಯೋಗಳನ್ನು ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡುತ್ತಾ ಜೀವನಾನುಭವದ ಬಗ್ಗೆ ಅವರು ತಮ್ಮ ಮಾತನ್ನು ಹೇಳುತ್ತಿರುತ್ತಾರೆ. ಆನಂದ್ ಮಹೀಂದ್ರಾ ಅವರು ಶೇರ್ ಮಾಡಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅಲ್ಲದೇ ಆನಂದ್ ಮಹೀಂದ್ರ ಬಡತನದಲ್ಲಿ ಅರಳಿದ ಅವಕಾಶ ಸಿಗದ ಹಲವು ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಸಹಾಯ ಮಾಡುವ ಮೂಲಕ ಅನೇಕರಿಗೆ ನೆರವಾಗಿದ್ದಾರೆ. 

ಹಾಗೆಯೇ ಈಗ ಆನಂದ್ ಮಹೀಂದ್ರಾ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇಂತಹ ಕ್ರಿಯೇಟಿವಿಟಿ ಭಾರತದಲ್ಲಿ ಮಾತ್ರ ಸಾಧ್ಯ ಎಂದು ಬರೆದುಕೊಂಡಿದ್ದಾರೆ. ಶೇರ್ ಮಾಡಿರುವ ವಿಡಿಯೋದಲ್ಲಿ ಒಂದು ಸ್ಕೂಟರ್ ಇದೆ. ಅದು ಅಂತಿಂಥಾ ಸ್ಕೂಟರ್ ಅಲ್ಲ. ಅದನ್ನು ಮಧುವಣಗಿತ್ತಿಯಂತೆ ಶೃಂಗರಿಸಲಾಗಿದೆ. ಶೃಂಗಾರದಿಂದಾಗಿ ಇದು ದಸರಾದ ಅಂಬಾರಿಯಂತೆ ಕಾಣಿಸುತ್ತಿದೆ. ಸ್ಕೂಟರ್‌ನ ಎಲ್ಲಿಯೂ ಖಾಲಿ ಜಾಗವಿಲ್ಲ. ಎಲ್ಲೆಡೆ ಆರ್ಟಿಫಿಶಿಯಲ್‌ ಜ್ಯುವೆಲ್ಲರಿ ಲೈಟಿಂಗ್ಸ್‌ನಿಂದ ಶೃಂಗರಿಸಲಾಗಿದೆ. ಅಲ್ಲದೇ ಇದರ ಕುಳಿತುಕೊಳ್ಳುವ ಆಸನ ಮಾಮೂಲಿ ಆಸನವಲ್ಲ. ಮದುವೆಯಲ್ಲಿ ವಧುವರರು ಕುಳಿತುಕೊಳ್ಳುವ ಅದ್ದೂರಿ ಚೇರ್‌ನಂತೆ ಇದು ಇದೆ.

ಶೃಂಗೇರಿ ದೇವಸ್ಥಾನದಲ್ಲಿ ತಟ್ಟೆಗಳನ್ನು ಜೋಡಿಸಿರುವ ಆಕರ್ಷಕ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ
 

ಹ್ಯಾಂಡಲ್‌ಗಳ ಮಧ್ಯೆ ಇರುವ ಜಾಗದಲ್ಲಿ ಸಣ್ಣದಾದ ಎಲ್‌ಇಡಿ ಟಿವಿಯಂತೆ ಕಾಣುವ ಸ್ಕೀನ್ ಇದ್ದು, ಅದರಲ್ಲಿ ಸಿನಿಮಾ ಗೀತೆಗಳು ಪ್ಲೇ ಆಗುತ್ತಿದೆ. ಒಟ್ಟಿನಲ್ಲಿ ಭಾರಿ ಶೃಂಗಾರದ ಜೊತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ಈ ಸ್ಕೂಟರ್‌ನಲ್ಲಿ ಇದೆ. ಇದು ಸಂಪ್ರದಾಯಿಕತೆಯ ಜೊತೆ ಅಧುನಿಕತೆಯ ಟಚ್‌ ಪಡೆದ ಫ್ಯಾಷನ್‌ನಂತೆ ಇದು ಕಾಣಿಸುತ್ತಿದೆ. ಈ ಸ್ಕೂಟರ್ ಅನ್ನು ಪೆಟ್ರೋಲ್ ಪಂಪ್‌ನಲ್ಲಿ ನಿಲ್ಲಿಸಲಾಗಿತ್ತು. ಇದರ ಎರಡು ಹ್ಯಾಂಡಲ್‌ಗಳ ನಡುವಿನ ಜಾಗದಲ್ಲಿ ಅಂಟಿಸಿದ್ದ ಫೋನ್ ಅಥವಾ ಎಲ್‌ಇಡಿ ಪರದೆಯಲ್ಲಿ ರಾಜೇಶ್ ಖನ್ನಾ ಸಿನಿಮಾದ ' ಚುಪ್ ಗಯೇ ಸಾರೆ ನಜರೆ' ಹಾಡು ಕೇಳಿ ಬರುತ್ತಿತ್ತು ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಜೀವನವು ನೀವು ಬಯಸಿದಷ್ಟು ವರ್ಣರಂಜಿತ ಮತ್ತು ಮನರಂಜನೆಯಿಂದ ಕೂಡಿರಬಹುದು ಎಂದು ಬರೆದು ಕೊನೆಯಲ್ಲಿ #OnlyinIndia ಎಂದು ಆನಂದ್ ಮಹೀಂದ್ರ ಬರೆದಿದ್ದಾರೆ.

ದೇವರ ನಾಡಲ್ಲಿ ಕಣ್ಮನ ಸೆಳೆಯುತ್ತಿದೆ ಪಿಂಕ್ ನದಿ, ನಿಸರ್ಗ ರಮಣೀಯತೆಗೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ 

ಪೋಷಕರು (Parents) ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವುದು ಹೇಗೆ ಮುಖ್ಯವೋ ಹಾಗೆಯೇ ಮಕ್ಕಳು (Children) ಸಹ ತಮ್ಮ ಪೋಷಕರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಆದರೆ ಇವತ್ತಿನ ಮಕ್ಕಳು ಪೋಷಕರನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆಂಬುದು ಹೆಚ್ಚುತ್ತಿರುವ ವೃದ್ಧಾಶ್ರಮಗಳನ್ನು ನೋಡುವಾಗ್ಲೇ ಗೊತ್ತಾಗುತ್ತದೆ. ಮಕ್ಕಳಿಗೆ ಪೋಷಕರ ಮೇಲಿರುವ ಪ್ರೀತಿ, ವಾತ್ಸಲ್ಯ, ಬಂಧವೇ ಸಂಪೂರ್ಣ ಕಡಿಮೆಯಾಗಿದೆ. ಹೆಚ್ಚಿನ ಮಕ್ಕಳು ಪೋಷಕರನ್ನು ಕೇವಲ ಸೋರ್ಸ್‌ ಆಫ್‌ ಮನಿಯಂತೆ ನೋಡುತ್ತಾರೆ. ತಮಗೆ ಬೇಕಾಗದಲ್ಲೆಲ್ಲಾ ಅಪ್ಪ-ಅಮ್ಮನಿಂದ ಬೇಕಾದ್ದನ್ನೆಲ್ಲಾ ಕೊಡಿಸಿಕೊಳ್ಳುತ್ತಾರೆ. ಕೇಳಿದ್ದನ್ನೆಲ್ಲಾ ಕೊಡಿಸದಿದ್ದರೆ ರೇಗಾಡುತ್ತಾರೆ, ಕಿರುಚಾಡುತ್ತಾರೆ. ಹೀಗಿರುವಾಗ್ಲೇ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಯುವಜನತೆ (Youth) ಪೋಷಕರ ಜೊತೆ ಹೇಗಿರಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. 

ಪೋಷಕರು ತಮ್ಮ ಮಕ್ಕಳ ಬಗ್ಗೆ ಅರ್ಥ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಹಾಗೆಯೇ ಮಕ್ಕಳು ಸಹ ಪೋಷಕರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಪುಟ್ಟ ಮಕ್ಕಳೇನೋ ಪೋಷಕರ ಜೊತೆ ಪ್ರೀತಿಯಿಂದ ವರ್ತಿಸುತ್ತಾರೆ. ಆದರೆ, ಯುವಜನತೆಯಂತೂ ತಮ್ಮ ಪೋಷಕರ ಮೇಲೆ ಸಣ್ಣಪುಟ್ಟ ವಿಚಾರಕ್ಕೆ ರೇಗಾಡೋದೆ ಜಾಸ್ತಿ. ಹೀಗೆ ಮಾಡೋದ್ರಿಂದ ಮಕ್ಕಳು ಮತ್ತು ಪೊಷಕರ ನಡುವಿನ ಅನುಬಂಧವೇ ಕಡಿಮೆಯಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!