ಸೌತ್ ಇಂಡಿಯಾದ ನೂರಾರು ಕುಟುಂಬಗಳಿಗೆ ಆಸರೆಯಾದ ರಶ್ಮಿಕಾ ಮಂದಣ್ಣ; ಈ ಕಾರ್ಯಕ್ಕೆ 'ಜಯಮ್ಮ' ಕೊಡುಗೆ ಏನು?

Published : Oct 14, 2026, 02:49 PM IST
Rashmika Mandanna Vijay Deverakonda

ಸಾರಾಂಶ

ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ತಾವು ನಿರ್ವಹಿಸುವ ಪಾತ್ರಗಳು ತಮ್ಮ ವ್ಯಕ್ತಿತ್ವದ ಮೇಲೂ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ. ‘ಜಯಮ್ಮ ಮತ್ತು ನನ್ನ ನಡುವೆ ಏನಾದರೂ ಸಾಮ್ಯತೆ ಇದೆಯೇ ಎಂದು ಹಲವರು ಕೇಳುತ್ತಿರುತ್ತೀರಿ. ಅದಕ್ಕೆ ನನ್ನ ಉತ್ತರ ಹೌದು' ಎಂದಿದ್ದಾರೆ.

400 ಕುಟುಂಬಗಳಿಗೆ ಆಸರೆಯಾದ ರಶ್ಮಿಕಾ ಮಂದಣ್ಣ! ಒಂದು ವರ್ಷ ದಿನಸಿ ವೆಚ್ಚ ಭರಿಸಿ 'ಜಯಮ್ಮ' ಆಗ್ಬಿಟ್ರಾ?

ನ್ಯಾಷನಲ್ ಕ್ರಶ್ ಎಂದೇ ಅಭಿಮಾನಿಗಳ ಮನಗೆದ್ದಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ತಮ್ಮ ಸಮಾಜಮುಖಿ ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ. ಬೆಳ್ಳಿತೆರೆಯ ಮೇಲೆ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ರಶ್ಮಿಕಾ, ನಿಜ ಜೀವನದಲ್ಲಿಯೂ ಮಾನವೀಯತೆಗೆ ಮಹತ್ವ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದಿನ ಒಂದು ವರ್ಷದ ಅವಧಿಗೆ ಬರೋಬ್ಬರಿ 400 ಕುಟುಂಬಗಳಿಗೆ ನೆರವು ನೀಡಲು ಮುಂದಾಗಿರುವ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ಆ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಈ ನಿರ್ಧಾರದ ಮೂಲಕ ಇತರರಿಗೂ ಸಮಾಜಕ್ಕೆ ನೆರವಾಗುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡಬೇಕು ಎಂಬುದು ಅವರ ಆಶಯವಾಗಿದೆ.

ಸದ್ಯ ಪತಿ ವಿಜಯ್ ದೇವರಕೊಂಡ ಜೊತೆ ನಟಿಸಿರುವ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾದ ನಿರೀಕ್ಷೆಯಲ್ಲಿರುವ ರಶ್ಮಿಕಾ, ಚಿತ್ರದಲ್ಲಿನ ತಮ್ಮ ‘ಜಯಮ್ಮ’ ಪಾತ್ರದ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಸಿನಿಮಾದ ಪಾತ್ರಕ್ಕೂ ತಮ್ಮ ನೈಜ ವ್ಯಕ್ತಿತ್ವಕ್ಕೂ ಇರುವ ಸಾಮ್ಯತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಜಯಮ್ಮನಿಗೂ ನನಗೂ ಒಂದು ಸಾಮ್ಯತೆ ಇದೆ’ ಎಂದ ರಶ್ಮಿಕಾ!

ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ತಾವು ನಿರ್ವಹಿಸುವ ಪಾತ್ರಗಳು ತಮ್ಮ ವ್ಯಕ್ತಿತ್ವದ ಮೇಲೂ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ. ‘ಜಯಮ್ಮ ಮತ್ತು ನನ್ನ ನಡುವೆ ಏನಾದರೂ ಸಾಮ್ಯತೆ ಇದೆಯೇ ಎಂದು ಹಲವರು ಕೇಳುತ್ತಿರುತ್ತೀರಿ. ಅದಕ್ಕೆ ನನ್ನ ಉತ್ತರ ಹೌದು. ಇತರರಿಗೆ ಸಹಾಯ ಮಾಡುವ ಗುಣ ನನಗೂ ಇದೆ, ಜಯಮ್ಮನಿಗೂ ಇತ್ತು’ ಎಂಬ ಅರ್ಥದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ತಾವು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ತಂಡದ ಸದಸ್ಯರು ಹಾಗೂ ಆಪ್ತರ ವಲಯಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದುದಾಗಿ ರಶ್ಮಿಕಾ ತಿಳಿಸಿದ್ದಾರೆ. ಆದರೆ, ಈಗ ಇಂತಹ ಕೆಲಸವನ್ನು ಬಹಿರಂಗವಾಗಿ ಹಂಚಿಕೊಳ್ಳುವ ಉದ್ದೇಶ ಬೇರೆಯದೇ ಇದೆ. ತಮ್ಮ ನಡೆ ನೋಡಿ ಮತ್ತೊಬ್ಬರು ಒಂದು ಕುಟುಂಬಕ್ಕೆ ಅಥವಾ ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಲು ಮುಂದಾದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂಬುದು ಅವರ ಮಾತಿನ ಸಾರವಾಗಿದೆ.

400 ಕುಟುಂಬಗಳಿಗೆ ಒಂದು ವರ್ಷದ ದಿನಸಿ ನೆರವು!

ರಶ್ಮಿಕಾ ಕೈಗೊಂಡಿರುವ ಈ ಕಾರ್ಯದ ವಿಶೇಷವೆಂದರೆ, ಆಯ್ದ 400 ಕುಟುಂಬಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಇದರಿಂದ ಕುಟುಂಬಗಳು ದಿನಸಿ ಖರ್ಚಿನಲ್ಲಿ ಸ್ವಲ್ಪ ಹಣವನ್ನು ಉಳಿಸಿ ಮಕ್ಕಳ ಶಿಕ್ಷಣ, ಭವಿಷ್ಯದ ಯೋಜನೆಗಳು ಹಾಗೂ ಇತರ ಅಗತ್ಯಗಳಿಗೆ ಬಳಸಿಕೊಳ್ಳಬಹುದು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳು, ನಿದ್ದೆಯಿಲ್ಲದ ರಾತ್ರಿಗಳು, ನೋವು, ಗಾಯಗಳು ಮತ್ತು ಕಣ್ಣೀರಿಗೆ ಈ ಕುಟುಂಬಗಳ ಮುಖದಲ್ಲಿ ಮೂಡುವ ನಗು ಬೆಲೆಕಟ್ಟಲಾಗದ ಪ್ರತಿಫಲ ನೀಡುತ್ತದೆ ಎಂದು ರಶ್ಮಿಕಾ ಭಾವುಕರಾಗಿ ಹೇಳಿಕೊಂಡಿದ್ದಾರೆ. ಒಳ್ಳೆಯ ಕೆಲಸ ಮಾಡಲು ದೊಡ್ಡ ಮೊತ್ತದ ಹಣ ಅಥವಾ ಭಾರೀ ಯೋಜನೆಯೇ ಬೇಕಿಲ್ಲ; ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಣ್ಣ ನೆರವಿನಿಂದಲೇ ಬದಲಾವಣೆಗೆ ನಾಂದಿ ಹಾಡಬಹುದು ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

ದಿನಸಿ ಕಿಟ್‌ನಲ್ಲಿ ಏನೇನಿರಲಿದೆ?

ಪ್ರತಿ ಕುಟುಂಬಕ್ಕೆ ಮೂರು ತಿಂಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ದಿನಸಿ ಕಿಟ್ ಸಿದ್ಧಪಡಿಸಲಾಗಿದೆ ಎಂದು ಹಂಚಿಕೊಳ್ಳಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ 75 ಕೆಜಿ ಅಕ್ಕಿ, 10 ಕೆಜಿ ಗೋಧಿ ಹಿಟ್ಟು, 3 ಕೆಜಿ ರಾಗಿ, 10 ಲೀಟರ್ ಅಡುಗೆ ಎಣ್ಣೆ ಹಾಗೂ ಮೂರು ವಿಧದ ಒಟ್ಟು 15 ಕೆಜಿ ಬೇಳೆಕಾಳುಗಳು ಸೇರಿವೆ. ಜೊತೆಗೆ 2 ಕೆಜಿ ಸೋಯಾ ಚಂಕ್ಸ್, ತಲಾ 3 ಕೆಜಿ ಉಪ್ಪು ಮತ್ತು ಸಕ್ಕರೆ, 1 ಕೆಜಿ ಖಾರದ ಪುಡಿ, ತಲಾ 500 ಗ್ರಾಂ ಅರಿಶಿನ ಪುಡಿ, ಹುಣಸೆಹಣ್ಣು ಮತ್ತು ಚಹಾ ಪುಡಿಯನ್ನೂ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಹೈದರಾಬಾದ್, ಮಹಬೂಬ್‌ನಗರ, ಅನಂತಪುರ, ಬೆಂಗಳೂರು, ಕೊಚ್ಚಿ, ಚೆನ್ನೈ, ಕೊಡಗು ಮತ್ತು ವಿಜಯವಾಡದ ಆಯ್ದ ಕುಟುಂಬಗಳಿಗೆ ಈ ನೆರವು ತಲುಪಲಿದೆ ಎನ್ನಲಾಗಿದೆ.

‘ರಶ್ಮಿಕಾ ಮಂದಣ್ಣ’ ಬದಲು ‘ರಶ್ಮಿಕಾ ದೇವರಕೊಂಡ’!

ಈ ಪೋಸ್ಟ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದ ಮತ್ತೊಂದು ಸಂಗತಿಯೆಂದರೆ, ರಶ್ಮಿಕಾ ತಮ್ಮ ಹೆಸರನ್ನು ‘ರಶ್ಮಿಕಾ ಮಂದಣ್ಣ’ ಬದಲಿಗೆ ‘ರಶ್ಮಿಕಾ ದೇವರಕೊಂಡ’ ಎಂದು ಉಲ್ಲೇಖಿಸಿರುವುದು. ವಿಜಯ್ ದೇವರಕೊಂಡ ಅವರೊಂದಿಗೆ ವೈವಾಹಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿರುವ ನಟಿಯ ಈ ಹೆಸರು ಬದಲಾವಣೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಸಿನಿಮಾದ ಯಶಸ್ಸು ಮತ್ತು ಸ್ಟಾರ್‌ಡಮ್‌ಗಿಂತಲೂ ಮನುಷ್ಯತ್ವಕ್ಕೆ ಆದ್ಯತೆ ನೀಡುವ ಮೂಲಕ ರಶ್ಮಿಕಾ ಗಮನ ಸೆಳೆದಿದ್ದಾರೆ. 400 ಕುಟುಂಬಗಳಿಗೆ ನೆರವಾಗುವ ಅವರ ಈ ನಿರ್ಧಾರ ಎಷ್ಟು ಜನರಿಗೆ ಸ್ಫೂರ್ತಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣದ ಯಶ್ 'ರಾವಣ' ಗೆಟಪ್ ಬಗ್ಗೆ ಬಾಲಿವುಡ್ ನಟ ಆರ್ಯ ಬಬ್ಬರ್ ಅಚ್ಚರಿಯ ಪ್ರಶ್ನೆ!
Premada Oorali: 'ಪ್ರೇಮದ ಊರಲಿ' ಮೆಚ್ಚಿ ರಿಯಲ್ ಸ್ಟಾರ್ ನಟ ಉಪೇಂದ್ರ ಹೇಳಿದ್ದು 'ಭಾರೀ ತೂಕದ ಮಾತು!'