Breaking: ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

Published : Oct 17, 2024, 09:52 PM ISTUpdated : Oct 17, 2024, 10:19 PM IST
Breaking: ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

ಸಾರಾಂಶ

ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳ ನಿರ್ದೇಶಕ ದೀಪಕ್ ಅರಸ್ ಗುರುವಾರ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಬೆಂಗಳೂರು (ಅ.17): ಮನಸಾಲಜಿ, ಶುಗರ್‌ ಫ್ಯಾಕ್ಟರಿ ಸಿನಿಮಾಗಳ ನಿರ್ದೇಶಕ ಹಾಗೂ ನಟಿ ಅಮೂಲ್ಯ ಅವರ ಸಹೋದರ ದೀಪಕ್‌ ಅರಸ್‌ ಗುರುವಾರ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ದೀಪಕ್‌ ಅರಸ್‌ ಬಳಲುತ್ತಿದ್ದರು ಎಂದು ಹೇಳಲಾಗಿದೆ.ಗುರುವಾರ ಸಂಜೆ 7 ಗಂಟೆಯ ವೇಳೆಗೆ ಅವರು ನಿಧನರಾಗಿದ್ದಾರೆ ಎನ್ನಲಾಗಿದೆ. ದೀಪಕ್‌ ಅವರಿಗೆ ಸುಮಾರು 42 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ.ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ದೀಪಕ್ ಅರಸ್​ ಗುರುತಿಸಿಕೊಂಡಿದ್ದರು.ಕಿಡ್ನಿ ವೈಫಲ್ಯದ ಕಾರಣಕ್ಕಾಗಿ ಅವರು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಆಸರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವು ಕಂಡಿದ್ದಾರೆ. ಸಹೋದರನ ಸಾವಿನ ಬೆನ್ನಲ್ಲಿಯೇ ಅಮೂಲ್ಯ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ದೀಪಕ್ ಅರಸ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ. ಇವರು 2011 ರಲ್ಲಿ ತೆರೆಕಂಡ ರಾಕೇಶ್ ಅಭಿನಯದ `ಮನಸಾಲಜಿ'ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ 2011ರ ಸೆಪ್ಟೆಂಬರ್‌ 23ರಂದು ರಿಲೀಸ್‌ ಆಗಿತ್ತು. ಆ ಬಳಿಕ ಕಳೆದ ವರ್ಷ ಡಾರ್ಲಿಂಗ್ ಕೃಷ್ಣ, ಸೋನಲ್‌ ಮೊಂಥೆರೋ ಅಭಿನಯದ ಶುಗರ್‌ ಫ್ಯಾಕ್ಟರಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರು..

ಕನ್ನಡದಲ್ಲಿ ನೀವು ಓದಬೇಕಾದ 10 ಐತಿಹಾಸಿಕ ಕಾದಂಬರಿಗಳು!

ದೀಪಕ್‌ ಅರಸ್‌ ಅವರ ಎರಡೂ ಕಿಡ್ನಿ ವೈಫಲ್ಯವಾಗಿತ್ತು. ಅದಕ್ಕಾಗಿ ಅವರು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರು. ಸದ್ಯ ದೀಪಕ್‌ ಅರಸ್‌ ಅವರ ಪಾರ್ಥಿವ ಶರೀರ ಆಸ್ಪತ್ರೆಯಲ್ಲಿದ್ದು, ಶೇಷಾದ್ರಿಪುರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ದೀಪಕ್‌ ಅರಸ್‌ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಮೇಯಲ್ಲಿ ಇವರು ಮದುವೆಯಾಗಿ 15 ವರ್ಷ ಪೂರ್ಣವಾಗಿತ್ತು. ಸಿನಿಮಾ ನಿರ್ದೇಶಕ ಮಾತ್ರವಲ್ಲದೆ, ಟೂರ್ಸ್‌ ಗೋ ಕಂಪನಿತ ಸಂಸ್ಥಾಪಕ ಹಾಗೂ ನಿರ್ದೇಶಕರಾಗಿದ್ದರು.

Anti-Cheating ಬ್ರಾ ಡಿಸೈನ್‌ ಮಾಡಿದ ಜಪಾನ್‌ ಸಂಶೋಧಕ, ಫಿಂಗರ್‌ಪ್ರಿಂಟ್‌ ಇದ್ರೆ ಮಾತ್ರೆ ಓಪನ್‌ ಆಗುತ್ತೆ!

ಬೆಂಗಳೂರಿನ ಆರ್‌ಆರ್‌ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್‌ ಸಾವು ಕಂಡಿದ್ದಾರೆ. ಬಳಿಕ ಅವರ ಪಾರ್ಥಿವ ಶರೀರವನ್ನು ವೈಯಾಲಿಕಾವಲ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ. ಶುಕ್ರವಾರ ಅವರ ಸ್ವಗ್ರಾಮ ನಾಗಮಂಗಲಕ್ಕೆ ದೇಹ ತೆಗೆದುಕೊಂಡು ಹೋಗುವ ಸಾಧ್ಯತೆ ಇದ್ದು, ಅಲ್ಲಿಯೇ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.

ಅಮೂಲ್ಯ ಗೌಡ ಬಗ್ಗೆ ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡಿದ್ದ ದೀಪಕ್‌ ಅರಸ್‌, ನನ್ನ ತಂಗಿ ಇಷ್ಟು ದೊಡ್ಡ ಸ್ಟಾರ್‌ ಆಗ್ತಾಳೆ ಅಂತ ಕನಸಿನಲ್ಲೂ ನಾವು ಅಂದುಕೊಂಡಿರಲಿಲ್ಲ. ಆಕೆ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಇರುತ್ತಾಳೆ ಎಂದುಕೊಂಡಿದ್ದೆವು. ತಿಮ್ಮ ಅನ್ನೋ ಸಿನಿಮಾದಲ್ಲಿ ಉಯ್ಯಾಲೆ.. ಉಯ್ಯಾಲೆ ಅನ್ನೋ ಸಾಂಗ್ ಇದೆ. ಅದರಲ್ಲಿ ಅಮೂಲ್ಯ ತುಂಬಾ ಚೆನ್ನಾಗಿ ನಟನೆ ಮಾಡಿದ್ದಳು. ಅದನ್ನು ನೋಡಿದ ಬಳಿಕ ಆಕೆಯೇ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು' ಎಂದು ಹೇಳಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಗಿಲ್ಲಿ ನಟ ಎಂಟರ್‌ಟೇನರ್‌ ಅಲ್ಲ, ವಿಷಕಾರಿ ಹಾವು? ಖಾಸಗಿ ಕಂಪೆನಿ HR ಹೇಳುತ್ತಿರೋದೇನು?
ದಕ್ಷಿಣ ಭಾರತದ ಕಲೆಕ್ಷನ್ ಕಿಂಗ್ ಯಾರು? 2025ರ ಬಾಕ್ಸ್ ಆಫೀಸ್ ಶೇಕ್ ಮಾಡಿದ ಟಾಪ್ 10 ಸಿನಿಮಾ