ಕರ್ನಾಟಕದಲ್ಲಿ ಯಾಕೆ ಚುನಾವಣೆಗೆ ನಿಲ್ತಿಲ್ಲ ಅಣ್ಣಾಮಲೈ?

By Suvarna NewsFirst Published May 18, 2020, 4:49 PM IST
Highlights

ಕರ್ನಾಟಕದಲ್ಲಿ ಅಣ್ಣಾಮಲೈ ಅವರಿಗೆ ಯುವ ಅಭಿಮಾನಿಗಳು ಸಾಕಷ್ಟಿದ್ದಾರೆ. ಅವರ ಸ್ಪೂರ್ತಿಯುತ ಭಾಷಣಗಳು, ನಡೆನುಡಿ, ಜನರನ್ನು ಸಾಕಷ್ಟು ಸೆಳೆದಿವೆ. ಆದರೂ ಅವರು ಕರ್ನಾಟಕದಿಂದ ಚುನಾವಣೆಗೆ ನಿಲ್ಲಲು ಮನಸ್ಸು ಮಾಡಿಲ್ಲ. ಇಲ್ಲಿ ನಿಂತಿದ್ದರೆ ಅವರು ಗೆಲ್ಲುವುದು ಸುಲಭವಿತ್ತು. ಆದರೆ ತಮಿಳುನಾಡಿನಲ್ಲೇ ನಿಲ್ಲುವ ಯೋಚನೆ ಅವರದು. ಅದ್ಯಾಕೆ?

ಚಿಕ್ಕಮಗಳೂರಿನ ಎಸ್ಪಿಯಾಗಿ, ಬೆಂಗಳೂರಿನ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿ, ದುಷ್ಟ ಮಾಫಿಯಾಗಳ ಹೆಡೆಮುರಿ ಕಟ್ಟಿ, ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ, ಕಳೆದ ಜೂನ್‌ನಲ್ಲಿ ತಮ್ಮ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಹುಟ್ಟೂರು ತಮಿಳುನಾಡಿನ ಹುಟ್ಟೂರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಕೃಷಿಯಲ್ಲಿ ತೊಡಗುವ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ, ರಾಜಕೀಯ ಸೇರುವ ತಮ್ಮ ಇಂಗಿತ ಹೊರಹಾಕಿದ್ದರು. ಈಗ, ೨೦೨೧ರಲ್ಲಿ ನಡೆಯುವ ತಮಿಳುನಾಡಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಯುವ ಅಭಿಮಾನಿಗಳು ಸಾಕಷ್ಟಿದ್ದಾರೆ. ಅವರ ಸ್ಪೂರ್ತಿಯುತ ಭಾಷಣಗಳು, ನಡೆನುಡಿ, ಜನರನ್ನು ಸಾಕಷ್ಟು ಸೆಳೆದಿವೆ. ಆದರೂ ಅವರು ಕರ್ನಾಟಕದಿಂದ ಚುನಾವಣೆಗೆ ನಿಲ್ಲಲು ಮನಸ್ಸು ಮಾಡಿಲ್ಲ. ಇಲ್ಲಿ ನಿಂತಿದ್ದರೆ ಅವರು ಗೆಲ್ಲುವುದು ಸುಲಭವಿತ್ತು. ಆದರೆ ತಮಿಳುನಾಡಿನಲ್ಲೇ ನಿಲ್ಲುವ ಯೋಚನೆ ಅವರದು. ಅದ್ಯಾಕೆ?

ನಂಬಲರ್ಹ ಮೂಲಗಳು ತಿಳಿಸುವಂತೆ ಎರಡು ಸಾಧ್ಯತೆಗಳಿವೆ. ಒಂದು, ಅವರು ಪಕ್ಷೇತರರಾಗಿ ಚುನಾವಣೆಗೆ ನಿಲ್ಲಲು ಬಯಸಿದ್ದಾರೆ. ಅವರು ಯಾವುದೇ ಪಕ್ಷವನ್ನು ಸೇರುವ ಇಚ್ಛೆಯನ್ನು ಇದುವರೆಗೂ ವ್ಯಕ್ತಪಡಿಸಿಲ್ಲ. ಹೀಗಾಗಿ ಅವರು ಪಕ್ಷೇತರರಾಗಿ ನಿಲ್ಲುವುದು ಖಚಿತ. ಆದರೆ ಕರ್ನಾಟಕದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲುವುದು ಕಷ್ಟಸಾಧ್ಯ. ಎಷ್ಟೇ ಜನಪ್ರಿಯತೆ ಇದ್ದವರನ್ನೂ ಕರ್ನಾಟಕದ ಜನತೆ ಪಕ್ಷೇತರರಾಗಿ ನೋಡಲು ಬಯಸುವುದಿಲ್ಲ. ಹೀಗಾಗಿ ಅವರು ತಮ್ಮೂರಿನಲ್ಲೇ ಚುನಾವಣೆಗೆ ನಿಲ್ಲುತ್ತಾರೆ. ಅಲ್ಲೂ ಅವರಿಗೆ ಸಾಕಷ್ಟು ಜನಪ್ರಿಯತೆ, ಫ್ಯಾನ್‌ ಫಾಲೋವಿಂಗ್‌ ಇದೆ. ತಮಿಳುನಾಡಿನ ಜನ ಪಕ್ಷೇತರರನ್ನು ಆರಿಸುತ್ತಾರೆ. ಇನ್ನೊಂದು ಅಭಿಪ್ರಾಯ ಎಂದರೆ, ಅಣ್ಣಾಮಲೈ ಅವರು ಮೊದಲಿನಿಂದಲೂ ಬಿಜೆಪಿಯ ಬಗ್ಗೆ ಮೃದು ಭಾವನೆ ಹೊಂದಿದ್ದಾರೆ. ಮೋದಿಯವರ ಸುಧಾರಣಾ ಕಾರ್ಯಕ್ರಮಗಳ ಬಗ್ಗೆ ಆಗಾಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅವರ ನಡೆನುಡಿಯ ಸ್ಫೂರ್ತಿಯ ಉದಾಹರಣೆಗಳನ್ನು ತಮ್ಮ ಭಾಷಣದಲ್ಲಿ ನೀಡುತ್ತಿದ್ದರು. ಬಿಜೆಪಿ ಕೂಡ ಅವರಿಗೆ ಚುನಾವಣೆಗೆ ನಿಲ್ಲುವ ಆಫರ್‌ ನೀಡಿತ್ತು. ಪ್ರಸ್ತುತ ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಪ್ರಭಾವಿ ಮುಖ ಇಲ್ಲ. ಅಣ್ಣಾಮಲೈ ಮೂಲಕ ಈ ಕೊರತೆ ನೀಗಲಿದೆ. ಈಗ ಸ್ವತಂತ್ರರಾಗಿ ನಿಂತು ಗೆದ್ದು ನಂತರ ಬಿಜೆಪಿ ಸೇರಬಹುದು ಅಥವಾ ಬಿಜೆಪಿ ಸೇರಿ ಸ್ಪರ್ಧಿಸಬಹುದು- ಎರಡೂ ಸಾಧ್ಯತೆಗಳು ಅವರಿಗೆ ತೆರೆದೇ ಇವೆ. ಏನೇ ಇದ್ದರೂ ಮುಂದಿನ ಚುನಾವಣೆಯ ವೇಳೆಗೆ ಅವರ ಇಂಗಿತ ಗೊತ್ತಾಗುವುದು ಖಂಡಿತ. 

ರಾಜಕೀಯಕ್ಕೆ ‘ಕರ್ನಾಟಕ ಸಿಂಗಂ‘ ಅಣ್ಣಾಮಲೈ ಪ್ರವೇಶ! 

ಕರ್ನಾಟಕದಲ್ಲಿ ಅಣ್ಣಾಮಲೈ ಬಗ್ಗೆ ದಂತಕತೆಗಳೇ ಇವೆ. ಅವರು ಚಿಕ್ಕಮಗಳೂರಿನ ಎಸ್ಪಿಯಾಗಿ ಬಂದಾಗ ಜಿಲ್ಲೆಯ ಕಾನೂನು ಪರಿಸ್ಥಿತಿ ಹದಗೆಟ್ಟಿತ್ತು. ಕ್ರಿಕೆಟ್‌ ಬೆಟ್ಟಿಂಗ್, ಇಸ್ಪೀಟ್ ಆಟ ರಾಜಾರೋಷವಾಗಿ ನಡೆಯುತ್ತಿತ್ತು. ಎಸ್ಪಿ ಆಗಿ ಅಣ್ಣಾಮಲೈ ಎಂಟ್ರಿ ಕೊಟ್ಟು ಇಸ್ಪೀಟ್ ಅಡ್ಡೆಗಳನ್ನು ಮಟ್ಟ ಹಾಕಿದರು. ಹಫ್ತಾ ವಸೂಲಿ ಮಾಡುತ್ತಿದ್ದ ಪೊಲೀಸರನ್ನು ನಿಯಂತ್ರಿಸಿ, ಮರು ಮಾಫಿಯಾವನ್ನು ಹೆಡೆಮುರಿ ಕಟ್ಟಿದರು. ದತ್ತ ಜಯಂತಿಯ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ಪರಿಸ್ಥಿತಿ ಹದಗೆಟ್ಟಾಗ, ದಿನವಿಡೀ ಕರ್ತವ್ಯ ನಿರ್ವಹಿಸಿ ತಹಬಂದಿಗೆ ತಂದಿದ್ದರು. ಪೆಟ್ರೋಲ್‌ ಬಾಂಬ್ ತಯಾರಿಸಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಿದರು. ಗಲಭೆಗಳ ಸಂದರ್ಭದಲ್ಲಿ ಪೊಲೀಸರು ಗಾಯಗೊಂಡರೆ ಅವರ ಬಳಿಗೆ ತೆರಳಿ ಕ್ಷೇಮ ವಿಚಾರಿಸಿ, ಪೊಲೀಸರ ಆರೋಗ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದುದರಿಂದ ತಮ್ಮ ಇಲಾಖೆಯಲ್ಲೂ ಡಾರ್ಲಿಂಗ್‌ ಆಗಿದ್ದರು. 

ಲಾಕ್‌ಡೌನ್ 4.0: ಬಸ್, ಆಟೋ, ಟ್ಯಾಕ್ಸಿ ರಸ್ತೆಗಿಳಿಯೋದು ಪಕ್ಕಾ! 

ಭಾರೀ ಮಳೆಯಿಂದ ಗುಡ್ಡ ಕುಸಿದು ಚಾರ್ಮಾಡಿ ಘಾಟಿ ಬ್ಲಾಕ್‌ ಆದಾಗ, ತುರ್ತು ಕಾರ್ಯಾಚರಣೆ ಪಡೆಯೊಂದಿಗೆ ತಾವೂ ಸ್ಥಳಕ್ಕೆ ಧಾವಿಸಿ, ರಸ್ತೆಗೆ ಬಿದ್ದಿದ್ದ ಮೊಣಕಾಲೆತ್ತರದ ಕೆಸರು ನೀರಿನಲ್ಲಿ ಓಡಾಡಿ ರಸ್ತೆ ತೆರವು ಮಾಡುವಲ್ಲಿ ಸಹಕರಿಸಿದ್ದರು. ನಡುರಾತ್ರಿ ರಸ್ತೆಯಲ್ಲಿ ಟಯರ್‌ ಪಂಕ್ಚರ್‌ ಆಗಿ ನಿಂತುಹೋಗಿ ಕಂಗಾಲಾದ ಪ್ರಯಾಣಿಕರ ಕಾರಿನ ಟಯರ್‌ಗಳನ್ನು ತಾವೇ ಪಂಕ್ಚರ್‌ ಹಾಕಿ ಸರಿಮಾಡಿ ಕೊಟ್ಟ ಉದಾಹರಣೆಯೂ ಇದೆ. ಇಂಥದೆಲ್ಲ ನಡವಳಿಕೆಗಳಿಂದ ಅಣ್ಣಾಮಲೈ ಜನರೆಲ್ಲರ ಡಾರ್ಲಿಂಗ್‌ ಆಗಿದ್ದರು. ಬೆಂಗಳೂರಿಗೆ ಬಂದ ನಂತರವೂ ಅವರ ಸ್ಫೂರ್ತಿಯುತ ಭಾಷಣಗಳು ಯುವಜನತೆಯಲ್ಲಿ ಉತ್ಸಾಹ ಮೂಡಿಸುವಂತಿದ್ದವು. 

250 ಕೋಟಿ ಆಸ್ತಿಯ ಒಡತಿ ಮಾಧುರಿ, ಸಿನಿಮಾ ಬಿಟ್ಟು ಹೀಗೂ ಸಂಪಾದನೆ! 
ಅದೇನೇ ಇದ್ದರೂ ಅಣ್ಣಾಮಲೈ ಅವರು ರಾಜಕಾರಣಿಯಾಗಿ ಜನಹಿತದ ಕಾರ್ಯವನ್ನು ನಿರ್ವಹಿಸುತ್ತಾರೆ ಎಂಬುದರಲ್ಲಿ ಮಾತ್ರ ಯಾವ ಸಂಶಯವೂ ಇಲ್ಲ. 

click me!