ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥರಿಗೆ ಅಭಿನಂದನೆ!

By Web Desk  |  First Published Aug 31, 2019, 10:06 AM IST

ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‌ ವಾದಕರಾದ ಪಂಡಿತ್‌ ರಾಜೀವ ತಾರಾನಾಥ ಅವರಿಗೆ 86 ತುಂಬಿದೆ. ಇದರ ಅಂಗವಾಗಿ ಪಂಡಿತ್‌ ರಾಜೀವ ತಾರಾನಾಥ ಅಭಿನಂದನಾ ಸಮಿತಿ ವತಿಯಿಂದ ಪಂ. ರಾಜೀವ ತಾರಾನಾಥರಿಗೆ ಅಭಿನಂದನೆ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.


ತಂದೆ ಪಂಡಿತ್‌ ತಾರಾನಾಥ ಅವರಿಂದಲೇ ಪ್ರಾಥಮಿಕ ಸಂಗೀತ ಶಿಕ್ಷಣ ಪೂರೈಸಿದ ರಾಜೀವ ತಾರಾನಾಥರು ನಂತರ ಹೆಸರಾಂತ ಸರೋದ ವಾದಕರಾದ ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ ಹಾಗೂ ಅನ್ನ ಪೂರ್ಣಾದೇವಿ ಅವರಲ್ಲಿ ಶಿಷ್ಯವೃತ್ತಿ ನಡೆಸಿದರು. ಹಿಂದೂಸ್ತಾನಿ ಸಂಗೀತಕ್ಕೆ ಅಂತರರಾಷ್ಟ್ರೀಯ ಮನ್ನಣೆ ಸಿಗುವುದರಲ್ಲಿ ಉಸ್ತಾದ್‌ ಅಲಿ ಅಕ್ಬರ್‌ ಖಾನ್‌, ಪಂಡಿತ್‌ ರವಿಶಂಕರ್‌ ಅವರಂತೆಯೇ ರಾಜೀವ ತಾರಾನಾಥ ಅವರ ಕೊಡುಗೆಯೂ ಅಪಾರ.

ಕೆನಡಾದಲ್ಲಿ ಕನ್ನಡ ಡಿಂಡಿಮ.. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಗಾನಸುಧೆ

Tap to resize

Latest Videos

undefined

ಸಾಹಿತ್ಯ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲೂ ಇವರದು ವಿಶಿಷ್ಟಕೊಡುಗೆ. ನವ್ಯ ಪರಂಪರೆಯಲ್ಲಿನ ಮೂಲ ಚಿಂತಕರೂ ಬರಹಗಾರರೂ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ನವ ಅಲೆಯ ಹಲವಾರು ಚಲನಚಿತ್ರಗಳಿಗೆ ಸಂಗೀತ ಒದಗಿಸಿದ ಹಿರಿಮೆ ಇವರದು. 1999-2000ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1998ರ ಪಿಟೀಲು ಚೌಡಯ್ಯ ಪ್ರಶಸ್ತಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ. ಭಾರತ ಸರಕಾರದಿಂದ ಪದ್ಮಶ್ರೀ ಗೌರವಗಳೂ ತಾರಾನಾಥರಿಗೆ ಲಭಿಸಿವೆ.

'ಸರಿಗಮಪ' ವೇದಿಕೆಯಲ್ಲೇ 'ಐಗಿರಿ ನಂದಿನಿ' ಸವಾಲ್ ಹಾಕಿದ ಮೂಡುವಡೆ ವರ್ಷ ಜ್ಞಾನ!

ಚಲನಚಿತ್ರ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ‘ಸಂಸ್ಕಾರ’, ‘ಪಲ್ಲವಿ’, ‘ಕಾಂಚನ ಸೀತ’ದಂತಹ ಚಲನಚಿತ್ರಗಳಿಗೆ ರಾಜೀವ ತಾರನಾಥ ಅವರು ಸಂಗೀತ ಸಂಯೋಜಿಸಿದ್ದರು. ಅವರು ಈಗ ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದು, ಯುವ ಸಂಗೀತಗಾರರಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ.

ಖಿನ್ನತೆ ತಗ್ಗಿಸುವ ಮ್ಯೂಸಿಕ್ ಎಂಬ ಮ್ಯಾಜಿಕ್!

ಸೆ. 01ರ ಭಾನುವಾರ ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ಧೂರ್‌ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಿ. ಹೇಮಂತ್‌ ಕುಮಾರ್‌ ಉಪಸ್ಥಿತರಿರಲಿದ್ದಾರೆ. ಜೊತೆಗೆ ವಿದ್ವಾನ್‌ ಮೈಸೂರು ಎಂ. ನಾಗರಾಜ್‌ ಮತ್ತು ವಿದ್ವಾನ್‌ ಮೈಸೂರು ಎಂ. ಮಂಜುನಾಥ್‌ ಅವರಿಂದ ಸಂಗೀತ ಕಛೇರಿ ಇರಲಿದೆ.

click me!