ಅಯ್ಯೋ ರಾಮ.. ಟ್ರೆಡ್ಮಿಲ್‌ನಲ್ಲಿ ಹಯೇ ರಾಮ ಹಾಡಿಗೆ ಡಾನ್ಸ್ ಮಾಡಿದ ತರುಣ

Published : Dec 01, 2022, 08:26 PM ISTUpdated : Dec 01, 2022, 08:28 PM IST
ಅಯ್ಯೋ ರಾಮ.. ಟ್ರೆಡ್ಮಿಲ್‌ನಲ್ಲಿ ಹಯೇ ರಾಮ ಹಾಡಿಗೆ ಡಾನ್ಸ್ ಮಾಡಿದ ತರುಣ

ಸಾರಾಂಶ

ಯುವಕನೋರ್ವ ಟ್ರೆಡ್ಮಿಲ್‌ನಲ್ಲಿ ಹಯೇ ರಾಮಾ ಹಾಡಿಗೆ ಸಖತ್ ಆಗಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಕೆಲ ತಿಂಗಳ ಹಿಂದೆ ಮೂವರು ಮಹಿಳೆಯರು ಟ್ರೆಡ್ಮಿಲ್‌ನಲ್ಲಿ ಗರ್ಭಾ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಯುವಕನೋರ್ವ ಟ್ರೆಡ್ಮಿಲ್‌ನಲ್ಲಿ ಹಯೇ ರಾಮಾ ಹಾಡಿಗೆ ಸಖತ್ ಆಗಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ನೃತ್ಯದ ವೇಳೆ ಇಂದು ಸ್ಟಂಟ್ ಸಾಮಾನ್ಯ ಎನಿಸಿದೆ. ಅದಕ್ಕೆ ಕೆಲ ಡಾನ್ಸ್ ರಿಯಾಲಿಟಿ ಶೋಗಳೇ ಸಾಕ್ಷಿ, ಮೇಲಿನಿಂದ ಕೆಳಗೆ ಬೀಳುವಾ, ಸುರುಳಿ ಸುತ್ತುವ ಹಗ್ಗದಲ್ಲಿ ಮೇಲೆರುವ ಜಿಮ್ನಾಸ್ಟಿಕ್‌ ರೀತಿ ಅತ್ತಿಂದಿತ್ತ ಚಿಮ್ಮುವಂತಹ ಹಲವು ಸಾಹಸ ನೃತ್ಯಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಟಿವಿಗಳಲ್ಲಿ ಸಾಕಷ್ಟು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಎಲ್ಲಕ್ಕೂ ವಿಭಿನ್ನವೆನಿಸಿದ ಟ್ರೆಡ್‌ಮಿಲ್ ಡಾನ್ಸ್ ಪ್ರದರ್ಶಿಸುತ್ತಿದ್ದು, ನೋಡುಗರ ಮೈ ಜುಮ್ಮೆನಿಸುತ್ತಿದೆ.

ಹೀಗೆ ಟ್ರೆಡ್ಮಿಲ್‌ನಲ್ಲಿ ಡಾನ್ಸ್ ಮಾಡಿದ ಯುವಕನ ಹೆಸರು ಅಲೋಕ್ ಶರ್ಮಾ, ಯಾರಿಗೂ ಕಡಿಮೆ ಇಲ್ಲದಂತೆ ಆತ ಟ್ರೆಡ್ಮಿಲ್‌ನಲ್ಲಿ ಲೀಲಾಜಾಲವಾಗಿ ಸೊಂಟ ಬಳುಕಿಸುತ್ತಿದ್ದಾನೆ. ಹಾಗಂತ ಈತನೇನು ಟ್ರೆಡ್ಮಿಲ್‌ನ್ನು ನಿಧಾನಿಸಿಲ್ಲ. ಅದು ವೇಗವಾಗಿ ಓಡುತ್ತಿದ್ದು, ಈತ ಮಾತ್ರ ಸ್ವಲ್ಪವೂ ಭಯವಿಲ್ಲದೇ ಎಲ್ಲೂ ಹೆಜ್ಜೆ ತಪ್ಪದೆ ಅದರ ಮೇಲೆ ಸಖತ್ ಆಗಿ ಡಾನ್ಸ್ ಮಾಡ್ತಿದ್ದಾನೆ. ಅತ್ತ ವ್ಯಾಯಾಮಕ್ಕೆ ವ್ಯಾಯಾಮವೂ ಆಯ್ತು ಇತ್ತ ಇಷ್ಟಪಟ್ಟ ಡಾನ್ಸ್‌ ಕೂಡ ಕೂಡ ಆಯ್ತು ಎಂಬುದು ಈತನ ಯೋಚನೆ. ಆದರೆ ಡಾನ್ಸ್ ವೇಳೆ ಒಂದು ಚೂರು ಮೈ ಮರೆತರು ಸೊಂಟ ಮುರಿಯುವುದು ಗ್ಯಾರಂಟಿ ಅಂತಿದ್ದಾರೆ ವೀಕ್ಷಕರು. ಆದರೆ ಇಂತಹ ಡಾನ್ಸ್ ಮಾಡಲು ಹಲವು ದಿನಗಳ ಕಠಿಣ ಅಭ್ಯಾಸ ಮಾತ್ರ ಬೇಕೆ ಬೇಕು.

 

ಅಂದಹಾಗೆ 1995ರ ಬಾಲಿವುಡ್ ಸಿನಿಮಾ ರಂಗೀಲಾದ ಹಯೇ ರಾಮ ಹಾಡಿಗೆ ಈ ಅಲೋಕ್ ಶರ್ಮಾ, ಹೀಗೆ ಟ್ರೆಡ್ಮಿಲ್‌ನಲ್ಲಿ ಡಾನ್ಸ್ ಮಾಡಿದ್ದಾರೆ. 90ರ ದಶಕದ ಈ ಹಾಡಿನಲ್ಲಿ ಜಾಕಿ ಶ್ರಾಫ್, ಶರ್ಮಿಳಾ ಮಂತೋಡ್ಕರ್ ನಟಿಸಿದ್ದಾರೆ. 30 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ಡಾನ್ಸ್ ಮಾಡಿದ್ದೀರಾ ಎಂದು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇದೊಂತರ ಶೋ ಸ್ಟಾಪರ್ ಪರ್ಫಾರ್ಮೆನ್ಸ್ ಎಂದು ಮತ್ತೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಡಾನ್ಸ್‌ಗೆ ಕರೆದ ತಾತನಿಗೆ ನೋ ಎಂದ ಅಜ್ಜಿ... ಆಮೇಲೆ ತಾತ ಮಾಡಿದ್ದು ಕಿತಾಪತಿ..!

ಇದು ಸಾಮಾಜಿಕ ಜಾಲತಾಣದ ಯುಗವಾಗಿದ್ದು, ಒಂದು ಲೈಕ್ ಒಂದು ಕಾಮೆಂಟ್‌ಗಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೋಡುಗರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಹಾವುಗಳನ್ನು ಹಿಡಿದು ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು.

ಡಾನ್ಸ್ ಫ್ಲೋರ್ ಚಿಂದಿ ಮಾಡಿದ ಅಜ್ಜಿ

ಡಾನ್ಸ್ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮ ಸ್ಥಳೀಯವಾಗಿ ಹೇಳಬೇಕೆಂದರೆ ತಮಟೆ ಸದ್ದು ಕಿವಿಗೆ ಬೀಳುತ್ತಿದ್ದಂತೆ ಕೈ ಕಾಲುಗಳು ತಾನಾಗೆ ಕುಣಿಯಲು ಶುರು ಮಾಡುತ್ತವೆ. ದೇಶ ಭಾಷೆಯ ಹಂಗು ತೊರೆದು ನೃತ್ಯ ಎಲ್ಲರನ್ನೂ ಒಂದಾಗಿಸುತ್ತದೆ. ದೊಡ್ಡವರು ಸಣ್ಣವರೆಂಬ ಬೇಧವಿಲ್ಲದೇ ಎಲ್ಲರೂ ಸಂಗೀತಕ್ಕೆ ತಕ್ಕ ಹೆಜ್ಜೆ ಹಾಕುತ್ತಾರೆ. ತಮ್ಮ ವಯಸ್ಸನ್ನು ಮರೆತು ಅನೇಕರು ಬಿಂದಾಸ್‌ ಆಗಿ ಫೇಮಸ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. 

ನಿಮ್ಮ ಮನೆಲೂ ಅಜ್ಜಿ ತಾತ ಇಷ್ಟೊಂದು ಜೋಶಲ್ಲಿದ್ದಾರಾ... ವೈರಲ್ ವಿಡಿಯೋ

ಅದೇ ರೀತಿ ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಯಸ್ಸಾದ ಮಹಿಳೆಯೊಬ್ಬರು ಯುವಕರು ನಾಚಿಸುವಂತೆ ಡಾನ್ಸ್ ಮಾಡುತ್ತಿದ್ದಾರೆ. Shailarmy ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು ವೃದ್ಧರೊಬ್ಬರ ಈ ಜೀವನೋತ್ಸಾಹಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ Shailarmy ಅವರು ವಯಸ್ಸು ಕೇವಲ ಸಂಖ್ಯೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಇಂದು ನಾನು ನಡೆಸಿಕೊಟ್ಟ ಕನ್ಸರ್ಟ್ ಒಂದರಲ್ಲಿ ಕಂಡುಬಂದ ದೃಶ್ಯವಿದು. ಇವರ ಹೆಸರು ರೇಖಾ ಮಾಮ್. ಸಂಪ್ರದಾಯಿಕ ಪಂಜಾಬಿ ಹಾಡುಗಳಿಗೆ ಬಿಂದಾಸ್ ಆಗಿ ನರ್ತಿಸುವ ಮೂಲಕ ಡ್ಯಾನ್ಸ್‌ ಫ್ಲೋರ್‌ಗೆ ಕಿಚ್ಚು ಹಚ್ಚಿದರು. ಅವರ ನೃತ್ಯ ನೋಡಿ ಸುತ್ತಲಿದ್ದ ಜನರು ಮೂಕ ವಿಸ್ಮಿತರಾದರು. ಈ ವಿಡಿಯೋ ಜೀವನವನ್ನು ನೀವು ಹೇಗೆ ಪರಿಗಣಿಸಬೇಕು ಎಂಬುದನ್ನು ತೋರಿಸಿಕೊಡುತ್ತಿದೆ. ಜೀವನದ ಪ್ರತಿಕ್ಷಣವನ್ನು ಆನಂದಿಸಬೇಕು. ಜೀವನವನ್ನು ಸಂಪೂರ್ಣವಾಗಿ ಬದುಕಬೇಕು ಎಂದು ಅವರು ಬರೆದು ಕೊಂಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?