ಪುಟ್ಟ ಮಕ್ಕಳ ತೊದಲು ನುಡಿ ಆಟ ಮುದ್ದಾಟ ತರಲೆಗಳು ಎಲ್ಲವೂ ಚಂದ. ಹೊಸದಾಗಿ ಒಂದೊಂದನ್ನು ಕಲಿಯುವ ಪುಟ್ಟ ಕಂದನಿಗೆ ಎಲ್ಲದರಲ್ಲೂ ಆಸಕ್ತಿ ಇರುವುದು ಅಲ್ಲದೇ ಎಲ್ಲದರಲ್ಲೂ ಹೊಸತನವನ್ನು ಕಾಣುವುದು. ತಮ್ಮ ಸುತ್ತಲು ನಡೆಯುವ ಪ್ರತಿಯೊಂದನ್ನು ನೋಡುವ ಮಗು ಅದನ್ನು ಅನುಕರಿಸಲು ಬಯಸುತ್ತದೆ. ಅಲ್ಲದೇ ಮುಗ್ಧ ಮನದಿಂದ ಎಲ್ಲವನ್ನು ಖುಷಿಯಾಗಿ ಅನುಭವಿಸುತ್ತದೆ. ಮಗುವಿನ ಹಾಗೆಯೇ ಇಲ್ಲೊಂದು ಮಗು ಮದುವೆಯೊಂದರಲ್ಲಿ ವಯೋಲಿನ್ ನುಡಿಸುತ್ತಿದ್ದವರನ್ನು ನೋಡುತ್ತಿದ್ದ ಮಗು ಅವರು ವಯೋಲಿನ್ ನುಡಿಸುವುದು ನಿಲ್ಲಿಸುತ್ತಿದ್ದಂತೆ ಅವರನ್ನು ಬಂದು ತಬ್ಬಿಕೊಳ್ಳುತ್ತದೆ. ಆಸ್ಟ್ರೇಲಿಯಾದ (Australia) ಸಿಡ್ನಿಯಲ್ಲಿ (Sydney) ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಮನೋರಂಜನಕಾರ್ತಿ ಹಾಗೂ ವಯೋಲಿನ್ ವಾದಕಿಯೂ ಆಗಿರುವ ಮೆಲಿಸ್ಸಾ ವೊಯಿಯಾಸ್ (Melissa Voyias) ಅವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಮೆಲಿಸ್ಸಾ ವೊಯಿಯಾಸ್ ಅವರು ಮದುವೆ ಸಮಾರಂಭವೊಂದರಲ್ಲಿ ತಮ್ಮ ಮೆಚ್ಚಿನ ಟ್ರಾಕ್ ಆದ Avicii ಟ್ರ್ಯಾಕ್‌ಗಳಲ್ಲಿ ಒಂದಾದ 'ವೇಕ್ ಮಿ ಅಪ್' ಅನ್ನು ವಯೋಲಿನ್‌ನಲ್ಲಿ ನುಡಿಸುತ್ತಿದ್ದರು. ಈ ವೇಳೆ ಪುಟ್ಟ ಹುಡುಗಿಯೊಬ್ಬಳು ಬದಿಯಲ್ಲಿ ನಿಂತು ತನ್ನನ್ನೇ ದಿಟ್ಟಿಸಿ ನೋಡುವುದನ್ನು ಅವರು ಗಮನಿಸಿದ್ದಾರೆ. ಈ ವೇಳೆ ಈಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ ಮಗು ಇವರು ವಯೋಲಿನ್ ವಾದನ ನಿಲ್ಲಿಸುತ್ತಿದ್ದಂತೆ ಅವರ ಬಳಿ ಓಡಿ ಬಂದು ಅವರನ್ನು ತಬ್ಬಿಕೊಳ್ಳುತ್ತದೆ.
ಸಾರಿ ಉಟ್ಟು ಕನ್ನಡಿ ಮುಂದೆ ಚಮಕ್ ಮಾಡ್ತಿರೋ ಪುಟಾಣಿ : ವಿಡಿಯೋ ವೈರಲ್
ಮುದ್ದಾದ ಪುಟ್ಟ ಸಭಿಕರನ್ನು ಪರಿಚಯಿಸುತ್ತಿದ್ದೇನೆ ಎಂದು ಬರೆದು ಅವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಹೃದಯವನ್ನು ಭಾವುಕವಾಗಿಸುವುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ನೋಡಿದ ಅತ್ಯಂತ ಸಿಹಿಯಾದ ವಿಡಿಯೋ ಇದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಆಟವು ಅವಳ ಪುಟ್ಟ ಆತ್ಮವನ್ನು ಮುಟ್ಟಿತು ಎಂದು ಮತ್ತೊಬ್ಬರು ಬರೆದಿದ್ದಾರೆ.
ಪಿಯಾನೋ ನುಡಿಸ್ತಿದ್ದಾನೆ ಆ್ಯಮಿ ಜಾಕ್ಸನ್‌ನ ಪುಟ್ಟ ಮಗ
ಕೆಲ ದಿನಗಳ ಹಿಂದೆ ಚೀನಾದಲ್ಲಿ ಮಕ್ಕಳ ಗುಂಪಿನಲ್ಲಿ ಡಾನ್ಸ್ ಮಾಡುತ್ತಿದ್ದ ಮಗುವೊಂದು ವೇದಿಕೆ ಮೇಲೆಯೇ ನಿದ್ದೆಗೆ ಜಾರಿದ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚೀನಾದ (China) ಚಾಂಗ್‌ಕಿಂಗ್‌ನಲ್ಲಿರುವ (Chongqing) ಶಿಶುವಿಹಾರದ (kindergarten) ವಿಡಿಯೋ ಇದಾಗಿದ್ದು, ಮೂರು ವರ್ಷದ ಬಾಲಕಿ, ಚಿಟ್ಟೆಯ ವೇಷಭೂಷಣವನ್ನು ಧರಿಸಿ ಗುಂಪು ನೃತ್ಯದಲ್ಲಿ ಭಾಗವಹಿಸಬೇಕಿತ್ತು. ಪುಟ್ಟ ಬಾಲೆಯೇನೋ ನೃತ್ಯ ಮಾಡಲು ವೇದಿಕೆಯೇನೋ ಏರಿದ್ದಳು. ಆದರೆ ನೃತ್ಯ ಶುರುವಾಗುವುದಕ್ಕೂ ಮೊದಲೇ ಆಕೆ ನಿದ್ದೆಗೆ ಜಾರಿದ್ದಾಳೆ. ಯಾಹೂ ನ್ಯೂಸ್ ಪ್ರಕಾರ, ಮಕ್ಕಳ ದಿನದ ಪ್ರದರ್ಶನದ ಸಮಯದಲ್ಲಿ ಈ ಪುಟ್ಟ ಬಾಲೆ ವೇದಿಕೆಯಲ್ಲಿ ನಿದ್ದೆಗೆ ಜಾರಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.