ಭಾರತದಲ್ಲೇ ಇಲ್ಲ ಚಂದನ್ ಶೆಟ್ಟಿ, ಎಲ್ಲಿಗೆ ಹೋಗಿದಾರೆ, ಹೋಗಿ ಅಲ್ಲೇನ್ ಮಾಡ್ತಿದಾರೆ?

Published : Mar 30, 2025, 12:45 PM ISTUpdated : Mar 30, 2025, 01:03 PM IST
ಭಾರತದಲ್ಲೇ ಇಲ್ಲ ಚಂದನ್ ಶೆಟ್ಟಿ, ಎಲ್ಲಿಗೆ ಹೋಗಿದಾರೆ, ಹೋಗಿ ಅಲ್ಲೇನ್ ಮಾಡ್ತಿದಾರೆ?

ಸಾರಾಂಶ

ಕನ್ನಡದ ಖ್ಯಾತ ರಾಪರ್, ನಟ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯವರು ಸದ್ಯ ಭಾರತದಲ್ಲಿ ಇಲ್ಲ. ಅವರು ತಮ್ಮ.. ಅಲ್ಲಿಗೆ ಹೋಗಿ ಅದೇನು ಮಾಡ್ತಿದಾರೆ, ಯಾಕೆ ಹೋಗಿದ್ದು ಎಲ್ಲಾ ಸೀಕ್ರೆಟ್ ಓಪನ್ ಆಗಿದೆ ನೋಡಿ..

ಕನ್ನಡದ ಖ್ಯಾತ ರಾಪರ್, ನಟ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯವರು (Chandan Shetty) ಸದ್ಯ ಭಾರತದಲ್ಲಿ ಇಲ್ಲ. ಅವರು ತಮ್ಮ ಸಂಗೀತ ಸುಧೆ ಹರಿಸಲು ಯುನೈಟೆಡ್ ಕಿಂಗ್‌ಡಮ್‌ಗೆ (United Kingdom) ಹೋಗಿದ್ದಾರೆ. ಅಲ್ಲಿ ಬ್ರಿಸ್ಟಾಲ್, ಲಂಡನ್, ಲೀಡ್ಸ್ ಹಾಗೂ ಡಬ್ಲಿನ್ ನಗರಗಳಲ್ಲಿ ತಮ್ಮ ಅಭಿಮಾನಿಗಳ ಕರೆಯ ಮೇರೆಗೆ ಹೋಗಿದ್ದು ಅಲ್ಲಿ ಈಗಾಗಲೇ ಮೂರು ಮ್ಯೂಸಿಕ್ ಈವೆಂಟ್ ಮುಗಿಸಿ ಇವತ್ತು ನಾಲ್ಕನೇ ಈವೆಂಟ್ ಅಟೆಂಡ್ ಮಾಡಲಿದ್ದಾರೆ. ಕಳೆದ ಮೂರೂ ಈವೆಂಟ್‌ಗಳಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಇಂದು 4ನೇ ಕಾರ್ಯಕ್ರಮಕ್ಕೆ ಕೂಡ ಜನರ ಪ್ರತಿಕ್ರಿಯೆ ಚೆನ್ನಾಗಿಯೇ ಬರಲಿದೆ ಎಂಬ ನಿರೀಕ್ಚೆ ಚಂದನ್ ಶೆಟ್ಟಿ ತಂಡಕ್ಕಿದೆ. 

ಮಾರ್ಚ್ 21 ರಂದು ಬ್ರಿಸ್ಟಾಲ್, 22ಕ್ಕೆ ಲಂಡನ್, 23ಕ್ಕೆ ಲೀಡ್ಸ್ ನಗರಗಳಲ್ಲಿ ಮ್ಯೂಸಿಕ್ ನೈಟ್ಸ್‌ ನಡೆಸಿಕೊಟ್ಟಿರುವ ಸಿಂಗರ್ ಚಂದನ್ ಶೆಟ್ಟಿ ಅವರು ಇಂದು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಪಾಪ್ ಸಂಗೀತ ರಸದೌತಣ ನೀಡಲಿದ್ದಾರೆ. ಆಗಾಗ ವಿದೇಶಗಳಲ್ಲಿ ತಮ್ಮ ಮ್ಯೂಸಿಕ್ ಈವೆಂಟ್ ನಡೆಸಿಕೊಡುತ್ತಲೇ ಇರುತ್ತಾರೆ ಚಂದನ್ ಶೆಟ್ಟಿ. ಇತ್ತೀಚೆಗೆ ವೃತ್ತಿಜೀವನದಲ್ಲಿ ಬಹಳಷ್ಟು ಮೇಲೇರುತ್ತಿರುವ ಚಂದನ್ ಶೆಟ್ಟಿ ಅವರಿಗೆ ಈಗ ವೈಯಕ್ತಿಕ ಜೀವನದ ಯಾವುದೇ ಬಂಧನವಿಲ್ಲ. ಅವರೀಗ 'ಫ್ರೀ ಬರ್ಡ್' ತರಹದ ವ್ಯಕ್ತಿ. ಸಿನಿಮಾ, ಸಂಗೀತ, ಟೂರ್ ಅಂತ ತಮ್ಮ ಸ್ವಂತ ಲೈಫ್‌ಗೆ ಟೈಮ್‌ ಕೊಡುತ್ತ ಎಂಜಾಯ್ ಮಾಡುತ್ತಿದ್ದಾರೆ. 

ಎಲ್ಲಾನೂ ಅಮ್ಮನಿಗೇ ಮೊದ್ಲು ಗೊತ್ತಾಗೋದು ಮಕ್ಕಳ ಬಗ್ಗೆ.. ಚಂದನ್ ಶೆಟ್ಟಿ ಹೀಗ್ ಅಂದಿದ್ಯಾಕೆ?

ಚಂದನ್ ಶೆಟ್ಟಿಯವರ ನಟನೆಯಲ್ಲಿ ಈಗಾಗಲೇ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಅವರ ಟನೆಯ ಮತ್ತೊಂದು ಚಿತ್ರ ಸೂತ್ರಧಾರಿ ಬಿಡುಗಡೆ ಕಾಣುತ್ತಿದೆ. ಅಷ್ಟೇ ಅಲ್ಲ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅಭಿನಯದ 'ಮುದ್ದು ರಾಕ್ಷಸಿ' ಚಿತ್ರ ಕೂಡ ಬಿಡುಗಡೆಗೆ ಕಾದು ಕುಳಿತಿದೆ. ಒಂದು ಕಡೆ ಸಿಂಗಿಂಗ್, ಮತ್ತೊಂದು ಕಡೆ ಆಕ್ಟಿಂಗ್ ಮಾಡುತ್ತಿರುವ ಚಂದನ್ ಶೆಟ್ಟಿಯವರು ಜೊತೆಜೊತೆಯಲ್ಲೇ ಸಂಗೀತ ನಿರ್ದೇಶನವನ್ನೂ ಮಾಡುತ್ತ ವೃತ್ತಿಯಲ್ಲಿ ಎತ್ತರೆತ್ತರಕ್ಕೆ ಏರುತ್ತಿದ್ದಾರೆ. 

ಅತ್ತ ಚಂದನ್ ಶೆಟ್ಟಿ ಸಾಧನೆಯ ಶಿಖರ ಏರುತ್ತಿದ್ದರೆ ಇತ್ತ ಸೋಷಿಯಲ್ ಮೀಡಿಯಾಗಳಲ್ಲಿ ಕೆಲಸವಿಲ್ಲದೇ ಕುಳಿತಿರುವವರು ಅವರ ವೈಯಕ್ತಿಕ ಜೀವನವನ್ನು ಕೆದಕುತ್ತ ಅಧಃಪತನಕ್ಕೆ ಜಾರುತ್ತಿದ್ದರು. ಅವರ ಮಾಜಿ ಪತ್ನಿ ಯಾರು, ಹೊಸ ಗೆಳತಿ ಯಾರು, ಅವರು ಯಾರೊಂದಿಗೆ ಹಾಡುತ್ತಾರೆ, ಇನ್ಯಾರೊಂದಿಗೆ ನಟಿಸುತ್ತಾರೆ, ಮತ್ಯಾರೊಂದಿಗೆ ಓಡಾಡುತ್ತಾರೆ, ಯಾಕೆ ಒಬ್ಬರೇ ಮಲಗುತ್ತಾರೆ ಅಂತೆಲ್ಲಾ ಕಾಮೆಂಟ್ ಮಾಡುತ್ತ ಕಾಲಾಹರಣ ಮಾಡುತ್ತಿದ್ದಾರೆ. ಆದರೆ, ಚಂದನ್ ಶೆಟ್ಟಿ ಮಾತ್ರ ಇದ್ಯಾವುದಕ್ಕೂ ಕೇರ್ ಅನ್ನದೇ ತಾವಾಯ್ತು ತಮ್ಮ ಕೆಲಸವಾಯ್ತು ಎಂಬಂತೆ ಲೈಫ್ ಲೀಡ್ ಮಾಡ್ತಿದ್ದಾರೆ. 

ನಿವೇದಿತಾ ಗೌಡ ರೀಲ್ಸ್ ಮಾಡ್ತಾರೆ, ಆದರೆ ಕಾಮೆಂಟ್ಸ್ ನೋಡಲ್ವಂತೆ? ಅಲ್ಲೇ ಇರೋದು ಮ್ಯಾಟರ್..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಗಿಲ್ಲಿ ನಟ ಎಂಟರ್‌ಟೇನರ್‌ ಅಲ್ಲ, ವಿಷಕಾರಿ ಹಾವು? ಖಾಸಗಿ ಕಂಪೆನಿ HR ಹೇಳುತ್ತಿರೋದೇನು?
ದಕ್ಷಿಣ ಭಾರತದ ಕಲೆಕ್ಷನ್ ಕಿಂಗ್ ಯಾರು? 2025ರ ಬಾಕ್ಸ್ ಆಫೀಸ್ ಶೇಕ್ ಮಾಡಿದ ಟಾಪ್ 10 ಸಿನಿಮಾ