
ಬೆಂಗಳೂರು(ಆ. 14) ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ವರ್ಷ ನಂಬರ್ 1 ನಟಿಯಾಗಿ ಮಿಂಚಿದ್ದ ಮೋಹಕ ತಾರೆ, ರಾಜಕಾರಣಿ ರಮ್ಯಾ ಮದುವೆಯಾಗಲು ನಿರ್ಧರಿಸಿದ್ದಾರಂತೆ!
ಕಾಂಗ್ರೆಸ್ ಜಾಲತಾಣದ ಹೆಡ್ ಆಗಿಯೂ ಕೆಲಸ ಮಾಡಿದ್ದ ರಮ್ಯಾ ತಮ್ಮ ಬಹುಕಾಲದ ಗೆಳೆಯ ಪೋರ್ಚುಗಲ್ ದೇಶದ ರಾಫೆಲ್ ಎಂಬ ಉದ್ಯಮಿಯ ವರಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಿನಿಮಾ ವಲಯದಲ್ಲಿ ಓಡಾಡುತ್ತಿದೆ. ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅಭಿನಯದ ಸಂಜು ಮತ್ತು ಗೀತಾ ಚಿತ್ರದ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ರಮ್ಯಾ-ರಾಫೆಲ್ ಒಟ್ಟಾಗಿ ಕಾಣಿಸಿಕೊಂಡಿದ್ದರು.
2016ರಲ್ಲಿ ತೆರೆಕಂಡ ‘ನಾಗರಹಾವು’ ಸಿನಿಮಾದ ನಂತರ ರಮ್ಯಾ ಕನ್ನಡದ ಯಾವ ಚಿತ್ರದಲ್ಲಿಯೂ ನಟಿಸಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದ‘ಅಭಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದ ದಿವ್ಯ ಸ್ಪಂದನ ರಮ್ಯಾ ನಂತರ ಹಿಟ್ ಚಿತ್ರಗಳ ಸರದಾರೆಯಾದರು. ಅರಸು, ಜೊತೆ ಜೊತೆಯಲಿ, ದತ್ತಾ, ಮುಸ್ಸಂಜೆ ಮಾತು ಸೇರಿದಂತೆ ಹಲವಾರು ನೆನಪಿನಲ್ಲಿ ಉಳಿಯುವ ಚಿತ್ರ ನೀಡಿದರು.
ಮೋದಿ ಕಾಲೆಳೆಯಲು ರಮ್ಯಾ ಬಳಸಿದ್ದ ಹಿಟ್ಲರ್ ಪೋಟೋದ ಅಸಲಿ ಕತೆ ಇಲ್ಲಿದೆ!
ನಂತರ ದಿಢೀರ್ ಎಂದು 2013ರಲ್ಲಿ ದಿಢೀರನೆ ರಾಜಕೀಯಕ್ಕೆ ಪ್ರವೇಶ ಕೊಟ್ಟರು. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿ ಸಂಸತ್ ಪ್ರವೇಶ ಮಾಡಿದ್ದರು. ಬದಲಾದ ರಾಜಕಾರಣದ ವಾತಾವರಣದಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಹೆಡ್ ಆಗಿಯೂ ಕೆಲಸ ಮಾಡಿದರು.
ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಈ ಮೂಲಕ ಉತ್ತರ ಸಿಕ್ಕಿದೆ ಎನ್ನಲಾಗಿದೆ. ರಮ್ಯಾ ಮದುವೆ ವಿಚಾರದ ಬಗ್ಗೆ ಸುವರ್ಣ ನ್ಯೂಸ್.ಕಾಂ ರಮ್ಯಾರಿಗೆ ಸಿನಿಮಾರಂಗ ಮತ್ತು ರಾಜಕಾರಣದಲ್ಲಿ ಆಪ್ತರಾಗಿದ್ದವರವರ ಬಳಿ ವಿಚಾರಿಸಿದಾಗ ತಮಗೆ ಈ ಬಗ್ಗೆ ಯಾವುದೇ ಮಾಹಿತಿಇಲ್ಲ ಎಂಬ ಉತ್ತರ ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.