
ನಾಳೆ ದೇಶಾದ್ಯಂತ ಮತ್ತೊಂದು ದುರಂಧರ್ ಸಿನೆಮಾ ತೆರೆ ಕಾಣಲಿದೆ. ಭಾರತದ ಅತಿ ಪ್ರಸಿದ್ಧ ಮತ್ತು ಕಠಿಣ ಕ್ರಿಮಿನಲ್ ಪ್ರಕರಣಗಳನ್ನು ಹ್ಯಾಂಡಲ್ ಮಾಡಿದ ವಿಶೇಷ ಸಾರ್ವಜನಿಕ ಅಭಿಯೋಜಕ (Special Public Prosecutor) ಉಜ್ವಲ್ ನಿಕಮ್ ಅವರ ನೈಜ ಜೀವನದ ಹೋರಾಟವನ್ನು ಈ ಸಿನಿಮಾ ಅನಾವರಣಗೊಳಿಸಲಿದೆ. ಆದರೆ ಇದನ್ನು ಮತ್ತೊಂದು ದುರಂಧರ್ ಚಿತ್ರ ಎನ್ನುವುದು ಯಾಕೆ?
ಸಾಮಾನ್ಯ ಸಿನಿಮಾಗಳಂತೆ ಇದರಲ್ಲಿ ಕೇವಲ ಕಾಲ್ಪನಿಕ ಪಂಚಿಂಗ್ ಡೈಲಾಗ್ಗಳಿರುವುದಿಲ್ಲ. ಬದಲಿಗೆ, ಕೋರ್ಟ್ರೂಮ್ನಲ್ಲಿ ಕಸಬ್ ವಿರುದ್ಧ ಉಜ್ವಲ್ ನಿಕಮ್ ಅವರು ಮಂಡಿಸಿದ ನೈಜ ಸಾಕ್ಷ್ಯಗಳು, ಕಾನೂನು ತರ್ಕ ಮತ್ತು ಬುದ್ಧಿವಂತಿಕೆ ನಡೆಗಳು ಚಿತ್ರದ ಜೀವಾಳವಾಗಿದೆ ಎನ್ನಲಾಗಿದೆ. ಅಲ್ಲದೇ ಇದು ಸಹ ಉಗ್ರ ಅಜ್ಮಲ್ ಕಸಬ್ಗೆ ಸಂಬಂಧಿಸದ್ದಾಗಿದೆ.
ದೇಶವನ್ನೇ ನಡುಗಿಸಿದ್ದ ಮುಂಬೈ ಉಗ್ರರ ದಾಳಿಯ ನಂತರ, ಜೀವಂತವಾಗಿ ಸಿಕ್ಕಿಬಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ಗೆ ಭಾರತೀಯ ಕಾನೂನಿನ ಚೌಕಟ್ಟಿನಲ್ಲೇ ಗಲ್ಲು ಶಿಕ್ಷೆ ಕೊಡಿಸಲು ನಡೆಸಿದ ಸುದೀರ್ಘ ನ್ಯಾಯಾಂಗ ಹೋರಾಟವೇ ಮುಖ್ಯ ಈ ಚಿತ್ರದ ಕಥಾ ಹಂದರವಾಗಿದೆ. ಅಲ್ಲದೇ ಒಂದೊಂದು ಪಾತ್ರಕ್ಕೆ ನಟರು ಜೀವ ತುಂಬಿದ್ದಾರೆ. ಹಾಗಾದರೆ ಯಾರು-ಯಾರು ನಟಿಸಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
ಉಜ್ವಲ್ ನಿಕಮ್ ಪಾತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ರಾಜಕುಮಾರ್ ರಾವ್ ನಟಿಸಿದ್ದರೆ, ಕಟುಕ ಕಸಬ್ ಪಾತ್ರದಲ್ಲಿ ಲಲಿತ್ ಪ್ರಭಾಕರ್ ಅಬ್ಬರಿಸಿದ್ದಾರೆ. ಜೊತೆಗೆ ಜೈದೀಪ್ ಅಹ್ಲಾವತ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇಲ್ಲಿ ಕಟುಕ ಕಸಬ್ ಅಲ್ಲದೇ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ದೇಶದ ಇತಿಹಾಸದಲ್ಲೇ ನಡೆದ ಅತಿ ದೊಡ್ಡ ಕ್ರಿಮಿನಲ್ ಕೇಸ್ಗಳ ಇನ್ಸೈಡ್ ಸ್ಟೋರಿ ಇಲ್ಲಿದೆ.
ರಾಷ್ಟ್ರಪ್ರಶಸ್ತಿ ವಿಜೇತ ಮತ್ತು ಒಟಿಟಿಯಲ್ಲಿ ಸೂಪರ್ ಹಿಟ್ ಆಗಿದ್ದ 'ಪಾತಾಳ್ ಲೋಕ್' ಖ್ಯಾತಿ ಅವಿನಾಶ್ ಅರುಣ್ ಈ ಚಿತ್ರ ನಿರ್ದೇಶಿಸಿದ್ದು, ಮೇಕಿಂಗ್ ಮತ್ತು ಚಿತ್ರಕಥೆ ಅತ್ಯಂತ ನೈಜವಾಗಿ ಮೂಡಿಬಂದಿದೆ ಎನ್ನಲಾಗಿದ್ದು ತೆರೆ ಕಂಡ ಮೇಲೆ ಅದರ ವಾಸ್ತವತೆಯನ್ನು ಕಾಣಲು ಇನ್ನೊಂದಿನ ಕಾಯಬೇಕಿದೆ. ನಾಳೆ (ಶುಕ್ರವಾರ) ದೇಶಾದ್ಯಂತ ಸಿನಿಮಾ ತೆರೆಗೆ ಬರುತ್ತಿದ್ದು, ಕಮರ್ಷಿಯಲ್ ಸಿನಿಮಾಗಳ ನಡುವೆ ಈ ಕಂಟೆಂಟ್ ಆಧಾರಿತ ಮತ್ತೊಂದು ದುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.