
ಕನ್ನಡದ ನಟ, ಈಗ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಅಜಯ್ ರಾವ್ (Ajay Rao) ಕನಸಿನ ಸಿನಿಮಾ 'ಯುದ್ಧಕಾಂಡ' ಬಿಡುಗಡೆ ಆಗಿದೆ. 18 ಏಪ್ರಿಲ್ 2025ರಂದು ಯುದ್ಧಕಾಂಡ (Yuddhakanda) ಚಿತ್ರವು ಬಿಡುಗಡೆ ಆಗಿದ್ದು, ಉತ್ತಮ ಅಭಿಪ್ರಾಯ ಪಡೆದುಕೊಂಡಿದೆ. ಸಾಲ ಮಾಡಿ ಪ್ರೀತಿಯಿಂದ ಸಿನಿಮಾ ಮಾಡಿರುವ ಅಜಯ್ ರಾವ್ ಅವರು ಚಿತ್ರ ಗೆದ್ದೇ ಎಲ್ಲುತ್ತದೆ ಎಂಬ ಆಶಾಭಾವದಲ್ಲಿ ಇದ್ದಾರೆ. ಇನ್ನೇಕು ಕೆಲವೇ ದಿನಗಳಲ್ಲಿ ಚಿತ್ರದ ಫಲಿತಾಂಶ ನಿರ್ಧಾರ ಆಗಲಿದೆ. ಸದ್ಯಕ್ಕಂತೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಮೂಡಿದ್ದು, ಯುದ್ಧಕಂಡ ಗೆಲ್ಲುವ ಸೂಚನೆ ನೀಡಿದೆ.
ಅಜಯ್ ರಾವ್ ನಿರ್ಮಾಣದ ಯುದ್ಧಕಾಂಡ 2 ಸಿನಿಮಾ ಇದೇ ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಜನರಿಗೆ ಇಷ್ಟ ಆಗಬೇಕು, ಜನರ ಮನಸ್ಸು ಮುಟ್ಟಬೇಕು ಎಂದು ಅಜಯ್ ಹೋರಾಟ ಮಾಡುತ್ತಿದ್ದಾರೆ. ಇದ್ದ ಐಷಾರಾಮಿ ಕಾರು ಮಾರಿದ್ದಾರೆ, ಸಾಲ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಸಿನಿಮಾ ಪ್ರೆಸ್‌ಮೀಟ್ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಭಾಗಿಯಾಗಿದ್ದು, ಚಿತ್ರ ನೋಡಲು 5 ಗೋಲ್ಡ್ ಕ್ಲಾಸ್ ಟಿಕೆಟ್‌ಗಳನ್ನು ಖರೀದಿಸಿದ್ದರು. ಸಿನಿಮಾ ನೋಡಿರಬಹುದು, ಅಥವಾ ಮುಂದೆ ನೋಡಿ ಆ ಬಗ್ಗೆ ನಟ ರವಿಚಂದ್ರನ್ ಅವರು ಮಾತನಾಡಬಹುದು.
ನಟಿ ಸುಧಾರಾಣಿಗೆ ಪ್ರೀತಿಯಿಂದ ಶಿವರಾಜ್‌ಕುಮಾರ್ ಹೀಗಂತ ಕರೀತಾರೆ..!
ಪ್ರೆಸ್‌ಮೀಟ್‌ನಲ್ಲಿ ಈ ಬಗ್ಗೆ ಮಾತನ್ನಾಡಿರುವ ರವಿಚಂದ್ರನ್ ಅವರು 'ದಾರಿಯುದ್ಧಕ್ಕೂ ಸಂದರ್ಶನವನ್ನು ನೋಡಿಕೊಂಡು ಬರುತ್ತಿದ್ದೆ. ಎಷ್ಟು ಮಾತನಾಡುತ್ತಾನೆ ಇವನು.. ಮಾತನಾಡುತ್ತಿದ್ದರೆ ಭಯ ಬಂದು ಬಡುತ್ತೆ. ಸಂದರ್ಶನವನ್ನು ನೋಡಿಕೊಂಡು ಬರುವಾಗ ಯುದ್ಧಕಾಂಡ ಏನು ಅನ್ನೋ ಪ್ರಶ್ನೆ ಕಾಡುವುದಕ್ಕೆ ಶುರುವಾಗಿತ್ತು. ಅಜಯ್ ರಾವ್ ಒಬ್ಬ ಲಾಯರ್ ಆಗಿ ಜವಾಬ್ದಾರಿಯುತ ನಿರ್ಮಾಪಕನಾಗಿ ಅರ್ಧ ಡೈರೆಕ್ಟರ್ ಆಗಿ ಒಬ್ಬ ಶಿಸ್ತಿನ ಸಿಪಾಯಿಯಾಗಿ ಒಬ್ಬ ಫಾದರ್ ಆಗಿ ಒಬ್ಬ ಪ್ರಜೆಯಾಗಿ ಈ ಹೋರಾಟಕ್ಕೆ ನಿಂತಿರುವುದೇ ಯುದ್ಧಕಾಂಡ.
ಸಿನಿಮಾ ನಿರ್ಮಾಣ ಮಾಡಿ ರಿಲೀಸ್ ಮಾಡುವ ಹಂತಕ್ಕೆ ಬಂದಾಗ ಎದೆಯಲ್ಲಿ ಸಹಜವಾಗಿಯೇ ನಡುಕ ಉಂಟಾಗುತ್ತದೆ. ಜನರಿಗೆ ಇಷ್ಟ ಆಗುತ್ತೋ ಏನೋ ರಿಸಲ್ಟ್ ಏನ್ ಆಗುತ್ತೋ ಅಂತ. ನನ್ನಂಥ 40 ವರ್ಷ ಸಿನಿಮಾ ಜರ್ನಿ ಮಾಡ್ಕೊಂಡು ಬಂದವರಿಗೇ ಒಂದು ರೀತಿಯ ಭಯವಿರುತ್ತೆ ಪುಕ ಪುಕ ಹಾರ್ಟ್ ಹೊಡೆಯುವುದಕ್ಕೆ ಶುರುವಾಗುತ್ತದೆ. ಸಿನಿಮಾವನ್ನು ಅಷ್ಟೇ ಪ್ರೀತಿಸುತ್ತೇವೆ. ನಿನ್ನಲ್ಲಿ ನನ್ನನ್ನು ಕಾಣುತ್ತೇನೆ' ಎಂದು ರವಿಚಂದ್ರನ್ ಮಾತನಾಡಿದ್ದಾರೆ.
'ಅಜಯ್ ರಾವ್ ಮತ್ತು ನಿರ್ದೇಶಕರು ಮಾತನಾಡುವಾಗ ಎಲ್ಲೂ ತೊದಲಲಿಲ್ಲ. ಒಂದು ವೇಳೆ ತೊದಲಿದರೆ ಇನ್ನೂ ಎಲ್ಲೋ ಒಂದು ಕಡೆ ಕನ್ಫ್ಯೂಷನ್ ಇದೆ ಅಂತ. ತೊದಲಲಿಲ್ಲ ಅಂದರೆ ಅಷ್ಟೇ ಕಾನ್ಫಿಡೆಂಟ್ ಆಗಿದ್ದಾರೆ ಅಂತ. ನನಗೆ ಒಂದು ಎಮೋಷನಲ್ ಸಿನಿಮಾ ಕಣ್ಣು ಮುಂದೆ ಕಾಣುತ್ತಿದೆ' ಎಂದು ರವಿಚಂದ್ರನ್ ಹೇಳಿದ್ದಾರೆ.
ಪಾರ್ವತಮ್ಮ ಅದೆಷ್ಟೇ ಕಾದರೂ ಶಿವರಾಜ್‌ಕುಮಾರ್ 'ಆ ಚಿತ್ರ'ಕ್ಕೆ ಈ ನಟಿಯ ಡೇಟ್ಸ್ ಸಿಗಲೇ ಇಲ್ಲ, ಕೊನೆಗೆ..
'ಸಾಲ ಮಾಡಿದ್ದೀನಿ ಸಾಲ ಮಾಡಿದ್ದೀನಿ ಅಂತ ಅಜಯ್ ರಾವ್ ಹೇಳಿದಾಗ ನನ್ನ ಸಾಲ ನೆನಪಾಯ್ತು. ಸಾಲ ಮಾಡುವುದಕ್ಕೆ ತಾಕತ್ತು ಬೇಕು ಅಂದ. ನನಗೆ ಸಾಲ ತೀರಿಸುವುದಕ್ಕೆ ತಾಕತ್ತು ಬೇಕು. ಇಷ್ಟೋಂದು ಧೈರ್ಯ ತಗೋಂಡು ಸಿನಿಮಾ ಮಾಡ್ಬೇಕಾ ಅನ್ನೋದು ಬಂತು. ಸಿನಿಮಾ ಮಾಡುತ್ತಲೇ ಇದ್ದೀನಿ ಸಾಲದಲ್ಲಿ ಬದುಕುತ್ತಿದ್ದೀವಿ. ಸಾಲದಲ್ಲೇ ಹೋರಾಡುತ್ತಿದ್ದೇವೆ. ಸಾಲ ಮಾಡುತ್ತೇನೆ ಅಂತ ಎಲ್ಲೂ ಹೇಳಬೇಡ ಅಷ್ಟು ದುಡ್ಡು ಸಂಪಾದನೆ ಮಾಡು' ಎಂದಿದ್ದಾರೆ ರವಿಚಂದ್ರನ್.
ಅಜಯ್ ರಾವ್ ಈ ಸಿನಿಮಾದ ಮೇಲೆ ಇಟ್ಟಿರುವ ಪ್ರೀತಿ, ಶ್ರಮ ಹಾಗೂ ನಂಬಿಕೆ ಎಲ್ಲವೂ ಎದ್ದು ಕಾಣುತ್ತಿದೆ. ಸಾಲ ಮಾಡೋದು ತಾಕತ್ತಲ್ಲ, ಸಾಲ ತೀರಿಸೋದು ತಾಕತ್ತು.. ಈ ಸಿನಿಮಾ ಗಳಿಕೆ ಮೂಲಕ ಮುಂದೆ ಸಾಲ ಮಾಡದೇ ಸಿನಿಮಾ ಮಾಡುವಂತಾಗಲಿ.. ನಾನಂತೂ ಈ ಚಿತ್ರವನ್ನು ಥಿಯೇಟರ್‌ನಲ್ಲೇ ನೋಡುತ್ತೇನೆ' ಎಂದಿದ್ದಾರೆ ನಟ ರವಚಂದ್ರನ್. ಇದೀಗ ಸಿನಿಮಾ ಬಿಡುಗಡೆ ಆಗಿದೆ. ಮಾಧ್ಯಮದ ಸಿನಿಮಾ ವಿಮರ್ಶಕರಿಂದ ಹಾಗೂ ಸೋಷಿಯಲ್ ಮೀಡಿಯಾಗಳಿಂದ ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ದರ್ಶನ್ 'ಡೆವಿಲ್' ಸಿನಿಮಾ ಪಾತ್ರ ಲೀಕ್ ಆಗೋಯ್ತು..? ಫೋಟೋ ವೈರಲ್ ಆಗ್ತಿದೆ ನೋಡಿ..!
ಕನ್ನಡದ ಸಿನಿಮಾ ಪ್ರೇಕ್ಷಕರು ನಟ-ನಿರ್ಮಾಪಕ ಹಾಗೂ ಅಜಯ್ ರಾವ್ ಅವರ ಈ 'ಯುದ್ಧಕಾಂಡ' ಸಿನಿಮಾವನ್ನು ಗೆಲ್ಲಿಸುತ್ತಾರಾ? ನಿರ್ಮಾಣ ಮಾಡಿ ಸಾಲ ಮಾಡಿಕೊಂಡಿರುವ ಅಜಯ್ ರಾವ್ ಅವರು ಈ ಸಿನಿಮಾ ಮೂಲಕ ಮಾಡಿದ ಸಾಲ ತೀರಿಸಿಕೊಂಡು ಲಾಭ ಗಳಿಸುತ್ತಾರಾ? ಈ ಪ್ರಶ್ನೆಗಳಿಗೆ ಮುಂದಿನ ದಿನದಲ್ಲಿ ಉತ್ತರ ಸಿಗಬೇಕು. ಕಾಲ ಕೊಡುವ ಉತ್ತರಕ್ಕಾಗಿ ಕಾಯಬೇಕಷ್ಟೇ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.