
ಮುಂಬೈ(ಜು.15): ದೇಶದಲ್ಲಿ ಹೊಸ ರೀತಿಯಲ್ಲಿ ಐಪಿಎಲ್ ಆರಂಭಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ ಲಲಿತ್ ಮೋದಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 56 ವರ್ಷದ ಲಲಿತ್ ಅವರು ಗುರುವಾರ ಸಂಜೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದು, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರ ಪತ್ನಿ ಎಂದು ಬಣ್ಣಿಸಿದ್ದಾರೆ. ಮಾಧ್ಯಮಗಳಲ್ಲಿ ಈ ವಿಚಾರ ಸದ್ದು ಮಾಡಿದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ಲಲಿತ್ ಮೋದಿ ನಾವಿಬ್ಬರೂ ಡೇಟಿಂಗ್ ನಡೆಸುತ್ತಿದ್ದೇವೆ, ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಲಲಿತ್ ಅವರ 9 ವರ್ಷದ ಹಿಂದಿನ ಟ್ವೀಟ್ ವೈರಲ್ ಆಗುತ್ತಿದೆ, ಇದರಿಂದಾಗಿ ಅವರ ಸಂಬಂಧವು ಸುಮಾರು 9 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಜನರು ಊಹಿಸಲಾರಂಭಿಸಿದ್ದಾರೆ.
ಐಪಿಎಲ್ ಮಾಜಿ ಕಮೀಷನರ್ ಲಲಿತ್ ಮೋದಿ-ಸುಶ್ಮಿತಾ ಸೇನ್ ವಿವಾಹ?
2013ರಲ್ಲಿ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಟ್ವೀಟ್‌ನಲ್ಲಿ ಲಲಿತ್ ಅವರು ಸುಶ್ಮಿತಾ ಅವರನ್ನು ಟ್ಯಾಗ್ ಮಾಡಿ 'ನನ್ನ SMS ಗೆ ಉತ್ತರಿಸಿ' ಎಂದು ಬರೆದಿದ್ದಾರೆ. ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ, ಇಬ್ಬರ ಸಂಬಂಧ ಇಲ್ಲಿಂದ ಪ್ರಾರಂಭವಾಗಿದೆ ಎಂದು ಬಳಕೆದಾರರು ಹೇಳುತ್ತಿದ್ದಾರೆ.
ಲಲಿತ್-ಸುಶ್ಮಿತಾ ಕಥೆ ಶುರುವಾಗಿದ್ದು 2013ರಿಂದ
ಲಲಿತ್ ಮೋದಿ ಟ್ವೀಟ್ ಮಾಡಿ, 'ಸರಿ ನಾನು ಬದ್ಧನಾಗಿದ್ದೇನೆ. ನೀವು ದಯಾಮಯಿ. ಭರವಸೆಗಳನ್ನು ಮುರಿಯಲು ಉದ್ದೇಶಿಸಿದ್ದರೂ, ಬದ್ಧತೆಯನ್ನು ಗೌರವಿಸಲಾಗುತ್ತದೆ, ಚಿಯರ್ಸ್ ಲವ್ ಎಂದಿದ್ದಾರೆ. ಇದಾದ ನಂತರ ಸುಶ್ಮಿತಾ ‘Gotcha 47’ ಎಂದು ಉತ್ತರಿಸಿದ್ದಾರೆ. ಇದಕ್ಕೆ ಮೇಲೆ ಲಲಿತ್ ಮೋದಿ ಅವರು 'ನನ್ನ SMS ಗೆ ಉತ್ತರಿಸಿ' ಎಂದು ಬರೆದಿದ್ದಾರೆ.
ಲಲಿತ್ ಮೋದಿ ದಂಪತಿಗೆ ಕಪ್ಪು ಹಣದ ಸಂಕಷ್ಟ!
ಸೋಷಿಯಲ್ ಮೀಡಿಯಾ ಬಳಕೆದಾರರರಿಗೂ ಅಚ್ಚರಿ
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು 'ನೆವರ್ ಲೂಸ್ ಹೋಪ್'(ಭರವಸೆ ಕಳೆದುಕೊಳ್ಳಬೇಡಿ) ಎಂದು ಬರೆದಿದ್ದಾರೆ. ಮತ್ತೊಬ್ಬರು ‘ಇದೆಲ್ಲ ಇಲ್ಲಿಂದ ಶುರುವಾಯಿತು, ಯಾವತ್ತೂ ಬಿಟ್ಟುಕೊಡದ ಲಲಿತ್ ಮೋದಿ ಅವರ ಧೋರಣೆ ಶ್ಲಾಘನೀಯ’ ಎಂದು ಬರೆದಿದ್ದಾರೆ. ಮೂರನೆಯವರು 'ಪವಾಡಗಳು ಸಂಭವಿಸುತ್ತವೆ' ಎಂದು ಬರೆದಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಕೂಡ ಬದಲಾಯಿಸಿದ ಲಲಿತ್
ವಾಸ್ತವವಾಗಿ, ಗುರುವಾರ ಸಂಜೆ, ಸಾಮಾಜಿಕ ಮಾಧ್ಯಮದಲ್ಲಿ, ಲಲಿತ್ ಮೋದಿ ಅವರು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಪ್ರೀತಿ ತುಂಬಿದ ಚಿತ್ರಗಳು ಮತ್ತು ಈ ಬಗೆಗಿನ ಸ್ಪಷ್ಟನೆ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಸುಶ್ಮಿತಾ ಜೊತೆಗಿನ ಲಲಿತ್ ಮೋದಿ ಒಪ್ಪಂದವನ್ನು ಪೋಸ್ಟ್ ಮಾಡಿದ ತಕ್ಷಣ, ಮದುವೆ ಮತ್ತು ಪ್ರಣಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು. ಕೂಡಲೇ ಲಲಿತ್ ಮದುವೆಯ ಬಗ್ಗೆ ಸ್ಪಷ್ಟನೆ ನೀಡುತ್ತಾ, ಅದನ್ನು ಡೇಟಿಂಗ್ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಲಲಿತ್ ಮೋದಿ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಕೂಡ ಬದಲಾಯಿಸಿದ್ದಾರೆ. ಇನ್‌ಸ್ಟಾಗ್ರಾಮ್ ಬಯೋದಲ್ಲಿ, 'ಕೊನೆಗೂ ಹೊಸ ಜೀವನದ ಆರಂಭ, ಪಾರ್ಟ್ನರ್ ಇನ್ ಕ್ರೈಂ, ಮೈ ಲವ್ ಸುಶ್ಮಿತಾ ಸೇನ್ ಎಂದು ಬರೆದಿದ್ದಾರೆ. ಇದರೊಂದಿಗೆ ಸುಶ್ಮಿತಾ ಸೇನ್ ಅವರ ಇನ್‌ಸ್ಟಾ ಖಾತೆಯನ್ನು ಸಹ ಟ್ಯಾಗ್ ಮಾಡಲಾಗಿದೆ.
ಸುಮಾರು 7 ತಿಂಗಳ ಹಿಂದಷ್ಟೇ 47 ವರ್ಷದ ಸುಶ್ಮಿತಾ ಸೇನ್ ಮತ್ತು 32 ವರ್ಷದ ರೋಹ್ಮನ್ ಶಾಲ್ ಅವರ ನಡುವಿನ ಸಂಭಂಧ ಮುರಿದು ಬಿದ್ದಿತ್ತು ಎಂಬುವುದು ಉಲ್ಲೇಖನೀಯ. ಇಬ್ಬರೂ ಸುಮಾರು ಎರಡೂವರೆ ವರ್ಷಗಳ ಕಾಲ ಲಿವ್ ಇನ್ ನಲ್ಲಿ ವಾಸಿಸುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.