ತೇಲುತಾ ಸಾಗಿದ ಹಾದಿಯಲ್ಲಿ ನೂರಾರು ನೆನಪು.. ಇದು ಕನ್ನಡದ ಹೊಸ ಸ್ಟೈಲ್ ಆಲ್ಬಂ..!

Published : Apr 17, 2025, 03:55 PM ISTUpdated : Apr 17, 2025, 04:51 PM IST
ತೇಲುತಾ ಸಾಗಿದ ಹಾದಿಯಲ್ಲಿ ನೂರಾರು ನೆನಪು.. ಇದು ಕನ್ನಡದ ಹೊಸ ಸ್ಟೈಲ್ ಆಲ್ಬಂ..!

ಸಾರಾಂಶ

ಚಿತ್ರರಂಗಕ್ಕೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬರುವ ಹೊಸಬರ ಮೊದಲ ಹೆಜ್ಜೆಯೇ ಕಿರುಚಿತ್ರ ಇಲ್ಲ ಆಲ್ಬಂ ಸಾಂಗ್. ಇಲ್ಲಿಂದಲೇ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೊಸಬರು ವೇದಿಕೆ ರೂಪಿಸಿ..

ಚಿತ್ರರಂಗಕ್ಕೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬರುವ ಹೊಸಬರ ಮೊದಲ ಹೆಜ್ಜೆಯೇ ಕಿರುಚಿತ್ರ ಇಲ್ಲ ಆಲ್ಬಂ ಸಾಂಗ್. ಇಲ್ಲಿಂದಲೇ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೊಸಬರು ವೇದಿಕೆ ರೂಪಿಸಿಕೊಳ್ಳುತ್ತಾರೆ. ಕೆಲವರಂತೂ ಚೆಂದದ ಹಾಡಿನ ಮೂಲಕ ಚಮತ್ಕಾರ ಮಾಡಿ ಮೋಡಿ ಮಾಡುತ್ತಾರೆ. ಸದ್ಯ ತೇಲುತಾ ಸಾಗಿದೆ ಅಂತಾ ಕುಣಿದು ಎಲ್ಲರನ್ನೂ ಸಂತೋಷ್‌ ಮಂತ್ರ ಮುಗ್ದರನ್ನಾಗಿ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಹೊಸತಂಡವೊಂದು ಹೊಸ ಆಲ್ಬಂ ಮಾಡಿದೆ. ಅದೇ ತೆಲುತಾ ಸಾಗಿದೆ. Wallis flicks ಯೂಟ್ಯೂಬ್‌ ನಲ್ಲಿ ಬಿಡುಗಡೆಯಾಗಿರುವ ಈ ಗೀತೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕುತ್ತಿದೆ. ಯುವ ಪ್ರತಿಭೆ ಸಂತೋಷ್‌ ನಿರ್ದೇಶಿಸಿ ತಾವೇ ಕೊರಿಯೋಗ್ರಫಿ ಮಾಡಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿಂಧು ಆರ್‌ ಎಂಬುವವರು ಸೊಗಸಾದ ಪದ ಪೊಣಿಸಿ ಸಾಹಿತ್ಯ ಬರೆದಿದ್ದು, ಕೇಳಲಿಕ್ಕೆ  ಸುಮಧುರ ಎನಿಸುವ,  ನೋಡಲು ಹಿತವೆನಿಸುವ  ʼತೇಲುತಾ ಸಾಗಿದೆʼ ಆಲ್ಬಂ ಸಾಂಗ್‌ ಅನ್ನು ಕನ್ನಡ 'Wallis flicks production' ಸಂಸ್ಥೆ ನಿರ್ಮಿಸಿದೆ. ಒಂದೊಳ್ಳೆ ತಂಡ ಸೇರಿಕೊಂಡು ಕನ್ನಡದಕ್ಕೆ ಸೊಗಸಾದ ಆಲ್ಬಂ ಸಾಂಗ್‌ ಕೊಡುಗೆಯಾಗಿದೆ ನೀಡಿದೆ.

ಮಚ್ಚು ರೀಲ್ಸ್ ಮಾಡಿದ್ದ ಜೋಡಿಯಲ್ಲಿ ವಿನಯ್ ಬಚಾವ್ ಆಗಿ ರಜತ್‌ ಮಾತ್ರ ಜೈಲು ಸೇರಿದ್ದೇಕೆ?

ಈ 'ತೇಲುತಾ ಸಾಗಿದೆ' ಆಲ್ಬಂ ಸಾಂಗ್ ಮೂಲಕ ಯುವ ಪ್ರತಿಭೆ ವಾಲೀಸ್ ಸಂತೋಷ್ ಅವರು ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರಿಗೆ ಪ್ರತಿಭೆಯುಳ್ಳ ಅವರ ಆಪ್ತ ಬಳಗ ಸಾಥ್ ಈ ಕೆಲಸದಲ್ಲಿ ಸಾತ್ ನೀಡಿದೆ. ಸಂತೋಷ್ ಅವರು ಈ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅದನ್ನು ಕಷ್ಟ ಎನ್ನುವುದಕ್ಕಿಂತ ಸಿದ್ಧತೆ ಎನ್ನುವುದು ಸೂಕ್ತ. ಈ ಹಾಡಿನ ಚಿತ್ರೀಕರಣಕ್ಕಾಗಿ ಹಲವಾರು ಲೊಕೇಶನ್‌ಗಳನ್ನು ಸುತ್ತಿ ಸೂಕ್ತ ಸುಂದರ ಸ್ಥಳಗಳನ್ನು ಆಯ್ಕೆ ಮಾಡಿದ್ದಾರೆ. ಅಲ್ಲಿ ಶೂಟಿಂಗ್ ಮಾಡುವ ಮೂಲಕ ಹಾಡಿಗೆ ಹಾಗೂ ತಮ್ಮ ಕನಸಿಗೆ ನ್ಯಾಯ ಕೊಡುವಲ್ಲಿ ಗೆದ್ದಿದ್ದಾರೆ. 

ಮಲೆನಾಡಿನ ಸುಂದರ ಪರಿಸರ ಸೇರಿದಂತೆ, ಹಲವಾರು ಕಡೆಗಳಲ್ಲಿ ಈ ಹಾಡಿನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿದ್ದಾರೆ ಹೀರೋ ಸಂತೋಷ್. ಅವರಿಗೆ ಇಡೀ ತಂಡ ಬೆನ್ನುಲುಬಾಗಿ ನಿಂತಿದ್ದು, ಈ ಹಾಡು ಹೊಸ ಟ್ರೆಂಡ್ ಸೆಟ್ಟರ್ ಸೃಷ್ಟಿಸುವಂತೆ ಮೂಡಿ ಬರುವಲ್ಲಿ ನೆರವಾಗಿದೆ. ಒಟ್ಟಿನ್ಲಲಿ ಹೇಳಬೇಕು ಎಂದರೆ, ಈ 'ತೇಲುತಾ ಸಾಗಿದೆ..' ಆಲ್ಬಂ ಸಾಂಗ್ ಮೂಲಕ ಸಂತೋಷ್ ಗೆಲುವು ಕಾಣತೊಡಗಿದ್ದಾರೆ. ಈಗಾಗಲೇ ಈ ಸಾಂಗ್ ಸಾಕಷ್ಟು ವೈರಲ್ ಆಗಿದೆ. ಈ ಟೀಂ ಮುಂದಿನ ನಡೆಯ ಬಗ್ಗೆ ಕತೂಹಲದಿಂದ ಕಾಯುವಂತಾಗಿದೆ.

ಊರ್ಮಿಳಾ ಹೆಸರನ್ನು ಮಗಳಿಗೆ ಇಟ್ಟಿದ್ದೇಕೆ ಶ್ರೀದೇವಿ..? ಆದ್ರೆ 'ತಾಯಿಗೆ ತಕ್ಕ ಮಗಳಲ್ಲ' ಅನ್ನೋದ್ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌