ಟ್ಯಾಕ್ಸಿ ಚಾಲಕನಿಂದ ನಟಿಯ ಮೇಲೆ ಲೈಂಗಿಕ ದೌರ್ಜನ್ಯ; ದೂರು ದಾಖಲು

By Vaishnavi ChandrashekarFirst Published Nov 16, 2022, 11:28 AM IST
Highlights

ಖಾಸಗಿ ಟ್ಯಾಕ್ಸಿ ಚಾಲಕನ ವಿರುದ್ಧ ದೂರು ದಾಖಲಿಸಿದ ಕಿರುತೆರೆ ನಟಿ. ರಾತ್ರಿ 10.30ವರೆಗೆ ಜಕ್ಕೂರಿನಿಂದ ಬಾಬುಸಾಪಾಳ್ಯದವರೆಗೂ ಅಸಭ್ಯ ವರ್ತನೆ.... 

ಬೆಂಗಳೂರಿನಲ್ಲಿ ನಟಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮಾಡೆಲ್,ನಟಿ ಕಮ್ ಡಬ್ಬಿಂಗ್ ಆರ್ಟಿಸ್ಟ್‌ ಆಗಿರುವ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿ ಬರುವಾಗ ಟಾಕ್ಸಿ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ರಾತ್ರಿಯೇ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಕಲಿಸಿದ್ದಾರೆ. 

ಹೌದು! ಚಿತ್ರನಟಿ ರಾತ್ರಿ 10.30ಕ್ಕೆ ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಪ್ರಯಾಣ ಮಾಡಲು ಟ್ಯಾಕ್ಸಿ ಬುಕ್ ಮಾಡಿಕೊಂಡಿದ್ದಾರೆ. ಕೆ ಎ 51 ಹೆಚ್ 5965  ನಂಬರ್ ನ ರ್ಯಾಪಿಡೋ ಟ್ಯಾಕ್ಸಿ ಬುಕ್ ಮಾಡಿಕೊಂಡಿದ್ದಾರೆ. ಪ್ರಯಾಣ ಮಾಡುವ ಚಾಲಕ ಅಸಭ್ಯ ವರ್ತಿಸಿದ್ದಾನೆ ಎನ್ನಲಾಗಿದೆ. ಚಾಲಕನ ಹೆಸರು ಮಂಜುನಾಥ್ ತಿಪ್ಪೆಸ್ವಾಮಿ  ಎಂದು ತಿಳಿದು ಬಂದಿದ್ದು, ಚಾಲಕ ಮತ್ತು ರ್ಯಾಪಿಡೋ ಸಂಸ್ಥೆ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

13 ವರ್ಷದ ಬಾಲಕಿ ಮೇಲೆ 80 ಜನರಿಂದ ಲೈಂಗಿಕ ದೌರ್ಜನ್ಯ

ರಾತ್ರಿಯಾದರೆ ಒಬ್ಬಂಟಿ ಹೆಣ್ಮಕ್ಕಳು ಸೇಫ್ ಅಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಇದು. 

ಲೈಂಗಿಕ ದೌರ್ಜನ್ಯವನ್ನು ಮಹಿಳೆ ಮುಚ್ಚಿಡೋದೇಕೆ?

ಅವಮಾನ, ಅಪಪ್ರಚಾರ : ಮಹಿಳೆಯರು ಮರ್ಯಾದೆಗೆ ಅಂಜುತ್ತಾರೆ. ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ಗೊತ್ತಾದ್ರೆ ಜನರು ತಮ್ಮ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡ್ತಾರೆ ಎಂಬ ಭಯ ಮಹಿಳೆಯರನ್ನು ಕಾಡುತ್ತದೆ. ಬಾಲ್ಯದಿಂದಲೂ ಹುಡುಗಿಯರಿಗೆ ರಾತ್ರಿಯಲ್ಲಿ ತಿರುಗಾಡಬೇಡಿ, ಸರಿಯಾದ ಬಟ್ಟೆ ಧರಿಸಿ ಹೀಗೆ ಅನೇಕ ನಿಯಮಗಳನ್ನು ಹೇರುತ್ತಾರೆ. ಹುಡುಗಿಯರು ಬೆಳೆಯುತ್ತಿದ್ದಂತೆ ಅವರ ಮೇಲೆ ಇವೆಲ್ಲ ಪರಿಣಾಮ ಬೀರುತ್ತವೆ. ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿದ್ರೆ ಅವಮಾನವಾಗಬಹುದೆಂದು ಅವರು ಅದನ್ನು ಮರೆಮಾಚಲು ಯತ್ನಿಸುತ್ತಾರೆ.

ಅಪರಾಧಿ ಸ್ಥಾನದಲ್ಲಿ ಆಕೆಯೇ ಕುಳಿತುಕೊಳ್ಬೇಕು : ಹುಡುಗಿ ಯಾವುದೇ ದೌರ್ಜನ್ಯಕ್ಕೆ ಒಳಗಾಗಿದ್ದರೂ ಸಮಾಜ ಆಕೆಯನ್ನೇ ದೋಷಿಯಾಗಿ ನೋಡುತ್ತದೆ. ಹುಡುಗಿ ನಡತೆ ಬಗ್ಗೆ ಸಮಾಜ ಮಾತನಾಡುತ್ತದೆ. ಆಕೆ ಸರಿ ಇದ್ದಿದ್ದರೆ ಹೀಗಾಗ್ತಿರಲಿಲ್ಲ ಎನ್ನುತ್ತದೆ.  ಅತ್ಯಾಚಾರ ನಡೆದರೂ ಅದಕ್ಕೆ ಹುಡುಗಿಯನ್ನೇ ಹೊಣೆ ಮಾಡ್ತಾರೆ. ಈ ಭಯಕ್ಕೂ ಹುಡುಗಿಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡೋದಿಲ್ಲ.  

click me!