ಇಬ್ಬರು ಮನೆಗೆಲಸದ ಹೆಂಗಸರ ಜೊತೆಯೇ ಸಂಬಂಧ, ನಟ ಓಂ ಪುರಿಯ ರಹಸ್ಯ ಬಿಚ್ಚಿಟ್ಟಿದ್ರು ಪತ್ನಿ ನಂದಿತಾ!

By Santosh Naik  |  First Published Oct 18, 2024, 6:31 PM IST

ಓಂ ಪುರಿ ಅವರ ಪತ್ನಿ ನಂದಿತಾ ಪುರಿ ಅವರು ಬರೆದ ಪುಸ್ತಕದಲ್ಲಿ, ಓಂ ಪುರಿ ಅವರು ತಮ್ಮ ಮನೆಯ ಇಬ್ಬರು ಮನೆಗೆಲಸದ ಹೆಂಗಸರ ಜೊತೆ ಸಂಬಂಧ ಹೊಂದಿದ್ದರು ಎಂದು ಬಹಿರಂಗಪಡಿಸಿದ್ದರು. ಇದರಿಂದಾಗಿ ಓಂ ಪುರಿ ಹಾಗೂ ನಂದಿತಾ ಪುರಿ ನಡುವಿನ ಸಂಬಂಧ ಇನ್ನಷ್ಟು ಹದಗೆಟ್ಟಿತ್ತು.


ಓಂ ಪುರಿ ಬಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರು. ಅವರ ಅಭಿನಯ ಇತರ ನಟರಿಗೆ ಸ್ಫೂರ್ತಿ. 2017 ರಲ್ಲಿ ಹೃದಯಾಘಾತದಿಂದ ಅವರು ನಿಧನರಾದರು.ಜೀವಂತವಾಗಿರುತ್ತಿದ್ದರೆ ಅವರಿಗೆ ಇಂದು 78 ವರ್ಷ ವಯಸ್ಸಾಗಿರುತ್ತಿತ್ತು.1950  ಅಕ್ಟೋಬರ್ 18 ರಂದು ಅಂಬಾಲದಲ್ಲಿ ಜನಿಸಿದ ಓಂ ಪುರಿ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದರು. ಹಿಂದಿ ಮಾತ್ರವಲ್ಲದೆ ವಿವಿಧ ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದರು. ಕನ್ನಡದಲ್ಲಿ ಅವರು ಶಿವರಾಜ್‌ ಕುಮಾರ್‌ ಅಭಿನಯದ ಎಕೆ 47 ಸಿನಿಮಾದಲ್ಲಿ ಪೊಲೀಸ್‌ ಕಮೀಷನರ್‌ ಯಶವಂತ್‌ ಸಿನ್ಹಾ ಪಾತ್ರದಲ್ಲಿ ನಟಿಸಿದ್ದರು. ದರ್ಶನ್‌ ಅಭಿನಯದ ಧ್ರುವ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿ ಪ್ರತಾಪ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಜೀವನ ಅದ್ಭುತವಾಗಿದ್ದರೆ, ಅವರ ವೈಯಕ್ತಿಕ ಜೀವನ ವಿವಾದಗಳಿಂದಲೂ ಕೂಡಿತ್ತು.ಅದರಲ್ಲೂ ಅವರ 2ನೇ ಪತ್ನಿ ನಂದಿತಾ ಪುರಿ ಬರೆದ, ಅನ್‌ಲೈಕ್ಲಿ ಹೀರೋ: ದ ಸ್ಟೋರಿ ಆಫ್‌ ಓಂ ಪುರಿ ಪುಸ್ತಕ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಇದರಲ್ಲಿ ನಂದಿತಾ ಪುರಿ, ಓಂ ಪುರಿಗೆ ಮನೆಯ ಇಬ್ಬರು ಮನೆಗೆಲಸದ ಹೆಂಗಸರ ಜೊತೆ ಅಕ್ರಮ ಸಂಬಂಧವಿತ್ತು ಎಂದು ಆರೋಪ ಮಾಡಿದ್ದರು.

 

Tap to resize

Latest Videos

ನಂದಿತಾ ಪುರಿ ಮಾಡಿದ್ದ ಆರೋಪವೇನು: ನಂದಿತಾ ಪುರಿ ವೃತ್ತಿಯಲ್ಲಿ ಪತ್ರಕರ್ತೆ. ಅವರು ಓಂ ಪುರಿ ಅವರ ಜೀವನ ಚರಿತ್ರೆಯನ್ನು ಬರೆದಿದ್ದರು. ಪುಸ್ತಕದ ಶೀರ್ಷಿಕೆ 'ಅನ್‌ಲೈಕ್ಲಿ ಹೀರೋ: ದಿ ಸ್ಟೋರಿ ಆಫ್ ಓಂ ಪುರಿ'. ಈ ಪುಸ್ತಕದಲ್ಲಿ ನಂದಿತಾ ಓಂ ಪುರಿ ಅವರ ಲೈಂಗಿಕ ಸಂಬಂಧಗಳ ಬಗ್ಗೆಯೂ ಮುಕ್ತವಾಗಿ ಬರೆದಿದ್ದಾರೆ. ಓಂ ಪುರಿ ಅವರಿಗೆ 14 ವರ್ಷ ವಯಸ್ಸಾಗಿದ್ದಾಗ, ಅವರು ಮನೆಯ ಸೇವಕಿ ಶಾಂತಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ನಂದಿತಾ ಹೇಳಿದ್ದಾರೆ. ಅಷ್ಟೇ ಅಲ್ಲ, ಮನೆಯ ಇನ್ನೊಬ್ಬ ಸೇವಕಿ ಲಕ್ಷ್ಮಿ ಜೊತೆಯೂ ಓಂ ಪುರಿ ದೀರ್ಘಕಾಲದ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ನಂದಿತಾ ಹೇಳಿದ್ದಾರೆ. ವಿಶೇಷವೆಂದರೆ, ಇದೆಲ್ಲವನ್ನೂ ಓಂ ಪುರಿ ಅವರೇ ನಂದಿತಾ ಅವರಿಗೆ ಹೇಳಿದ್ದರಂತೆ. ಆದರೆ, ಜೀವನ ಚರಿತ್ರೆ ಪ್ರಕಟವಾದಾಗ ಓಂ ಪುರಿ ಈ ಆರೋಪಗಳನ್ನು ನಿರಾಕರಿಸಿದರು ಮತ್ತು ನಂದಿತಾ ಅವರ ಮೇಲೆ ಆಕ್ರೋಶಗೊಂಡಿದ್ದರು.

ಓಂ ಪುರಿ ಹೇಳಿದ್ದೇನು?: 2009ರಲ್ಲಿ ಜೀವನ ಚರಿತ್ರೆ 'ಅನ್‌ಲೈಕ್ಲಿ ಹೀರೋ: ದಿ ಸ್ಟೋರಿ ಆಫ್ ಓಂ ಪುರಿ' ಪ್ರಕಟವಾದಾಗ, ಮಾಧ್ಯಮಗಳು ಲೈಂಗಿಕ ಸಂಬಂಧಗಳ ಬಗ್ಗೆ ಮಾಡಿದ್ದ ಆರೋಪಗಳನ್ನು ಹೈಲೈಟ್ ಮಾಡಿದವು. ಇದರಿಂದ ಓಂ ಪುರಿ ಕೋಪಗೊಂಡಿದ್ದರು.. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತಾ, "ಈ ಆರೋಪಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನ ಲೈಂಗಿಕ ಸಂಬಂಧಗಳ ಬಗ್ಗೆ ಅವಳು (ನಂದಿತಾ) ಮಾತನಾಡಿದ ರೀತಿ ನನ್ನ ದೊಡ್ಡ ಸಾಧನೆಯಂತೆ ಹೇಳುತ್ತಿರುವುದು ಬಹಳ ಕೆಟ್ಟದ್ದು' ಎಂದಿದ್ದರು.

ಪತ್ನಿ ನಂದಿತಾ ಮೇಲೆ ಓಂ ಪುರಿ ಕೋಪ:  "ನನ್ನ ಪತ್ನಿ ನನ್ನ ಜೀವನದ ಅತ್ಯಂತ ಮುಖ್ಯ ಮತ್ತು ಪವಿತ್ರ ಭಾಗವನ್ನು ಅಗ್ಗದ ಗಾಸಿಪ್ ಆಗಿ ಪರಿವರ್ತಿಸಿದ್ದಾಳೆ. ಪ್ರತಿಯೊಬ್ಬ ಪತಿಯಂತೆ ನಾನು ನನ್ನ ಪತ್ನಿಯ ಜೊತೆ ಈ ಗುಟ್ಟುಗಳನ್ನು ಹಂಚಿಕೊಂಡಿದ್ದೆ. ಅವಳು ಅವುಗಳನ್ನು ಬಹಿರಂಗಪಡಿಸಲು ನಿರ್ಧರಿಸಿದರೆ, ಕನಿಷ್ಠ ಅವುಗಳ ಬಗ್ಗೆ ಗೌರವ ಇಟ್ಟುಕೊಳ್ಳಬೇಕಿತ್ತು. ಆ ಅನುಭವಗಳು ನನ್ನ ಜೀವನದ ಅಮೂಲ್ಯ ಭಾಗ. ಸಮಾಜದಲ್ಲಿ ನನ್ನ ಸ್ಥಾನಮಾನದ ಬಗ್ಗೆ ಅವಳಿಗೆ ಯೋಚನೆ ಬರಲಿಲ್ಲವೇ? ನಾನು ಇಂದು ಸಾಧಿಸಿರುವುದಕ್ಕೆ ಶ್ರಮಪಟ್ಟಿದ್ದೇನೆ. ಅದೆಲ್ಲವನ್ನೂ ಹಾಳುಮಾಡಲು ಮತ್ತು ಸಂಚಲನ ಸೃಷ್ಟಿಸಲು ನಾನು ಅವಕಾಶ ನೀಡುವುದಿಲ್ಲ' ಎಂದು ಓಂ ಪುರಿ ಹೇಳಿದ್ದರು.

ಲಕ್ಷ್ಮಿ ಜೊತೆಗಿನ ಸಂಬಂಧ ಬಹಿರಂಗ ಮಾಡಿದ್ದಕ್ಕೆ ಓಂ ಪುರಿ ಆಕ್ಷೇಪ: ಓಂ ಪುರಿ ಅದೇ ಸಂದರ್ಶನದಲ್ಲಿ ತಮ್ಮ ಸೇವಕಿ ಲಕ್ಷ್ಮಿ ಬಗ್ಗೆ ಮಾತನಾಡಿ, ಅವರನ್ನು ತಮ್ಮ ಜೀವನದ ಪ್ರಮುಖ ಮಹಿಳೆಯರಲ್ಲಿ ಒಬ್ಬರೆಂದು ಬಣ್ಣಿಸಿದರು. "ನಂದಿತಾ ಯಾರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾಳೋ, ಅದೇ ಮಹಿಳೆ ನನ್ನನ್ನು ಮತ್ತು ನನ್ನ ಅನಾಥ ಸಹೋದರನ ಮಕ್ಕಳನ್ನು ಬೆಳೆಸಿದ್ದಾಳೆ. ಆ ಅದ್ಭುತ ಮಹಿಳೆ ಜೊತೆಗಿನ ನನ್ನ ಸಂಬಂಧ ನನ್ನ ಕಡೆಯಿಂದ ಆಕೆಗೆ ಸಲ್ಲಿಸಿದ ಗೌರವ' ಎಂದು ಹೇಳುವ ಮೂಲಕ ಲಕ್ಷ್ಮಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದನ್ನು ಓಂ ಪುರಿ ಒಪ್ಪಿಕೊಂಡಿದ್ದರು. ಆದರೆ ಅದು ಕೆಟ್ಟ ಅನುಭವವಾಗಿರಲಿಲ್ಲ ಎಂದೂ ಹೇಳಿದರು. ಈ ಸೂಕ್ಷ್ಮ ವಿಷಯಗಳನ್ನು ಯಾಕೆ ವಿಕೃತಗೊಳಿಸಲಾಗಿದೆ ಎನ್ನುವುದೇ ಅರ್ಥವಾಗಿಲ್ಲ ಎಂದಿದ್ದರು.

ಪ್ರೀತಿ-ತ್ಯಾಗದ ಮಿಂಚು ಮೂಡಿಸುವ ಕನ್ನಡದ 10 ಪ್ರೇಮ ಕಾದಂಬರಿಗಳು!

ನಂದಿತಾ ಅವರನ್ನು ತಡೆದಿದ್ದ ಓಂ ಪುರಿ: 2024ರಲ್ಲಿ ಸಿದ್ಧಾರ್ಥ್ ಕಣ್ಣನ್ ಜೊತೆ ಮಾತನಾಡುತ್ತಾ, ಓಂ ಪುರಿ ಸೇವಕಿಯ ವಿಷಯ ಹೇಳುತ್ತಿದ್ದಾಗ ತಾವು ಅವರನ್ನು ತಡೆದಿದ್ದಾಗಿ ನಂದಿತಾ ಹೇಳಿದ್ದಾರೆ. "ನಾನು ಅವರ ಸಂದರ್ಶನ ಮಾಡುತ್ತಿದ್ದಾಗ ನನ್ನ ಮಗ ತುಂಬಾ ಚಿಕ್ಕವನಾಗಿದ್ದ. ಲೈಂಗಿಕ ಪ್ರಸಂಗದ ಬಗ್ಗೆ ನೀವು ಹೀಗೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ನಾನು ಹೇಳಿದೆ. ಆಗ ಓಂ, 'ಯಾಕೆ? ನೀನು ಯಾಕೆ ಬೂಟಾಟಿಕೆ ಮಾಡುತ್ತಿದ್ದೀಯಾ? ನಾನು ಮದುವೆಯಾಗಿರಲಿಲ್ಲ, ಯಾವುದೇ ಸಂಬಂಧದಲ್ಲಿರಲಿಲ್ಲ. ಕಾರ್ಮಿಕ ವರ್ಗದವರ ಜೊತೆ ನನಗೆ ಸಣ್ಣ ಸಂಬಂಧವಿತ್ತು ಎಂದು ನಾನು ಯಾಕೆ ಹೇಳಬಾರದು?' ಎಂದು ಕೇಳಿದರು. ನಾನು, 'ಹೌದು, ಆದರೆ ನನಗೆ ಒಬ್ಬ ಮಗನೂ ಇದ್ದಾನೆ' ಎಂದೆ. ಆಗ ಅವರು, 'ಇಲ್ಲ, ಅವನಿಗೆ ಸತ್ಯ ತಿಳಿದಿರಬೇಕು' ಎಂದಿದ್ದರು.

F80 ಹೈಬ್ರಿಡ್‌ ಸೂಪರ್‌ ಕಾರ್‌ ಅನಾವರಣ ಮಾಡಿದ ಫೆರಾರಿ, 30 ಕೋಟಿಯ ಕಾರು ಕೆಲವೇ ನಿಮಿಷದಲ್ಲಿ ಸೋಲ್ಡ್‌ ಔಟ್‌!

1993 ರಲ್ಲಿ ಓಂ ಪುರಿ-ನಂದಿತಾ ವಿವಾಹ: ಓಂ ಪುರಿ ಅವರ ಮೊದಲ ವಿವಾಹ 1991 ರಲ್ಲಿ ಅನ್ನು ಕಪೂರ್ ಅವರ ಸಹೋದರಿ ಸೀಮಾ ಕಪೂರ್ ಜೊತೆ ನೆರವೇರಿತ್ತು. ಆದರೆ ಎಂಟು ತಿಂಗಳ ನಂತರ ಅವರು ಬೇರ್ಪಟ್ಟರು. 1993 ರಲ್ಲಿ ಓಂ ಪುರಿ ಪತ್ರಕರ್ತೆ ನಂದಿತಾ ಅವರನ್ನು ಮದುವೆಯಾದರು. ಅವರಿಗೆ ಈಶಾನ್ ಎಂಬ ಮಗನಿದ್ದಾನೆ. 2013ರಲ್ಲಿ ನಂದಿತಾ ಓಂ ಪುರಿ ವಿರುದ್ಧ ದೌರ್ಜನ್ಯದ ದೂರು ದಾಖಲಿಸಿದ ಬಳಿಕ ಬೇರೆ ಬೇರೆಯಾಗಿದ್ದರು.

 

click me!