ನಟ ನವಾಜುದ್ದೀನ್‌ಗೆ ವಾಟ್ಸಾಪ್‌ನಲ್ಲಿ 2ನೇ ಪತ್ನಿ ವಿಚ್ಛೇದನ ನೋಟಿಸ್‌!

Published : May 19, 2020, 11:58 AM IST
ನಟ ನವಾಜುದ್ದೀನ್‌ಗೆ ವಾಟ್ಸಾಪ್‌ನಲ್ಲಿ 2ನೇ ಪತ್ನಿ ವಿಚ್ಛೇದನ ನೋಟಿಸ್‌!

ಸಾರಾಂಶ

ನಟ ನವಾಜುದ್ದೀನ್‌ಗೆ ವಾಟ್ಸಾಪ್‌ನಲ್ಲಿ 2ನೇ ಪತ್ನಿ ವಿಚ್ಛೇದನ ನೋಟಿಸ್‌| ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಸ್ಪೀಡ್‌ ಪೋಸ್ಟ್‌ಗೆ ಅವಕಾಶ ಇಲ್ಲದ ಕಾರಣ ಮೇ 7ರಂದು ಇ-ಮೇಲ್‌ ಮತ್ತು ವಾಟ್ಸ್‌ ಆ್ಯಪ್‌ ಮೂಲಕ ನೋಟಿಸ್‌ ರವಾನೆ

ನವದೆಹಲಿ(ಮೇ.19: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಖಿ ಅವರ ಪತ್ನಿ ಆಲಿಯಾ ಸಿದ್ದಿಖಿ ಅವರು ವಿಚ್ಛೇದನ ಕೋರಿ ನವಾಜುದ್ದೀನ್‌ ಅವರಿಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಸ್ಪೀಡ್‌ ಪೋಸ್ಟ್‌ಗೆ ಅವಕಾಶ ಇಲ್ಲದ ಕಾರಣ ಮೇ 7ರಂದು ಇ-ಮೇಲ್‌ ಮತ್ತು ವಾಟ್ಸ್‌ ಆ್ಯಪ್‌ ಮೂಲಕ ನೋಟಿಸ್‌ ರವಾನಿಸಿದ್ದಾರೆ.

ನವಾಜುದ್ದೀನ್‌ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಲಿಯಾ ಪರ ವಕೀಲ ತಿಳಿಸಿದ್ದಾರೆ. ಸಿದ್ದಿಖಿ ಮತ್ತು ಆಲಿಯಾ ಅವರು 2009ರಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆಲಿಯಾ ಅವರನ್ನು ವರಿಸುವ ಮುನ್ನ ಶೀಬಾ ಎಂಬವರನ್ನು ಸಿದ್ದಿಖಿ ವಿವಾಹವಾಗಿದ್ದರು.

ಅನಾರೋಗ್ಯಪೀಡಿತರಾಗಿರುವ ತಾಯಿ ನೋಡಲು ಉತ್ತರ ಪ್ರದೇಶದ ಬುಢಾನಾಗೆ ಸಿದ್ದಿಖಿ ಅವರು ಹೋಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ನವಾಜುದ್ದೀನ್‌ ಹಾಗೂ ಅವರ ಕುಟುಂಬದವರನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು