ಮೋದಿ ಜೊತೆ ಯಶ್, ಅಂದಿನ ಮಾತುಕತೆ ಈಗ್ಯಾಕೆ ಮತ್ತೆ ವೈರಲ್ ಆಗ್ತಿದೆ?.. ಏನ್ ಮ್ಯಾಟರ್..?

Published : Apr 16, 2025, 04:45 PM ISTUpdated : Apr 16, 2025, 05:01 PM IST
ಮೋದಿ ಜೊತೆ ಯಶ್, ಅಂದಿನ ಮಾತುಕತೆ ಈಗ್ಯಾಕೆ ಮತ್ತೆ ವೈರಲ್ ಆಗ್ತಿದೆ?.. ಏನ್ ಮ್ಯಾಟರ್..?

ಸಾರಾಂಶ

'ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು ಬಹಳ ಸಂತೋಷದ ಸಂಗತಿ. ಅವರು ನಾವು ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡಿದ್ದಾರೆ. ಅವರು ಏನು ಹೇಳುತ್ತಾರೆ, ಅವರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಕೂಡ ನಾವು ಗಮನವಿಟ್ಟು ಕೇಳಿಸಿಕೊಂಡಿದ್ದೇವೆ. ಸಿನಿಮಾರಂಗದ ಸೂಕ್ಷ್ಮ ಸಂಗತಿಗಳು..

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ನಮ್ಮ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತನಾಡಿದ್ದ ಸಮಯದ ವಿಡಿಯೋ ಇದು. ಆಗ ಅದು ಒಮ್ಮೆ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ಮತ್ತೊಮ್ಮೆ ಸಖತ್ ವೈರಲ್ ಆಗುತ್ತಿದೆ. ಆಗ ಮೋದಿಯವರು ಯಶ್ ಬಳಿ ಅದೇನು ಮಾತನ್ನಾಡಿದ್ದರು? ಯಶ್ ಅವರ ಜೊತೆ ಅದೇನು ಮಾತನ್ನಾಡಿದ್ದರು ಎಂಬುದು ಆಗೊಮ್ಮೆ ವೈರಲ್ ಆಗಿ ಜನರ ಕಿವಿಗೆ ಬಿದ್ದಿತ್ತು. ಆದರೆ, ಬಹುತೇಕ ಎಲ್ಲರೂ ಅದನ್ನು ಮರೆತಿರುತ್ತಾರೆ. ಈಗ ಮತ್ತೊಮ್ಮೆ ಆ ಸಂಗತಿ ಸಿಗುತ್ತಿದೆ, ನೋಡಿ.. 

ಯಶ್ ಅವರು ಸಂದರ್ಶನದಲ್ಲಿ ಆ ಬಗ್ಗೆ ಹೇಳಿದ್ದಾರೆ. 'ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು ಬಹಳ ಸಂತೋಷದ ಸಂಗತಿ. ಅವರು ನಾವು ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡಿದ್ದಾರೆ. ಅವರು ಏನು ಹೇಳುತ್ತಾರೆ, ಅವರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಕೂಡ ನಾವು ಗಮನವಿಟ್ಟು  ಕೇಳಿಸಿಕೊಂಡಿದ್ದೇವೆ. ಅವರಿಗೆ ಸಿನಿಮಾರಂಗದ ಸೂಕ್ಷ್ಮ ಸಂಗತಿಗಳು ಗೊತ್ತು. ಸರ್ಕಾರದಿಂದ ಸಿನಿಮಾರಂಗಕ್ಕೆ ಏನು ಬೇಕು, ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಸಿನಿಮಾ ಕರ್ಮಿಗಳಿಗೆ ಏನು ಬೇಕು ಅನ್ನೋದನ್ನ ಅವರು ಸಾಕಷ್ಟು ಆಸಕ್ತಿಯಿಂದ ಕೇಳಿಸಿಕೊಂಡಿದ್ದಾರೆ. 

ಯಶ್ ಶೂಟಿಂಗ್‌ ಸೆಟ್‌ಗೇ ಲಗ್ಗೆ ಇಟ್ಟು ರಾಧಿಕಾ ಪಂಡಿತ್ ಅದೇನ್ ಮಾಡಿದಾರೆ ನೋಡಿ; ಹೊಸ ಕಥೆನಾ..?!

ನಮ್ಮ ಪ್ರದಾನಿಗಳಿಗೆ ಸಿನಿಮಾ ಉದ್ಯಮದ ಅಂತರಂಗ ಅಷ್ಟರಮಟ್ಟಿಗೆ ಗೊತ್ತು ಎಂಬುದನ್ನು ತಿಳಿದು ನಾನು ನಿಜವಾಗಿಯೂ ಅಚ್ಚರಿಗೊಂಡೆ. ಅವರು ನಮ್ಮ ಸಿನಿಮಾರಂದಗ ಬಗ್ಗೆ ಸಾಕಷ್ಟು ಆಳಕ್ಕೆ ಇಳಿದು ತಿಳಿದುಕೊಂಡಿದ್ದಾರೆ, ಜೊತೆಗೆ, ಮತ್ತೂ ಹೆಚ್ಚುಹೆಚ್ಚು ಅರಿಯಲು ಉತ್ಸಾಹ ಹೊಂದಿದ್ದಾರೆ. ಅದನ್ನು ನೋಡಿ ನನಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಆಯಿತು. ಕಾರಣ, ಸರ್ಕಾರದ ಕಡೆಯಿಂದ ಸಿನಿಮಾ ಇಂಡಸ್ಟ್ರಿಗೆ ಏನು ಸಹಾಯ ಮಾಡಬಹುದು ಎಂಬುದನ್ನು ಅವರು ಕೇಳಿದ್ದಾರೆ. ಹಾಗೂ, ಸಿನಿಮಾದವರು ಸರ್ಕಾರಕ್ಕೆ ಏನು ಸಹಾಯ, ಸಲಹೆ ಕೊಡಬಹುದು ಎಂಬುದನ್ನೂ ಕೇಳಿದ್ದಾರೆ. 

ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ..! ನಟ ಯಶ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲಿಕ್ಕೆ ಇನ್ನೂ ಒಂದು ವರ್ಷ ಕಾಯಲೇಬೇಕು..! ಹೌದು, ಈ ಮೊದಲು 2025 ಏಪ್ರಿಲ್ 10ಕ್ಕೆ ನಿಗದಿಯಾಗಿದ್ದ ಚಿತ್ರದ ಬಿಡುಗಡೆ ಇದೀಗ ಮುಂದಕ್ಕೆ ಹೋಗಿದೆ. ಚಿತ್ರೀಕರಣ ತಡವಾಗಿದ್ದರಿಂದ ಸಿನಿಮಾ ಬಿಡುಗಡೆ ಒಂದು ವರ್ಷಕ್ಕೆ ಮುಂದಕ್ಕೆ ಹೋಗಿದೆ. ಚಿತ್ರದ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್, ಅದು ಮಾರ್ಚ್ 19, 2026ಕ್ಕೆ ಬಿಡುಗಡೆಯಾಗಲಿದೆ ಎಂದಿದ್ದಾರೆ. ಆದ್ದರಿಂದ ಯಶ್ ನಟನೆಯ ಟಾಕ್ಸಿಕ್ ಚಿತ್ರವನ್ನು 2026ರಲ್ಲಿ ನೋಡಬಹುದು. ಯಶ್ ಜೊತೆ ಕಿಯಾರಾ ಅಡ್ವಾನಿ ರೊಮಾನ್ಸ್ ನೋಡಲು ಇನ್ನೂ ಒಂದು ವರ್ಷ ಕಾಯ್ಬೇಕು, ಓಕೆ ನಾ? 

'ಯಾವನೋ ಇವ್ನು, ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತವ್ನೇ'..! ಈ ಮಾತಿಗೆ ಅಪ್ಪು ರಿಯಾಕ್ಷನ್ ನೋಡಿ..!

ಯಶ್ ನಟನೆಯ ಹಿಂದಿನ ಚಿತ್ರ ಕೆಜಿಎಫ್-2 ತೆರೆಕಂಡು ಆಗಲೇ 3 ವರ್ಷವಾಗಿದೆ. ಯಶ್ ಅಭಿಮಾನಿಗಳು ಟಾಕ್ಸಿಕ್ ಚಿತ್ರಕ್ಕಾಗಿ ಕಾಯುತ್ತಲೇ ಇದ್ದಾರೆ. ಕಾರಣ, ಕೆಜಿಎಫ್ ಇಫೆಕ್ಟ್.. ಯಶ್ ನಟನೆಯ ಕೆಜಿಎಫ್ ಸಿನಿಮಾ ಭಾಗ-1 ಹಾಗೂ ಭಾಗ-2 ನೋಡಿದವರು ಯಶ್ ಮುಂಬರುವ ಟಾಕ್ಸಿಕ್ ಚಿತ್ರಕ್ಕೆ ಕಾಯುವಂತಾಗಿದೆ. ಆದರೆ, ಈ ಚಿತ್ರದ ಶೂಟಿಂಗ್ ಸೆಟ್‌ ಸಂಬಂಧ ಕೆಲವು ಕೇಸ್ ಸೇರಿದಂತೆ ಹಲವು ಸಮಸ್ಯೆ ಎದುರಾಗಿತ್ತು. ಹೀಗಾಗಿ ಈ ಚಿತ್ರವು ಸದ್ಯ ಶೂಟಿಂಗ್ ಹಂತದಲ್ಲೇ ಇದೆ. 

ಈ ಕಾರಣಕ್ಕೇ ಎಂಬಂತೆ, ನಟ ಯಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಟಾಕ್ಸಿಕ್ ಚಿತ್ರದ ಬಿಡುಗಡೆ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈ ಚಿತ್ರವು 19 ಮಾರ್ಚ್‌ 2026ರಂದು ಬಿಡುಗಡೆ ಆಗಲಿದೆ ಎಂದು ಯಶ್ ಜಗತ್ತಿಗೇ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಬಹಳಷ್ಟು ಕಲಾವಿದರು ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾನಿ ಸೇರಿದಂತೆ ಹಲವು ಖ್ಯಾತನಾಮರು ಈ ಚಿತ್ರದಲ್ಲಿ ನಟಿಸಿದ್ದಾರೆ. ಯಶ್ ನಟನೆಯ ಈ ಚಿತ್ರವು ಪ್ಯಾನ್ ಇಂಡಿಯಾ ಬದಲು ಪ್ಯಾನ್ ವರ್ಲ್ಡ್ ರೂಪದಲ್ಲಿ ಬರಲಿದೆ. 

ಚಂದನ್‌ ಶೆಟ್ಟಿ ರೊಮಾನ್ಸ್‌ಗೆ ಸೆನ್ಸಾರ್ ಒಪ್ಪಿಗೆ ಕೂಡ ಸಿಕ್ತು ಗುರೂ.. ಇನ್ನೇನಿದೆ ಪ್ರಾಬ್ಲಂ..?!

ಈ ಚಿತ್ರದ ಮೂಲಕ ನಟ ಯಶ್ ಹಾಗೂ ಕನ್ನಡ ಚಿತ್ರರಂಗ ಮತ್ತೊಂದು ಲೆವಲ್‌ಗೆ ಹೋಗೋದು ಕನ್ಫರ್ಮ್. ಏಕೆಂದರೆ, ಟಾಕ್ಸಿಕ್ ಚಿತ್ರವು ಬಿಗ್ ಬಜೆಟ್ ಸಿನಿಮಾ ಅನ್ನೋದು ಒಂದು ಸಂಗತಿಯಾಗಿದ್ದರೆ ಇದು ಹಾಲಿವುಡ್ ಸಿನಿಮಾದಂತೆ ಜಗತ್ತಿನ ಬಹುಭಾಗಗಳಲ್ಲಿ, ಬಹುಭಾಷೆಗಳಲ್ಲಿ ಬಿಡುಗಡೆ ಅಗುತ್ತಿದೆ. ಒಟ್ಟಿನಲ್ಲಿ, ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರವು ಈ ವರ್ಷದ ಬದಲು ಮುಂದಿನ ವರ್ಷ ತೆರೆಗೆ ಬರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?