ಮಕ್ಕಳೊಂದಿಗೆ ಶಿಕ್ಷಕಿಯ ಮಸ್ತ್ ಡಾನ್ಸ್‌, ವಿಡಿಯೋ ವೈರಲ್‌

By Suvarna NewsFirst Published Jun 18, 2022, 12:47 PM IST
Highlights

ಶಿಕ್ಷಕಿಯೊಬ್ಬರು ಶಾಲೆಯ ಸಮ್ಮರ್‌ ಕ್ಯಾಂಪ್‌ನಲ್ಲಿ ತನ್ನ  ಮಕ್ಕಳೊಂದಿಗೆ ಸೇರಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರು ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದಾರಿ ತೋರುವ ಗುರುವಿನ ಬಗ್ಗೆ ಮಕ್ಕಳು ಅಷ್ಟೇ  ಗೌರವ ಹೊಂದಿರುತ್ತಾರೆ. ಚಿಕ್ಕ ಮಕ್ಕಳಂತೂ ಶಿಕ್ಷಕರ ಹೊರತಾಗಿ ಯಾರ ಮಾತನ್ನು ಕೇಳಲು ಸಿದ್ಧರಿರುವುದಿಲ್ಲ. ಅಷ್ಟರ ಮಟ್ಟಿಗೆ ಶಿಕ್ಷಕರ ಪ್ರಭಾವ ಮಕ್ಕಳ ಬದುಕಿನಲ್ಲಾಗುತ್ತದೆ. ಅರ್ಥವಾಗುವಂತೆ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಹೇಳುವುದು ಒಂದು ವಿಶಿಷ್ಠವಾದ ಕಲೆ. ಎಲ್ಲಾ ಶಿಕ್ಷಕರಿಗೆ ಅದೂ ಸಾಧ್ಯವಾಗದು. ಕೆಲ ದಿನಗಳ ಹಿಂದೆ ಶಿಕ್ಷಕರೊಬ್ಬರು ಡಾನ್ಸ್ ಮಾಡುತ್ತಾ ಹಾಡುತ್ತಾ ಬೇಸಿಗೆಯಲ್ಲಿ ಬಿಸಿಲನ ಧಗೆಯಿಂದ ಪಾರಾಗುವುದು ಹೇಗೆ ಎಂಬುದನ್ನು ಹೇಳಿ ಕೊಟ್ಟಿದ್ದರು. ಅದೇ ರೀತಿ ಈಗ ಶಿಕ್ಷಕರೊಬ್ಬರು ಇಲ್ಲಿ ಪಾಠ ಮಾಡಿಲ್ಲ ಆದರೆ ಮಕ್ಕಳ ಜೊತೆಗೆ ಸೇರಿ ಡಾನ್ಸ್ ಮಾಡಿದ್ದಾರೆ. ಶಿಕ್ಷಕಿ ಹಾಗೂ ಮಕ್ಕಳು ಒಟ್ಟಿಗೆ ಸೇರಿ ಮಾಡಿದ ಡಾನ್ಸ್‌ನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಶಾಲಾ ಶಿಕ್ಷಕಿ ಮನು ಗುಲಾಟಿ ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬೇಸಿಗೆ ಶಿಬಿರದ ಕೊನೆ ದಿನ ನಮ್ಮ ಅಪರಿಪೂರ್ಣ ಡಾನ್ಸ್. ಕೆಲವು ಪರಿಪೂರ್ಣವಾದ ಖುಷಿಯ ಜೊತೆಗಿನ ಸುಂದರವಾದ ಕ್ಷಣ ಎಂದು ಬರೆದು ಅವರು ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಹಿಂದಿ ಸಿನಿಮಾವೊಂದರ ಝುಮ್ಕಾ ಬರೇಲಿ ವಾಲಾ ಹಾಡಿಗೆ ಶಿಕ್ಷಕಿ ಹಾಗೂ ಮಕ್ಕಳು ಜೊತೆಯಾಗಿ ಡಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಐದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಡಾನ್ಸ್‌ಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

दिल्ली शहर का सारा मीना बाज़ार ले के।☺️

Our imperfect dance moves on the last day of summer camp...leading to some perfect moments of joy and togetherness.💕 pic.twitter.com/K50Zi1Qajf

— Manu Gulati (@ManuGulati11)


ಟೀಚರ್‌ ಬೆಲ್ಲಿ ಡಾನ್ಸ್‌ ವೈರಲ್‌... ಮನೆಗೆ ಕಳುಹಿಸಿದ ಶಾಲೆ : ಡಿವೋರ್ಸ್‌ ನೀಡಿದ ಗಂಡ  

ಕೆಲ ದಿನಗಳ ಹಿಂದೆ ಬಿಹಾರದ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಬಿಸಿಗಾಳಿಯ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಹಾಡು ಹಾಗೂ ಡಾನ್ಸ್ ಮಾಡುವ ಮೂಲಕ ತಿಳಿಸಲು  ಹೊರಟಿದ್ದು, ಶಿಕ್ಷಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಶಿಕ್ಷಕರೊಬ್ಬರು  ಮಕ್ಕಳಿಗೆ  ವಿಶಿಷ್ಟ ಮತ್ತು ಉಲ್ಲಾಸದ ರೀತಿಯಲ್ಲಿ ಬಿಸಿಲಿನಿಂದ ಪಾರಾಗುವ ಬಗೆಯನ್ನು ಹೇಳಿದ್ದರು. ಕಪ್ಪು ಹಲಗೆಯ ಮೇಲೆ ಹಿಂದಿಯಲ್ಲಿ ಬರೆಯಲಾದ 'ಲೂ' ಎಂಬ ಪದದೊಂದಿಗೆ ಶಿಕ್ಷಕರೊಬ್ಬರು ಶೈಕ್ಷಣಿಕ ಗೀತೆಯನ್ನು ಪಠಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನಿಜವಾದ ಸಿನಿಮಾ ಶೈಲಿಯಲ್ಲಿ, ಈ ಶಿಕ್ಷಕರು ಬಾಲಿವುಡ್ ಚಿತ್ರ 'ಕೂಲಿ ನಂ.-1' ನ 'ಜಬ್ ದಿಲ್ ನಾ ಲಗೇ ದಿಲ್ದಾರ್' ಹಾಡಿನ ಟ್ಯೂನ್‌ನಂತೆ ಮಕ್ಕಳಿಗೆ ರಂಜನೀಯವಾಗಿ ಹಾಡನ್ನು ಹಾಡುತ್ತಿದ್ದಾರೆ.

ನೋಟ್ಸ್‌ ಬರೀ ಎಂದ ಟೀಚರ್ ಜೊತೆ ಪುಟ್ಟ ಬಾಲಕನ ಜಗಳ : ವಿಡಿಯೋ ವೈರಲ್‌
 

ಶಿಕ್ಷಕ ತನ್ನ ಕುತ್ತಿಗೆಗೆ ಎರಡು ನೀರಿನ ಬಾಟಲಿಗಳನ್ನು ದಾರದಲ್ಲಿ ಕಟ್ಟಿ ಕುತ್ತಿಗೆಗೆ ಹಾಕಿಕೊಂಡಿದ್ದು, 'ಜಬ್ ಧೂಪ್ ರಹೇ ಖೂಬ್ ತೇಜ್, ತೋ ಬಹರ್ ನಾ ಜಾನಾ. ಖುದ್ ಕೋ ರಖನಾ ಘರ್ ಮೈ ಸಾಹೇಜ್ ಕಿ ಬಹರ್ ನ ಜಾನಾ' (ತುಂಬಾ ಬಿಸಿಲು ಇದ್ದಾಗ ಹೊರಗೆ ಹೋಗಬಾರದು ನಿಮ್ಮನ್ನು ನೀವು ಮನೆಯಲ್ಲೇ ಇರಿಸಿಕೊಳ್ಳಬೇಕು ಹೊರಗೆ ಹೋಗಬಾರದು) ಎಂದು ಅವರು ರಾಗವಾಗಿ ಹಾಡುತ್ತಿದ್ದಾರೆ.  ಶಿಕ್ಷಕನ ಹಾಡಿಗೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಖುಷಿ ಪಡುತ್ತಿದ್ದಾರೆ. 

click me!