ನಾನು ರಾಜಕೀಯಕ್ಕೆ ಸೇರುವುದಿಲ್ಲ; ಸಂಜಯ್ ದತ್ ಸ್ಪಷ್ಟನೆ

Published : Aug 27, 2019, 04:23 PM IST
ನಾನು ರಾಜಕೀಯಕ್ಕೆ ಸೇರುವುದಿಲ್ಲ; ಸಂಜಯ್ ದತ್ ಸ್ಪಷ್ಟನೆ

ಸಾರಾಂಶ

ರಾಜಕೀಯ ಸೇರುವ ವದಂತಿಯನ್ನು ತಳ್ಳಿ ಹಾಕಿದ ಸಂಜಯ್ ದತ್ | ಆರ್ ಎಸ್ಪಿ ಪಕ್ಷದ ಸ್ಥಾಪಕ ಮಹಾದೇವ್ ಜಂಕರ್ ಹೇಳಿಕೆಯನ್ನು ನಿರಾಕರಿಸಿದ ಸಂಜು ಬಾಬಾ 

ಮುಂಬೈ (ಆ. 27): ನಟ ಸಂಜಯ್ ದತ್ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಸೆ.25 ರಂದು ರಾಷ್ಟ್ರೀಯ ಸಮಾಜ್ ಪ್ರಕಾಶ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಸ್ಥಾಪಕ ಮಹಾದೇವ್ ಜಂಕರ್ ಹೇಳಿರುವ ಹೇಳಿಕೆಗೆ ಸಂಜಯ್ ದತ್ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ನಟ ಸಂಜಯ್ ದತ್‌ ರಾಜಕೀಯಕ್ಕೆ!

" ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿಲ್ಲ. ಸೇರುವ ಆಲೋಚನೆಯೂ ಇಲ್ಲ. ಜಂಕರ್ ನನ್ನ ಆತ್ಮೀಯ ಸ್ನೇಹಿತ. ಅವರ ಮುಂದಿನ ರಾಜಕೀಯ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ" ಎಂದು ಸಂಜಯ್ ದತ್ ಅಧಿಕೃತವಾಗಿ ತಿಳಿಸಿದ್ದಾರೆ. 

ಸಂಜಯ್ ದತ್ತ್ ತಂದೆ ಸುನೀಲ್ ದತ್ ಕೂಡಾ ಚಿತ್ರರಂಗದ ಜೊತೆ ರಾಜಕೀಯ ರಂಗದಲ್ಲೂ ಅದೃಷ್ಟ ಪರೀಕ್ಷಿಸಿ ಯಶಸ್ವಿಯಾದವರು. ಸಂಸದರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಂಜಯ್ ದತ್ ಸಹೋದರಿ ಪ್ರಿಯಾ ದತ್ ಕೂಡಾ ಮುಂಬೈಯಿಂದ ಸಂಸದರಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಫಿಲ್ಮ್ ರಿಲೀಸ್‌ ಡೇಟ್‌ ನೆಪ ಹೇಳಿದ್ರೆ ಇನ್ಮುಂದೆ ವಿನಾಯಿತಿ ಇಲ್ಲ! ಏನಿದು 'ಸೆನ್ಸಾರ್​ಮಂಡಳಿ' ಹೊಸ ರೂಲ್ಸ್‌?
SURIYA: 'ಇನ್ನು ಹೀರೋ ಆಗಿ ಮಾಡ್ಬೇಕಾ? ವಿಲನ್‌ ಆಗ್ಬೇಕಾ?' ಈ ಪ್ರಶ್ನೆ ಕೇಳಿದ್ಯಾಕೆ ತಮಿಳು ಸ್ಟಾರ್ ನಟ ಸೂರ್ಯ?