ಸ್ಯಾಂಡಲ್ ವುಡ್ ನಟ ಕೋಮಲ್ ಕುಮಾರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಎಡವಟ್ಟು ಮಾಡಿದ್ದಾರೆ. ಕೋಮಲ್ ಸೆಲೆಬ್ರಿಟಿ ಅನ್ನೋಕಾರಣಕ್ಕೆ ಆತುರದಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಆರೋಪಿಗೆ ನಿರಾಳ. ಏನದು ಎಡವಟ್ಟು..? ಇಲ್ಲಿದೆ ಫುಲ್ ಡಿಟೇಲ್ಸ್.
ಬೆಂಗಳೂರು, [ಆ.14]: ಸ್ಯಾಂಡಲ್ ವುಡ್ ನಟ ಕೋಮಲ್ ಕುಮಾರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಎಡವಟ್ಟು ಮಾಡಿದ್ದಾರೆ.
ನಿನ್ನೆ[ಮಂಗಳವಾರ] ಸಂಜೆ ಬೆಂಗಳೂರಿನ ಶ್ರೀರಾಂಪುರ ರೈಲ್ವೆ ಅಂಡರ್ ಪಾಸ್ ನಲ್ಲಿ ಕೋಮಲ್ ಕುಮಾರ್ ಮೇಲೆ ಸ್ಥಳೀಯ ನಿವಾಸಿ ವಿಜಿ ಎನ್ನುವಾತ ಹಲ್ಲೆ ಮಾಡಿದ್ದ. ಆದ್ರೆ ಈ ಪ್ರಕರಣವನ್ನು ದಾಖಲಿಸಿಕೊಳ್ಳುವ ಅವಸರದಲ್ಲಿ ಮಲ್ಲೇಶ್ವರಂ ಪೊಲೀಸರು ಎಡವಟ್ಟು ಮಾಡಿದ್ದಾರೆ.
undefined
ಕೋಮಲ್ ಮೇಲೆ ಹಲ್ಲೆ, ಬೆಂಗಳೂರು ಪೊಲೀಸರಿಂದ ವಿಜಿ ಅರೆಸ್ಟ್
ವಿಚಾರಣೆ ಸಂಬಂಧ ಈಗಾಗಲೇ ವಿಜೆ ಅನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದ್ರೆ ಇದಕ್ಕೂ ಮೊದಲು ಕೇಸ್ ದಾಖಲಿಸಿಕೊಳ್ಳುವ ಅವಸರದಲ್ಲಿ 307 ಸೆಕ್ಷನ್ ಹಾಕಿದ್ದಾರೆ. ಈ ಸೆಕ್ಷನ್ ನಿಂದ ಕೋರ್ಟ್ ನಲ್ಲಿ ಕೋಮಲ್ ಕೇಸ್ ನಿಲ್ಲೋದೇ ಡೌಟ್ ಅಂತಿದ್ದಾರೆ ಹಿರಿಯ ಅಧಿಕಾರಿಗಳು.
ಕೋಮಲ್ ಮೇಲೆ ಹಲ್ಲೆ, ಜಗ್ಗೇಶ್ ಹೇಳಿದ ಇನ್ ’ಸೈಡ್’ ವಿಚಾರ
ಯಾಕಂದ್ರೆ, 307 ಅಡಿ ಕೇಸ್ ದಾಖಲಿಸಿಕೊಳ್ಳಬೇಕಿದ್ದರೆ ವ್ಯಕ್ತಿ ಮೇಲೆ ಮಾರಾಸ್ತ್ರಗಳಿಂದ ಹಲ್ಲೆಯಾಗಿರಬೇಕು. ಇಲ್ಲ ದೇಹದ ಯಾವುದೇ ಭಾಗದಲ್ಲಿ ಶಾಶ್ವತ ಊನವಾಗಿರಬೇಕು. ಆಗಿದ್ದಾಗ ಮಾತ್ರ ಸೆಕ್ಷನ್ 307 ಕೇಸ್ ಹಾಕಬೇಕು.
ಆದ್ರೆ, ಕೋಮಲ್ ಮೇಲೆ ಯಾವುದೇ ಮಾರಕಾಸ್ತ್ರಗಳಿಂದ ಹಲ್ಲೆಯಾಗಿರುವಷ್ಟು ಗಾಯವಾಗಿಲ್ಲ. ಕೇವಲ ಬಾಯಲ್ಲಿ ರಕ್ತ ಬಂದಿದೆ ಅಷ್ಟೇ. ಇದರಿಂದ ಈ ಪ್ರಕರಣದಲ್ಲಿ ಅಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಪೊಲೀಸರ ಈ ಎಡವಟ್ಟಿಗೆ ಕೋಮಲ್ ಕೇಸ್ ಬಿದ್ದುಹೋಗುವ ಸಾಧ್ಯತೆಗಳು ಹೆಚ್ಚಿವೆ.
ಕೋಮಲ್ ಥಳಿಸಿದ ಯುವಕರು.. ದೃಶ್ಯ ಸಿಸಿಟಿಯಲ್ಲಿ ಸೆರೆ
ಒಂದು ವೇಳೆ ಕೋರ್ಟ್ ನಲ್ಲಿ ಈ ಕೇಸ್ ಬಿದ್ದರೆ, ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೋಮಲ್ ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಪೊಲೀಸರು ಆತುರದಲ್ಲಿ ದಾಖಲಿಸಿಕೊಂಡಿದ್ದ ಕೇಸ್ ಈಗ ಆರೋಪಿಗೆ ವಿಜಿಗೆ ವರವಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.