News

ಬಾ ನಲ್ಲೆ ಮಧು ಚಂದ್ರಕೆ

ಇದೇ ಹೆಸರಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನ ಮಾಡಿದ ಸಿನಿಮಾದ ಮೂಲ ಪುಸ್ತಕ. ಸಿನಿಮಾ ನೋಡಿದ್ರೂ ಪ್ರೇಮ ಕಾದಂಬರಿಯನ್ನು ಓದುವ ಮಜಾನೇ ಬೇರೆ.

Image credits: our own

ತೇಜೋ ತುಂಗಭದ್ರಾ

ಲಿಸ್ಬನ್ ನಗರದ ತೇಜೋ ನದಿಯ ದಂಡೆಯಲ್ಲಿ ಶುರುವಾಗುವ ನವಿರಾದ ಪ್ರೇಮ ಕಥನ.ವಸುಧೇಂದ್ರ ಅವರ ಅನನ್ಯ ಕಾದಂಬರಿ ಮಿಸ್‌ ಮಾಡದೇ ಓದಿ.

Image credits: our own

ಎಲ್‌ by ಜೋಗಿ

ಕೃತಿ ಓದುವಾಗ ಹಳೆ ಹುಡ್ಗಿಗೆ ಬರೆದ ಕವನಗಳು ನೆನಪಿಗೆ ಬರಬಹುದು. ಸಮಯ ಸಿಕ್ಕಾಗ ಮಿಸ್‌ ಮಾಡದೇ ಓದಿ ಜೋಗಿ ಅವರ ಎಲ್‌.

Image credits: our own

ಮಾಂಡೋವಿ

ಚಲಪತಿ, ಮಾಂಡೋವಿ, ಡಾಕ್ಟರ್ ಹೀಗೆ ಎಲ್ಲರ ನಡುವಿನ ಪ್ರೀತಿ ಕಥೆಯ ಸ್ವಾರ್ಥ, ತ್ಯಾಗ, ನಂಬಿಕೆ ಬಹಳ ಇಷ್ಟವಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ರವಿ ಬೆಳಗೆರೆ ಅವರ ಕೃತಿ.

Image credits: our own

ಕನಸೇ ಕಾಡುಮಲ್ಲಿಗೆ

ಪ್ರೇಮ ಕತೆಯ ರೋಲರ್ ಕೋಸ್ಟರ್ ಈ ಕಾದಂಬರಿ.ಯುವ ನವ ಪ್ರೇಮಿಗಳ ನಡುವೆ ಏನೆಲ್ಲಾ ನಡಿಬಹುದು ಅನ್ನೋದು ಈ ಕಾದಂಬರಿಯಲ್ಲಿ. ಮಧು ವೈಎನ್‌ ಅವರ ಪುಸ್ತಕ.

Image credits: our own

ಹೇಳಿ ಹೋಗು ಕಾರಣ

ಒಂದು ಪ್ರಾಕ್ಟಿಕಲ್ ಹುಡುಗಿಯ ಹಾಗು ಒಬ್ಬ ಸಿಂಪಲ್ ಹುಡುಗನ ನಡುವಿನ ಪ್ರೇಮ ಕಥೆ ಇದು. ರವಿ ಬೆಳಗರೆ ಅವರ ಮಹಾ ಪ್ರೇಮಕಾವ್ಯ.

Image credits: our own

C/o ಚಾರ್ಮಾಡಿ

ಹೊಸ ಓದುಗರಿಗೆ, ಈಗಿನ ಕಾಲದವರಿಗೋ ಯಾರಿಗೆ ಬೇಕು ಅವರಿಗೆ ಓದಲು ಹೇಳಿ ಮಾಡಿಸಿದಂತಹ ಕಾದಂಬರಿ ಇದು. ಸಚಿನ್‌ ತೀರ್ಥಹಳ್ಳಿ ಬರೆದ ಎಪಿಕ್‌ ಲವ್‌ ಸ್ಟೋರಿ.

Image credits: our own

ನೀ ಹೀಂಗ ನೋಡಬ್ಯಾಡ ನನ್ನ

ಹೆಚ್ಚಿನ ಕನ್ನಡಿಗರು ಈಗಾಗಲೇ ಓದಿರುವ ಪುಸ್ತಕ. ಶಿಶಿರ, ಶ್ರಾವಣಿ, ಚಿರಂತ್ ಅವರೊಂದಿಗೆ ನಿಗೂಢತೆ, ರೋಚಕತೆ, ಪ್ರೇಮ, ಡ್ರಾಮಾ, ಭಾವನೆಗಳು ಇರುವ ಫ್ಯಾಮಿಲಿ ಪ್ಯಾಕ್.

Image credits: our own

ಭಗ್ನಪ್ರೇಮಿಯ ಅಪೂರ್ಣ ಡೈರಿ

ಪತ್ರಕರ್ತ, ಲೇಖಕ ಜೋಗಿ ಅವರ ಪುಸ್ತಕ.ಒಬ್ಬ ಭಗ್ನಪ್ರೇಮಿಯ ಖಾಸಗಿ ನೋವಿನ ಡೈರಿಯ ಪುಟಗಳು ಇದರಲ್ಲಿವೆ. ಓದಿ ಇಷ್ಟವಾಗಬಹುದು.

Image credits: our own

ಮಲೆಗಳಲ್ಲಿ ಮದುಮಗಳು

ತಪ್ಪಿಸಲೆಬಾರದ ರಸನಿಮಿಷಗಳ ಹೊತ್ತುಕೊಡುವ ಕುವೆಂಪು ಅವರ ಕಾದಂಬರಿ.ಕನ್ನಡದ ಅನನ್ಯ ಕಾದಂಬರಿಗಳಲ್ಲಿ ಒಂದು.
 

Image credits: our own

ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ತಿಂಗಳ ವೇತನ ಎಷ್ಟು? ಆಸ್ತಿ ಮೌಲ್ಯ ಎಷ್ಟು?

3 ರಿಂದ 4 ಬಾರಿ ಮದುವೆಯಾದ ನಟರಿವರು!

ಬಾಲಿವುಡ್‌ನಲ್ಲಿ ಮಿಂಚಲು ಹೆಣಗಾಡಿದ ದಕ್ಷಿಣ ಭಾರತದ 7 ನಟಿಯರು

ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ!