ನಟ ಕಿಚ್ಚ ಸುದೀಪ್ ಸಿನಿಮಾ ಮಾಡೋ ಸ್ಪೀಡ್ ಕಮ್ಮಿ ಆಗಿದೆ ಎನ್ನುವ ಬೇಸರ ಹಲವರಲ್ಲಿದೆ. 'ವಿಕ್ರಾಂತ್ ರೋಣ' ಬಳಿಕ ನಟ ಸುದೀಪ್ ಅವರು ಒಂದು ವರ್ಷ ಬಿಡುವು ಪಡೆದಿದ್ದರು. ಬಳಿಕ 'ಮ್ಯಾಕ್ಸ್' ಸಿನಿಮಾ ಆರಂಭಿಸಿದ್ದರು. ಆದರೆ ..
ಹೌದು, ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಅಂದ್ರೆ, ಮುಂದಿನ ಒಂದೂವರೆ ವರ್ಷದಲ್ಲಿ 2 ಸಿನಿಮಾ ಕೊಡ್ತೀನಿ ಅಂದಿದ್ರು, ಆದರೆ, ಈಗ ಸಾಕಷ್ಟು ಡೀಲೇ ಆಗಿದೆ. ಈ ಬಗ್ಗೆ ಕೆಲವು ಮಾಹಿತಿ ಕೊಡಲೇಬೇಕು. ಆದರೆ ನಿನ್ನೆ ನಟ ಸುದೀಪ್ ಅವರು ಹೊಸ ಸುದ್ದಿ ನೀಡಿದ್ದಾರೆ. ಇದರಿಂದ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಸಕತ್ ಖುಷಿ ಆಗಿದ್ದಾರೆ. ಹಾಗಿದ್ದರೆ ಅದೇನು ಅಂತ ನೋಡಿ..
ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಮೂಲಕ ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದರು. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಿತ್ತು. ಅಂದಾಜು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಭಾರೀ ಸಂಚಲನ ಸೃಷ್ಟಿಸಿತ್ತು. ಸುದೀಪ್ ಕರಿಯರ್‌ನಲ್ಲೇ ಇತ್ತೀಚಿನ ವರ್ಷಗಳಲ್ಲಿ 'ಮ್ಯಾಕ್ಸ್' ಬೆಸ್ಟ್ ಸಿನಿಮಾ ಎನಿಸಿಕೊಂಡಿತ್ತು. Max ಸಿನಿಮಾ ಸೀಕ್ವೆಲ್ ಮಾಡುವಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕೇಳಿದ್ದರು.
Kichcha Sudeep: ನನ್ನ ಬಾಂಧವ್ಯ ಏನಿದೆ ಅದನ್ನ ಕಿತ್ತಾಕ್ಬಿಟ್ರೆ ನನ್ ಎಮೋಶನ್ ರಾಂಗ್ ಅಂತ ಆಗ್ಬಿಡುತ್ತೆ..
ಒಂದು ಮಾತು, ನಟ ಕಿಚ್ಚ ಸುದೀಪ್ ಸಿನಿಮಾ ಮಾಡೋ ಸ್ಪೀಡ್ ಕಮ್ಮಿ ಆಗಿದೆ ಎನ್ನುವ ಬೇಸರ ಹಲವರಲ್ಲಿದೆ. 'ವಿಕ್ರಾಂತ್ ರೋಣ' ಬಳಿಕ ನಟ ಸುದೀಪ್ ಅವರು ಒಂದು ವರ್ಷ ಬಿಡುವು ಪಡೆದಿದ್ದರು. ಬಳಿಕ 'ಮ್ಯಾಕ್ಸ್' ಸಿನಿಮಾ ಆರಂಭಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತೆರೆಗೆ ಬರೋದು ಸುಮಾರು ತಡವಾಗಿತ್ತು. ಮುಂದಿನ ಒಂದೂವರೆ ವರ್ಷದಲ್ಲಿ 2 ಸಿನಿಮಾ ಕೊಡ್ತೀನಿ ಎಂದು ಸುದೀಪ್ ಅಭಿಮಾನಿಗಳ ಬೇರಸಕ್ಕೆ ಉತ್ತರ ಕೊಟ್ಟಿದ್ದರು.
ಸಾಮಾನ್ಯವಾಗಿ ಒಂದು ಸಿನಿಮಾ ಬಿಡುಗಡೆ ವೇಳೆಗೆ ಸ್ಟಾರ್ ನಟರು ಮತ್ತೊಂದು ಚಿತ್ರವನ್ನು ಒಪ್ಪಿಕೊಳ್ಳುವುದು ಸಹಜ. ಆದರೆ 'ಮ್ಯಾಕ್ಸ್' ಸಿನಿಮಾ ತೆರೆಗೆ ಬಂದು ಹೋಗಿ 3 ತಿಂಗಳು ಕಳೆದರೂ ಕಿಚ್ಚನ ಮುಂದಿನ ಸಿನಿಮಾ ಯಾವುದು? ಯಾವಾಗ ಶುರು? ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಗಲೇ ಇಲ್ಲ. ಕಿಚ್ಚ ಫ್ಯಾನ್ಸ್ ಕಾದು ಕಾದು ಸುಸ್ತಾಗಿದ್ದಾರೆ. ಈ ಬಾರಿ ಸಿಸಿಎಲ್ ಟೂರ್ನಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಒಂದು ಟ್ವೀಟ್ ಮಾಡಿ 'ಬಿಲ್ಲ ರಂಗ ಬಾಷ' ಅಪ್‌ಡೇಟ್ ಕೊಟ್ಟಿದ್ದರು. ಮಾರ್ಚ್ 2ನೇ ವಾರದಿಂದ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಆರಂಭ ಎಂದು ಬರೆದುಕೊಂಡಿದ್ದರು. ಆದರೆ..
ಪ್ರಭಾಸ್‌ಗೆ 'ಅಂಥವ್ರು ಅಂದ್ರೆ ಇಷ್ಟ ಆಗಲ್ಲ' ಅಂದ ದೊಡ್ಡಮ್ಮ; ಮತ್ತೆ ಹೆಂಡ್ತಿ ಹೇಗಿರಬೇಕಂತೆ ಗೊತ್ತಾ?
ಮಾರ್ಚ್ ಮುಗಿದು ಏಪ್ರಿಲ್ ಬಂದರೂ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಭಿಮಾನಿಗಳು ಕೋಪಗೊಂಡಿದ್ದರು. ಆದರೆ, ಇದೀಗ ದಿಢೀರನೆ ಟ್ವೀಟ್ ಮಾಡಿ ಕಿಚ್ಚ ಸುದೀಪ್ ಸರ್‌ಪ್ರೈಸ್ ಕೊಟ್ಟಿದ್ದಾರೆ. 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಸುದೀಪ್ ರಗಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಕಿಚ್ಚ ಬಾಡಿ ಬಿಲ್ಡ್ ಮಾಡುತ್ತಿದ್ದಾರೆ. ಹುರಿಗಟ್ಟಿದ ತಮ್ಮ ದೇಹದ ಫೋಟೊಗಳನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್ 'ಏಪ್ರಿಲ್ 16ರಂದು' ಎಂದು ಬರೆದು ಭಾರೀ ಕುತೂಹಲ ಮೂಡಿಸಿದ್ದಾರೆ.
ಅಂದರೆ ಅದೇ ದಿನದಂದು 'ಬಿಲ್ಲ ರಂಗ ಬಾಷ' ಸಿನಿಮಾ ಶುರುವಾಗುವುದು ಬಹುತೇಕ ಖಚಿತವಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಸಾಕಷ್ಟು ಟೈಮ್ ಹಿಂದೆಯೇ ಅನೂಪ್ ಭಂಡಾರಿ 'ಬಿಲ್ಲ ರಂಗ ಬಾಷ' ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಬಳಿಕ ಸುದೀಪ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಈ ನಡುವೆ ಅನೂಪ್ 'ವಿಕ್ರಾಂತ್ ರೋಣ' ಸಿನಿಮಾ ಮಾಡಿ ಮುಗಿಸಿದ್ದರು. ಟೈಟಲ್‌ನಿಂದಲೇ 'ಬಿಲ್ಲ ರಂಗ ಬಾಷ' ಬಹಳ ಕುತೂಹಲ ಮೂಡಿಸಿದೆ.
ರಾಮನವಮಿ ವಿಶೇಷ ಲೈವ್ ಸ್ಟ್ರೀಮ್: ಜಿಯೋ ಹಾಟ್ ಸ್ಟಾರ್ & ಅಮಿತಾಭ್ ಬಚ್ಚನ್ ಸಹಯೋಗ
ಈ ಚಿತ್ರದಲ್ಲಿ ಭವಿಷ್ಯದ ಕಾಲಘಟ್ಟದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ. ಅದಕ್ಕಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸುವ ಪ್ರಯತ್ನ ನಡೀತಿದೆ ಎಂಬ ಮಾತಿದೆ. 180 ವರ್ಷಗಳ ಮುಂದಿನ ಕಥೆಯನ್ನು ಚಿತ್ರದಲ್ಲಿ ನಿರ್ದೇಶಕರ ಹೇಳೋಕೆ ಹೊರಟಿದ್ದಾರೆ. ಇದರಲ್ಲಿ ಕಿಚ್ಚನ ಪಾತ್ರವೇ ಬಹಳ ವಿಭಿನ್ನವಾಗಿರಲಿದ್ದು ಅದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ದ್ವಿಪಾತ್ರ ಅಥವಾ ತ್ರಿಪಾತ್ರ ಮಾಡ್ತಾರಾ? ಕಾದು ನೋಡಬೇಕಿದೆ, ಈಗಲೇ ಹೇಳೊದು ಕಷ್ಟ!
ಈಗ ಸುದೀಪ್ ಟ್ವೀಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾ ದೊಡ್ಡಮಟ್ಟದಲ್ಲಿ ಬರಲಿ, ಆದಷ್ಟು ಬೇಗ ಮಾಡಿ ಸರ್.. ಎಂದೆಲ್ಲಾ ಕಾಮೆಂಟ್ ಹಾಕಿದ್ದಾರೆ. 'ಪ್ರೈಂ ಶೋ ಎಂಟರ್‌ಟೈನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ನಿರಂಜನ್ ರೆಡ್ಡಿ 'ಬಿಲ್ಲ ರಂಗ ಬಾಷ' ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಈ ಸಂಸ್ಥೆ ತೆಲುಗಿನ 'ಹನುಮಾನ್' ಚಿತ್ರವನ್ನು ನಿರ್ಮಿಸಿತ್ತು. 200 ಕೋಟಿ ರೂ. ಅಂದಾಜು ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಬಿಲ್ಲ ರಂಗ ಬಾಷ' ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಾಮನ ಬಿಲ್ಲು ಚಿತ್ರದಲ್ಲಿ ಅಣ್ಣಾವ್ರು-ಎಸ್‌ಪಿಬಿ ಒಟ್ಟಿಗೇ ಹಾಡಿದ ಹಾಡು ಮಾಯವಾಗಿದ್ದು ಯಾಕೆ?