ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಚಿತ್ರವು ಇಂದು ವಿಶ್ವದಾದ್ಯಂತ ತೆರೆ ಕಂಡಿದೆ. ಇಲ್ಲೊಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ನಟ ಸಲ್ಮಾನ್ ಅದೇನು ಉತ್ತರ ಕೊಟ್ಟಿದ್ದಾರೆ ಗೊತ್ತೇ?.. ಅದೇ ಪ್ರಶ್ನೆ ಡಾ ರಾಜ್‌ಕುಮಾರ್ ಸಹ ಎದುರಿಸಿದ್ದರು. ಅಂದು..
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಚಿತ್ರವು ಇಂದು ವಿಶ್ವದಾದ್ಯಂತ ತೆರೆ ಕಂಡಿದೆ. ಈ ಚಿತ್ರವು ಒಳ್ಳೆಯ ಓಪನಿಂಗ್ ಪಡೆಯಲಿದ್ದು, ಬಳಿಕವಷ್ಟೇ ಫಲಿತಾಂಶದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಈಗ ಅದಕ್ಕಿಂತ ಸುದ್ದಿಯಾಗುತ್ತಿರುವುದು ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅವರಿಬ್ಬರ ಮಧ್ಯೆ ಇರುವ ಏಜ್ ಗ್ಯಾಪ್. ಹೌದು, ನಟಿ ರಶ್ಮಿಕಾ ಮಂದಣ್ಣ ಹಾಗೂ ಸಲ್ಲೂ ನಡುವೆ ಬರೋಬ್ಬರಿ 31 ವರ್ಷಗಳ ಗ್ಯಾಪ್ ಇದೆ. ಈ ಬಗ್ಗೆ ಬಹಳಷ್ಟು ಟೀಕೆಗಳು ಕೇಳಿ ಬಂದಿವೆ. ಅಷ್ಟೇ ಅಲ್ಲ, ಸಿಕಂದರ್ ಈವೆಂಟ್‌ನಲ್ಲಿ ಸ್ವತಃ ನಟ ಸಲ್ಮಾನ್ ಖಾನ್ ಅವರಿಗೇ ಈ ಪ್ರಶ್ನೆ ಕೇಳಲಾಗಿದೆ.
ಆ ಪ್ರಶ್ನೆಗೆ ನಟ ಸಲ್ಮಾನ್ ಅದೇನು ಉತ್ತರ ಕೊಟ್ಟಿದ್ದಾರೆ ಗೊತ್ತೇ? 'ಅರೇ, ನಟಿ ರಶ್ಮಿಕಾ ಮಂದಣ್ಣಗೆ ಆಗಲೀ ಅವರ ತಂದೆಗೇ ಆಗಲೀ ನಮ್ಮಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ತಕರಾರಿಲ್ಲ. ಮುಂದೆ ರಶ್ಮಿಕಾ ಮದುವೆ ಆಗುತ್ತದೆ, ಮಕ್ಕಳೂ ಆಗುತ್ತವೆ. ಆಗ ಕೂಡ ಅವರು ನಟಿಸುತ್ತಾರೆ, ಅವರಿಗೆ ಅವರ ಪತಿ ನಟಿಸಲು ಪರ್ಮಿಷನ್ ಕೊಡುತ್ತಾರೆ ಎಂದೇ ನಾನು ನಂಬಿದ್ದೇನೆ' ಎಂದಿದ್ದಾರೆ. 'ಇದು ಸಿನಿಮಾ ನಟನೆ ಅಷ್ಟೇ, ಏಜ್ ಮ್ಯಾಟರ್ ಆಗಲ್ಲ ಅಂತಾಗಲೀ ಅಥವಾ ಕಥೆಗೆ ಸ್ಯೂಟ್ ಆಗುತ್ತದೆ ನಮ್ಮಿಬ್ಬರ ಜೋಡಿ' ಎಂದಾಗಲೀ ಅಪ್ಪಿತಪ್ಪಿಯೂ ಸಲ್ಮಾನ್ ಖಾನ್ ಹೇಳಲಿಲ್ಲ. ಅಷ್ಟೇ ಅಲ್ಲ, ತಾವು ತಮಗಿಂತ ತುಂಬಾ ಚಿಕ್ಕ ವಯಸ್ಸಿನ ನಟಿಯ ಜೊತೆ ನಟಿಸಿದ್ದನ್ನು ಅವರು ಸಮರ್ಥಿಸಿಕೊಂಡು ವಾದ ಮಾಡಿದಂತಿತ್ತು ಅವರ ಮಾತುಗಳು.
ರಾಕಿಂಗ್ ಸ್ಟಾರ್ ಯಶ್ ಮೇರು ನಟ ಡಾ ರಾಜ್‌ಕುಮಾರ್ ಬಗ್ಗೆ ಹೇಳಿರೋ ಮಾತು.. ಹೀಗಾ...!?
ಇದೇ ಪರಿಸ್ಥತಿ ನಮ್ಮ ಕನ್ನಡದ ನಟ ಡಾ ರಾಜ್‌ಕುಮಾರ್ ಅವರಿಗೂ ಬಂದಿತ್ತು. ಕನ್ನಡದಲ್ಲಿ ಭಾಗ್ಯದ ಲಕ್ಷ್ಮೀ ಬಾರಮ್ಮ, ಹೊಸ ಬೆಳಕು, ಆನಂದ್ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು, ತೆಲುಗು ಹಾಗೂ ತಮಿಳಿನಲ್ಲಿ ಕೂಡ ಬಹಳಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದ ನಿರ್ದೇಶಕರಾದ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ 'ಶ್ರಾವಣ ಬಂತು' ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ಇದೇ ಸ್ಥಿತಿ ಅನುಭವಿಸಿದ್ದರು. ಶ್ರಾವಣ ಬಂತು ಸಿನಿಮಾದಲ್ಲಿ ನಟಿಸಿದಾಗ ಡಾ ರಾಜ್‌ಕುಮಾರ್ ಅವರಿಗೆ 54 ವರ್ಷ, ನಾಯಕಿ ನಟಿ ಊರ್ವಶಿಗೆ ಆಗ 14 ವರ್ಷ. ಅಣ್ಣಾವ್ರು ಹಾಗೂ ಊರ್ವಶಿ ಮಧ್ಯೆ 41 ವರ್ಷಗಳ ಗ್ಯಾಪ್ ಇತ್ತು.
ಅಂದು, 1984ರಲ್ಲಿ ಶ್ರಾವಣ ಬಂತು ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಕೂಡ ಆಗಿತ್ತು. ಆದರೆ, ಅಂದು ಸಾಕಷ್ಟು ಪತ್ರಿಕೆಗಳು ಡಾ ರಾಜ್‌ಕುಮಾರ್ ಅವರು ತಮ್ಮ ಮೊಮ್ಮಗಳ ವಯಸ್ಸಿನ ನಟಿಯ ಜೊತೆ ನಟಿಸಿದ್ದಕ್ಕೆ ಆಕ್ಷೇಪ ಹಾಗೂ ಟೀಕೆ ಮಾಡಿ ಬರೆದಿದ್ದವು. 14 ವರ್ಷದ ನಟಿ ಊರ್ವಶಿ ಜೊತೆ 54 ರ ನಟ ರೊಮಾನ್ಸ್ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಟೀಕೆ ಮಾಡಿದ್ದವು. ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದರು ಡಾ ರಾಜ್‌ಕುಮಾರ್. ಮುಂದೆ ಅವರ ನಟನೆಯ ಯಾವುದೇ ಸಿನಿಮಾದಲ್ಲಿ ಆ ತಪ್ಪು ಆಗದಂತೆ ನೋಡಿಕೊಂಡರು. ಮುಂದೆ ಅವರ ಚಿತ್ರಗಳಲ್ಲಿ ನಟಿಸಿದ್ದು ಸ್ವಲ್ಪವೇ ವಯಸ್ಸಿನ ಅಂತರವಿದ್ದ ಮಾಧವಿ, ಗೀತಾ ಹಾಗೂ ಜಯಪ್ರದಾ ಮಾತ್ರ.
ಶಿವರಾಜ್‌ಕುಮಾರ್‌ಗೆ 'ಬಾರಿಸಿ' ಎಂದಿದ್ದ ಡಾ ರಾಜ್‌ಕುಮಾರ್.. ಸಿಹಿ ಕಹಿ ಚಂದ್ರು ಹೊಡೆದ್ರು, ಆದ್ರೆ..
ಅಂದರೆ, ಮಾಧ್ಯಮ ಹಾಗೂ ಜನರ ಪ್ರತಿಕ್ರಿಯೆಗಳನ್ನು ಡಾ ರಾಜ್‌ಕುಮಾರ್ ಹಾಗೂ ಅವರ ಟೀಮ್ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದರು. ಸಿನಿಮಾ ನೋಡುವ ಜನರ ದೃಷ್ಟಿಯಲ್ಲಿ 'ತಮ್ಮಿಂದ ಆಗಿರುವುದು ತಪ್ಪು' ಎಂಬುದನ್ನು ಅರ್ಥ ಮಾಡಿಕೊಂಡರು. ಜೊತೆಗೆ, 'ಸಿನಿಮಾ ಪ್ರೇಕ್ಷಕರೇ ದೇವರು' ಎಂಬುದನ್ನು ಅರಿತುಕೊಂಡು, ಮುಂದೆ ಅಂತಹ ತಪ್ಪು ಆಗದಂತೆ ನೋಡಿಕೊಂಡಿದ್ದರು. ಅದು ಡಾ ರಾಜ್‌ಕುಮಾರ್ ಅವರಿದ್ದ ಸಜ್ಜನಿಕೆ. ಒಂದು ಬಾರಿ ಆದ ತಪ್ಪು ಮತ್ತೆ ತಮ್ಮ ಸಿನಿಮಾ ಮಜೀವನದಲ್ಲಿ ಮರುಕಳಿಸದಂತೆ ನೋಡಿಕೊಂಡಿದ್ದರು. ಆದರೆ ಇಂದು ಸಲ್ಮಾನ್ ಖಾನ್ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ವಿಷಯಗಳಲ್ಲೇ ಕೆಲವರು ದೊಡ್ಡವರು ಇನ್ನೂ ಕೆಲವರಉ ಸಣ್ಣವರು ಆಗುವುದು ಎಂದರೆ ತಪ್ಪೇನಿಲ್ಲ ಅಲ್ಲವೇ?