ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್‌ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ, 160 ಎಕರೆ, 729 ಕೋಟಿ ವೆಚ್ಚ!

Gowthami K   | Kannada Prabha
Published : Oct 16, 2026, 11:55 AM IST
Mysuru International Film City

ಸಾರಾಂಶ

ಸುಮಾರು 10 ವರ್ಷಗಳಿಂದ ಕೇವಲ ಕಾಗದದಲ್ಲೇ ಉಳಿದಿದ್ದ ಮೈಸೂರಿನ 'ಅಂತಾರಾಷ್ಟ್ರೀಯ ಚಲನಚಿತ್ರ ನಗರಿ' ನಿರ್ಮಾಣಕ್ಕೆ ಸಚಿವ ಸಂಪುಟ ಕೊನೆಗೂ ಅನುಮೋದನೆ ನೀಡಿದೆ. ನಂಜನಗೂಡು ತಾಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 729.43 ಕೋಟಿ ರೂ. ವೆಚ್ಚದಲ್ಲಿ ಈ ಬೃಹತ್ ಫಿಲ್ಮ್‌ ಸಿಟಿ ತಲೆಯೆತ್ತಲಿದೆ. ಇದರಲ್ಲಿ ಮಲ್ಟಿಪ್ಲೆಕ್ಸ್‌, ಥೀಮ್‌ ಪಾರ್ಕ್‌, ಮತ್ತು ಫಿಲ್ಮ್‌ ಸ್ಕೂಲ್‌ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ.

ಬೆಂಗಳೂರು: ಸುಮಾರು ಒಂದು ದಶಕದಿಂದ ಚರ್ಚೆಯಲ್ಲಿರುವ ‘ಅಂತಾರಾಷ್ಟ್ರೀಯ ಚಲನಚಿತ್ರ ನಗರಿ’ (ಇಂಟರ್‌ನ್ಯಾಷನಲ್‌ ಫಿಲ್ಮ್‌ ಸಿಟಿ) ನಿರ್ಮಾಣಕ್ಕೆ ಕೊನೆಗೂ ಸಚಿವ ಸಂಪುಟ ಅನುಮೋದನೆ ದೊರೆತಿದ್ದು, ಮೈಸೂರಿನ ನಂಜನಗೂಡು ತಾಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 729.43 ಕೋಟಿ ರು. ವೆಚ್ಚದಲ್ಲಿ ಫಿಲ್ಮ್‌ ಸಿಟಿ ತಲೆಯೆತ್ತಲಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲೇ ಮೈಸೂರಿನಲ್ಲಿ ಚಲನಚಿತ್ರ ನಗರ ನಿರ್ಮಾಣ ಘೋಷಿಸಿದ್ದರು. ಬಳಿಕ 10 ವರ್ಷಗಳಿಂದ ಕೇವಲ ಕಾಗದದಲ್ಲೇ ಉಳಿದಿದ್ದ ಮೈಸೂರು ಫಿಲ್ಮ್ ಸಿಟಿ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

729 ಕೋಟಿ ರು. ವೆಚ್ಚದಲ್ಲಿ ಸುಮಾರು 160.8 ಎಕರೆ ಜಾಗದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿ ಫಿಲ್ಮ್‌ ಸಿಟಿ ನಿರ್ಮಾಣವಾಗಲಿದೆ. ಇದರಲ್ಲಿ 1.27 ಲಕ್ಷ ಚದರ ಮೀಟರ್‌ ವ್ಯಾಪ್ತಿಯಲ್ಲಿ ಮಲ್ಟಿಪ್ಲೆಕ್ಸ್‌, ಥೀಮ್‌ ಪಾರ್ಕ್‌, ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌, ವಿಎಫ್‌ಎಕ್ಸ್‌ ಸೌಕರ್ಯ, ಪಾರ್ಕಿಂಗ್‌ ಮತ್ತಿತರ ಸೌಲಭ್ಯಗಳು ಬರಲಿವೆ.

ಜತೆಗೆ 51,230 ಚದರ ಮೀಟರ್‌ ವ್ಯಾಪ್ತಿಯಲ್ಲಿ ಅನುಮತಿಸಬಹುದಾದ ಚಟುವಟಿಕೆಗಳು ಬರಲಿವೆ. ಇದರಲ್ಲಿ ಫಿಲ್ಮ್‌ ಸ್ಕೂಲ್‌ ಮತ್ತು ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌, ಮ್ಯೂಸಿಯಂ/ ಆರ್ಟ್‌ ಗ್ಯಾಲರಿ, ಫಿಟ್ನೆಸ್‌ ಸೆಂಟರ್‌, ಸಮ್ಮೇಳನ ಸಭಾಂಗಣ ಇತರ ಸೌಲಭ್ಯಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ.

ಕೊನೆಗೂ ಮೈಸೂರು ಅಂತಿಮ:

ಫಿಲ್ಮ್‌ ಸಿಟಿಯನ್ನು ಮೊದಲಿಗೆ ಇಮ್ಮಾವು ಪ್ರದೇಶದಲ್ಲಿ ನಿರ್ಮಿಸಲು ನಿರ್ಧರಿಸಲಾಯಿತಾದರೂ ಬಳಿಕ ರಾಮನಗರ, ಬೆಂಗಳೂರು ರೋರಿಕ್‌-ದೇವಿಕಾ ರಾಣಿ ಎಸ್ಟೇಟ್‌ ಸೇರಿ ವಿವಿಧ ಹೆಸರುಗಳು ಚರ್ಚೆಗೆ ಬಂದಿತ್ತು. ಎರಡನೇ ಅವಧಿಗೆ ಸಿಎಂ ಆದ ಸಿದ್ದರಾಮಯ್ಯ ಅವರು 2025-26 ಹಾಗೂ 2026-27ರ ಬಜೆಟ್‌ನಲ್ಲಿ ಇಂಟರ್‌ನ್ಯಾಷನಲ್‌ ಫಿಲ್ಮ್‌ಸಿಟಿ ಘೋಷಿಸಿದ್ದರು. ಇದೀಗ ಅಂತಿಮವಾಗಿ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಖಚಿತವಾಗಿದೆ. ಇದು ಮೈಸೂರು ವಿಮಾನ ನಿಲ್ದಾಣದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ.

ಉದ್ದೇಶಿತ ಜಾಗದ ಸುತ್ತಲಿನ 25 ಕಿ.ಮೀ. ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಚಿತ್ರ ನಿರ್ಮಾಣ ಸಂಸ್ಥೆಗಳು, 250ಕ್ಕೂ ಅಧಿಕ ಶೂಟಿಂಗ್‌ ತಾಣಗಳು, 20 ಕಿ.ಮೀ. ಸುತ್ತಮುತ್ತ 20ಕ್ಕೂ ಹೆಚ್ಚು ಮನರಂಜನಾ ಉದ್ಯಾನಗಳು ಮತ್ತು ವಾಣಿಜ್ಯ ವಲಯಗಳೂ ಇವೆ.

ಜತೆಗೆ ಸಾಂಸ್ಕೃತಿಕ ನಗರಿ ಮೈಸೂರು ವಾರ್ಷಿಕ 1.82 ಕೋಟಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಹೀಗಾಗಿ ಇಮ್ಮಾವು ಅತ್ಯಂತ ಸೂಕ್ತ ಸ್ಥಳ ಎಂದು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Yash- Ramayana: 'ಒಡೆಯುವ ಕೆಲಸ ಮಾಡಬೇಡಿ'.. ಬೆಂಗಳೂರಿನಲ್ಲಿ 'ರಾಮಾಯಣ' ವೇದಿಕೆಯಲ್ಲಿ ನಟ ಯಶ್ ವಿಶೇಷ ಮನವಿ ಮಾಡಿದ್ದೇಕೆ?!
12 ಸಿನಿಮಾಗಳಲ್ಲಿ 10 ಫ್ಲಾಪ್, 2 ಹಿಟ್: ಗ್ಲಾಮರ್ ಲೋಕಕ್ಕೆ ಬಂದ ಈ ನಟಿಯ ಸಿನಿಮಾ ಜರ್ನಿಯೇ ರೋಚಕ!