ಮನೆಯ ಸ್ಟಾಫ್‌ಗೆ ಕೊರೋನಾ: ಸುಳ್ಳುಸುದ್ದಿ ಹರಡ್ಬೇಡಿ ಎಂದ ಬೋನಿ ಕಪೂರ್

By Suvarna NewsFirst Published May 20, 2020, 11:56 AM IST
Highlights

ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಾರದ ಬಗ್ಗೆ ಬೋನಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ಓದಿ

ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಾರದ ಬಗ್ಗೆ ಬೋನಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.

"ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿರೋದು ನಿಜ.. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ನಾನು ನನ್ನ ಮಕ್ಕಳು ಆರೋಗ್ಯವಾಗಿದ್ದೇವೆ.. ನಮ್ಮಲ್ಲಿ ಯಾರಿಗೂ ಕೊರೊನಾ‌ ಲಕ್ಷಣಗಳು ಕಂಡು ಬಂದಿಲ್ಲ ಎಂದಿದ್ದಾರೆ.

ಮೆಸರಾತಿ, BMW ಒಡತಿ ಸನ್ನಿ ಲಿಯೋನ್‌ಗೆ ಬೇಕಂತೆ ಈ ಕಾರು!

ನಾವು 14 ದಿನಗಳ ಕಾಲ ಹೌಸ್ ಕ್ವಾರಂಟೈನ್ ನಲ್ಲಿ ಇರುತ್ತೇವೆ.ಯಾರು ಗಾಳಿಸುದ್ದಿಗಳನ್ನು ಹಬ್ಬಿಸಬಾರದು ಅಂತ ಮಾಹಿತಿ ನೀಡುತ್ತಿದ್ದೇನೆ ಎಂದು ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಹೇಳಿದ್ದಾರೆ.

 
 
 
 
 
 
 
 
 
 
 
 
 

Staying at home is still the best solution we have. Stay safe everyone 🙏🏻

A post shared by Janhvi Kapoor (@janhvikapoor) on May 19, 2020 at 5:07am PDT

ನಮ್ಮ ಮನೆಯ ಸಹಾಯಕ ಚರಣ್ ಸಾಹು(23)ಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಅನಾರೋಗ್ಯ ಕಂಡು ಬಂದ ಹಿನ್ನೆಲೆ ಪರೀಕ್ಷೆ ನಡೆಸಿದಾಗ ಕೊರೋನ ಆಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಆತನನ್ನು ಐಸೋಲೇಷನ್‌ನಲ್ಲಿರಿಸಲಾಗಿದೆ.

ಎಲ್ಲರೂ ಸಣ್ಣ ಆಗ್ಬೇಕು ಅಂದ್ರೆ ಈ ನಟಿ ಮಾತ್ರ ದಪ್ಪ ಆಗೋಕೆ ಐಡಿಯಾ ಕೇಳ್ತಿದ್ದಾರೆ; ಇದು 'ಮಿಮಿ' ಕಥೆ!

ನನ್ನ ಮಕ್ಕಳು ಹಾಗೂ ಮನೆಯಲ್ಲಿರುವ ಇತರ ಸಿಬ್ಬಂದಿಯಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ನಾವು ಲಾಕ್‌ಡೌನ್ ನಂತರ ಮನೆಯಿಂದ ಹೊರಗೆ ಬಂದಿಲ್ಲ. ಮುಂದಿನ 14 ದಿನ ನಾವೆಲ್ಲರೂ ಕ್ವಾರೆಂಟೈನ್‌ನಲ್ಲಿರುತ್ತೇವೆ. ನಾವು ಸರ್ಕಾರದ ಎಲ್ಲ ಸೂಚನೆಗಳನ್ನೂ ಪಾಲಿಸುತ್ತೇವೆ. ಮಹಾರಾಷ್ಟ್ರ ಸರ್ಕಾರದ ತ್ವರಿತ ಸ್ಪಂದನೆಗೆ ಧನ್ಯವಾದ ಎಂದಿದ್ದಾರೆ.

ಗಾಸಿಪ್‌ಗಳನ್ನು, ಸುಳ್ಳುಸುದ್ದಿಗಳನ್ನು ಪ್ರಚಾರ ಮಾಡಬಾರದು ಎಂಬುದಕ್ಕಾಗಿ ನಾನೇ ಈ ವಿಚಾರ ಖದ್ದಾಗಿ ನಿಮಗೆ ತಿಳಿಸುತ್ತಿದ್ದೇನೆ. ಚರಣ್ ಶೀಘ್ರ ಗುಣಮುಖನಾಗಲಿದ್ದಾನೆ ಎಂಬ ನಂಬಿಕೆ ಇದೆ ಎಂದು ಬರೆದುಕೊಂಡಿದ್ದಾರೆ.

click me!