ನಟ ದರ್ಶನ್ ಇತ್ತೀಚೆಗಷ್ಟೇ ಅರ್ಧಕ್ಕೇ ನಿಂತಿರುವ 'ದಿ ಡೆವಿಲ್' ಸಿನಿಮಾ ಶೂಟಿಂಗ್ ಮುಂದುವರಿಸಿದ್ದಾರೆ. ಕೊಲೆ ಕೇಸ್ ಆರೋಪದಲ್ಲಿ ಸಿಲುಕಿರುವ ನಟ ದರ್ಶನ್, ಸದ್ಯ ಜಾಮೀನಿನ ಮೇಲೆ ಬಿಡುಗಡೆ ಆಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಆದರೆ..
ಸ್ಯಾಂಡಲ್‌ವುಡ್ ಸ್ಟಾರ್ ನಟ, ಸದ್ಯ ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್ (Darshan Thoogudeepa) ಅವರು ಜೈಪುರದ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸದ್ಯ ಸ್ವಲ್ಪ ವಿಶ್ರಾಂತಿ ಪಡೆಯುತ್ತಿರುವ ನಟ ದರ್ಶನ್ ಅವರು ಏಪ್ರಿಲ್ 13 ರಿಂದ ಮತ್ತೆ ಬೆಂಗಳೂರಿನಲ್ಲಿ ಡೆವಿಲ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ದರ್ಶನ್ ಬೆನ್ನು ನೋವಿನ ಬಗ್ಗೆ ಆತಂಕದಲ್ಲಿ ಇದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ನಟ ದರ್ಶನ್ ಅವರು ಬೆನ್ನು ನೋವಿನಿಂದ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದಾರೆ.
ನಟ ದರ್ಶನ್ ಇತ್ತೀಚೆಗಷ್ಟೇ ಅರ್ಧಕ್ಕೇ ನಿಂತಿರುವ 'ದಿ ಡೆವಿಲ್' ಸಿನಿಮಾ ಶೂಟಿಂಗ್ ಮುಂದುವರಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ಸಿಲುಕಿರುವ ನಟ ದರ್ಶನ್, ಸದ್ಯ ಜಾಮೀನಿನ ಮೇಲೆ ಬಿಡುಗಡೆ ಆಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಆದರೆ, ತೀವ್ರವಾದ ಬೆನ್ನು ನೋವಿನಿಂದ ನರಳುತ್ತಿದ್ದ ನಟ ದರ್ಶನ್ ಅದೇ ಕಾರಣ ಮುಂದಿಟ್ಟು ಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದರು. ಇದೀಗ ನಿಧಾನವಾಗಿ ಅರ್ಧಕ್ಕೇ ನಿಂತಿದ್ದ ಡೆವಿಲ್ ಶೂಟಿಂಗ್ ಮುಂದುವರಿಸಿದ್ದು, ಡಬ್ಬಿಂಗ್ ಕೂಡ ಮಾಡುತ್ತಿದ್ದಾರೆ.
ಸರ್ವೇಜನ ಸುಖಿನೋ ಭವಂತು ಅಷ್ಟೇ...; ನಂಜುಡೇಶ್ವರನ ದರ್ಶನ ಪಡೆದ ಮೀನಾ ತೂಗುದೀಪ
ನಟ ದರ್ಶನ್ ಅವರು ಏಪ್ರಿಲ್ ನಲ್ಲಿ 'ದಿ ಡೆವಿಲ್' ಚಿತ್ರದ ಆಕ್ಷನ್ ಸೀಕ್ವೆನ್ಸ್ ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಫೈಟ್ ಮಾಸ್ಟರ್ ರಾಮ್ ಲಕ್ಷ್ಮಣ್ ಡೇಟ್ಸ್‌ಗಾಗಿ ಚಿತ್ರತಂಡ ಕಾಯ್ತಿದೆ. ಒಮ್ಮೆ ಅವರ ಡೇಟ್ಸ್ ಸಿಕ್ಕ ತಕ್ಷಣ, 'ದಿ ಡೆವಿಲ್' ಚಿತ್ರದ ಆಕ್ಷನ್ ಸೀನ್ ಶುರುವಾಗಲಿದೆ. ಜೈಪುರದಿಂದ ಸದ್ಯ ಮರಳಿರುವ ದರ್ಶನ್ ಸ್ವಲ್ಪ ರೆಸ್ಟ್ ಪಡೆಯಬೇಕಿದೆ ಎಂದಿವೆ ಚಿತ್ರತಂಡದ ಮೂಲಗಳು. ನಟ ದರ್ಶನ್ ಅವರಿಗೆ ಮೊದಲಿನಂತೆ ಶೂಟಿಂಗ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿದೆಯೇ? ಇಲ್ಲ, ಸಾಕಷ್ಟು ಕಷ್ಟಪಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಿನಲ್ಲಿ, ನಟ ದರ್ಶನ್ ಸದ್ಯ ಶೂಟಿಂಗ್‌ನಲ್ಲಿ ಭಾಗಿಯಾಗುವಷ್ಟು ಹುಶಾರ್ ಆಗಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳಿಗೆ ಖುಷಿಯ ಸಮಾಚಾರ ಸಿಕ್ಕಿದೆ. ಮಿಲನಾ ಪ್ರಕಾಶ್ ನಿರ್ದೇಶನದ (ಪ್ರಕಾಶ್ ವೀರ್) 'ದಿ ಡೆವಿಲ್' ಚಿತ್ರವು ಕನ್ನಡ ಮಟ್ಟಿಗೆ ಬಿಗ್ ಬಜೆಟ್ ಚಿತ್ರವಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಾಗಿದ್ದು, ಬಳಿಕ ಬೇರೆ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುವ ಚಾನ್ಸ್ ಇದೆ. ಒಟ್ಟಿನಲ್ಲಿ, ನಟ ದರ್ಶನ್ ಅಭಿಮಾನಿಗಳಿಗೆ ಈ ವರ್ಷ ತೆರೆಯ ಮೇಲೆ 'ದಿ ಡೆವಿಲ್' ಚಿತ್ರದ ದರ್ಶನ ಆಗಲಿದೆ.
ಕಿಚ್ಚ ಸುದೀಪ್ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ; ಆದ್ರೂ ಫ್ಯಾನ್ಸ್ ಕೋಪದ ಬದಲು ಖುಷಿಯಾಗಿದ್ದೇಕೆ?