ರಾ ರಾ ರಕ್ಕಮ್ಮ ಹಾಡಿಗೆ ಡಾನ್ಸ್‌ಪ್ಲೋರ್ ಚಿಂದಿಯಾಗುವಂತೆ ಕುಣಿದ ಮದುಮಗಳು.. ವೈರಲ್ ವಿಡಿಯೋ

Published : Dec 01, 2022, 05:27 PM IST
ರಾ ರಾ ರಕ್ಕಮ್ಮ ಹಾಡಿಗೆ ಡಾನ್ಸ್‌ಪ್ಲೋರ್ ಚಿಂದಿಯಾಗುವಂತೆ ಕುಣಿದ ಮದುಮಗಳು.. ವೈರಲ್ ವಿಡಿಯೋ

ಸಾರಾಂಶ

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಹಾಡಿನ ಮೇಲಿನ ಕ್ರೇಜ್ ಮಾತ್ರ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ. ಮದುವೆ (Wedding) ಮನೆಯೊಂದರಲ್ಲಿ ಮಧುಮಗಳು(Bride) ಹಾಗೂ ಆಕೆಯ ಸ್ನೇಹಿತರು (Friends) ಈ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಹಾಡು ಯಾರಿಗೆ ಇಷ್ಟ ಇಲ್ಲ ಹೇಳಿ ಸಿನಿಮಾ ರಿಲೀಸ್ ಆದ ಸಮಯದಲ್ಲಂತೂ ಎಲ್ಲರ ಬಾಯಲ್ಲೂ ಅದೇ ಹಾಡು ಕೇಳಿ ಬರುತ್ತಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಎಲ್ಲರೂ ಆ ಹಾಡಿಗೆ ಹೆಜ್ಜೆ ಹಾಕಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಸಿನಿಮಾ ಬಿಡುಗಡೆಯಾಗಿ ಐದು ತಿಂಗಳುಗಳೇ ಕಳೆದಿದ್ದರೂ ಈ ಹಾಡಿನ ಮೇಲಿನ ಕ್ರೇಜ್ ಮಾತ್ರ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ. ಮದುವೆ ಸಮಾರಂಭಗಳಲ್ಲಿ, ಡಿಜೆಗಳಲ್ಲಿಯೂ ಈ ಹಾಡು ರಾರಾಜಿಸುತ್ತಿದ್ದು, ಹಾಡು ಕೇಳುತ್ತಿದ್ದಂತೆ ಇರುವಲ್ಲಿಂದಲ್ಲೇ ಮಕ್ಕಳು ದೊಡ್ಡವರೆನ್ನದೇ ಎಲ್ಲರೂ ಈ ಹಾಡಿಗೆ ಕಾಲು ಕುಣಿಸುತ್ತಿದ್ದಾರೆ.

ಅದೇ ರೀತಿ ಈಗ ಮದುವೆ (Wedding) ಮನೆಯೊಂದರಲ್ಲಿ ಮಧುಮಗಳು(Bride) ಹಾಗೂ ಆಕೆಯ ಸ್ನೇಹಿತರು (Friends) ಈ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಮದುವೆ ಮನೆಯಲ್ಲಿ ಡಾನ್ಸೊಂದು ಇರಲೇಬೇಕು ಎಂಬುದು ಈಗಿನ ಅಲಿಖಿತ ಟ್ರೆಂಡ್(Trend) ಆಗಿದ್ದು, ಕೆಲವು ಫೇಮಸ್ ಹಾಡುಗಳು ಮದುವೆ ಮನೆಯ ಡಾನ್ಸ್‌ ಪ್ಲೋರ್ (Dance floor) ಚಿಂದಿ ಮಾಡುತ್ತವೆ. ಅದೇ ರೀತಿ ಇಲ್ಲಿ ಮದುಮಗಳು ವಧುವಿನ ಎಲ್ಲಾ ಅಲಂಕಾರಗಳ ಜೊತೆ ಸೀರೆ ಧರಿಸಿ ಸಖತ್ ಆಗಿ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾಳೆ. ವಧುವಿಗೆ ಆಕೆಯ ಗೆಳತಿಯರು ಡಾನ್ಸ್ ಮಾಡುವ ಮೂಲಕ ಒಳ್ಳೆ ಕಂಪನಿ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ವರ ವೇದಿಕೆಯಲ್ಲಿರುವ ಆಸನದಲ್ಲಿ ಸುಮ್ಮನೇ ಕುಳಿತಿದ್ದ ವೇಳೆ ವೇದಿಕೆಗೆ ಕಾಲಿಟ್ಟ ವಧು ಹಾಗೂ ಆಕೆಯ ಸ್ನೇಹಿತರು ತಮ್ಮ ಡಾನ್ಸ್‌ನ (Dance) ಮೂಲಕವೇ ಸ್ಟೇಜ್‌ಗೆ ಕಿಚ್ಚು ಹಚ್ಚಿದ್ದಾರೆ. ವಧುವಿನ ಡಾನ್ಸ್ ಅಂತು ಎಲ್ಲರ ಮನ ಸೆಳೆದಿದ್ದು, ಈಕೆ ಪಕ್ಕ ಡಾನ್ಸರೇ ಆಗಿರಬೇಕು ಎಂಬುದು ಆಕೆಯ ನೃತ್ಯದ ಶೈಲಿ ನೋಡಿದರೆ ತಿಳಿದು ಹೋಗುತ್ತದೆ. ಕೇಸರಿ ಬಣ್ಣದ ಬಾರ್ಡರ್ ಹೊಂದಿರುವ ಕ್ರೀಮ್‌ ಬಣ್ಣದ ಸೀರೆ (Saree) ಹಾಗೂ ಕೇಸರಿ ಬಣ್ಣದ ಬ್ಲೌಸ್ ಧರಿಸಿ ವಧು ಮಿಂಚುತ್ತಿದ್ದರೆ, ಆಕೆಯ ಜೊತೆಗಾತಿಯರು ಕೆಲವರು ಸೀರೆ ಹಾಗೂ ಕೆಲವರು ಲಂಗದಾವಣಿ ತೊಟ್ಟು ಮಿಂಚಿದ್ದು, ವರ ಮಾತ್ರ ನಗುತ್ತಾ ಫೋಸ್ ನೀಡಿದ್ದಾರೆ. ತೆಲುಗು ವರ್ಷನ್‌ನ ರಾರಾ ಹಾಡು ಇದಾಗಿದೆ.

ಡಾನ್ಸ್ ಫ್ಲೋರ್ ಚಿಂದಿ ಮಾಡಿದ ಅಜ್ಜಿ : ವಿಸಿಲ್ ಹೊಡೆದು ಹುರಿದುಂಬಿಸಿದ ತರುಣರು

ಇತ್ತ ಆರು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇನ್ನು ಈ ವೀಡಿಯೋ ಪೋಸ್ಟ್ ಮಾಡಿದ ಗುಲ್ಜಾರ್ ಸಾಹಬ್ ಎಂಬುವವರು, ನನ್ನ ಮದುವೆಯೂ ಹೀಗೆ ಡಾನ್ಸ್ ಮಾಡುವ ಹುಡುಗಿ ಜೊತೆಯೇ ಆಗಬೇಕು ಇಲ್ಲದಿದ್ದರೆ ನಾನು ಮಂಟಪದಿಂದಲೇ ಓಡಿ ಹೋಗುವೆ ಎಂದು ಬರೆದು ನಗುವ ಇಮೋಜಿಯೊಂದಿಗೆ ಈ ಪೋಸ್ಟ್ ಮಾಡಿದ್ದಾರೆ. ವಧು ಒಳ್ಳೆ ತರಬೇತಿ ಹೊಂದಿದ ಪ್ರೊಫೆಷನಲ್ ಡಾನ್ಸರ್ (Professional Dancer) ರೀತಿ ಕಾಣಿಸುತ್ತಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಹಾಡು ತೆಲುಗಿನ ಮದುವೆ ಸಮಾರಂಭಗಳಲ್ಲಿ ಟ್ರೆಂಡ್ ಆಗಿದ್ದು, ಕಳೆದ ವರ್ಷ ಬುಲೆಟ್ ಬಂಡಿ ಸಾಂಗು ಟ್ರೆಂಡ್ ಆಗಿತ್ತು. ಈ ವರ್ಷ ಪುಷ್ಪಾ ಟ್ರೆಂಡ್ ಆಗಿದೆ. ಈಗ ಈ ರಾರಾ ಹಾಡು ಟ್ರೆಂಡ್ ಆಗುತ್ತಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಶಾಲೆಯಲ್ಲಿ ಜಾನಪದ ಹಾಡಿಗೆ ಪುಟಾಣಿಯ ಸಖತ್ ಡಾನ್ಸ್: ವಿಡಿಯೋ ವೈರಲ್

ಡಾನ್ಸ್‌ ಅಂತು ತುಂಬಾ ಚೆನ್ನಾಗಿದೆ. ಸುಂದರ ಕ್ಷಣವನ್ನು ಎಷ್ಟು ಸಾಧ್ಯವೋ ಅಷ್ಟು ಅಂದಗಾಣಿಸುವುದರಲ್ಲಿ ತಪ್ಪೇನಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಡಾನ್ಸ್ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬನ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ!
'ಅವಳೇ ನನ್ನ ಜೀವನದ ಆಧಾರ ಸ್ತಂಭ'.. ಹೆಂಡ್ತಿ ಬಗ್ಗೆ ಹೀಗ್ ಹೇಳಿದ ರಣವೀರ್ ಸಿಂಗ್; ನೆಟ್ಟಿಗರು ಹೇಳೋದೇನು?