ಮೆರೆ ಮೆಹಾಬೂಬ್ ಕಯಾಮತ್ ಹೋಗಯ್: ಪುಟ್ಟ ಬಾಲಕನ ಕಂಠಸಿರಿಗೆ ನೆಟ್ಟಿಗರು ಫಿದಾ

Published : Jul 10, 2022, 01:30 PM IST
ಮೆರೆ ಮೆಹಾಬೂಬ್ ಕಯಾಮತ್ ಹೋಗಯ್: ಪುಟ್ಟ ಬಾಲಕನ ಕಂಠಸಿರಿಗೆ ನೆಟ್ಟಿಗರು ಫಿದಾ

ಸಾರಾಂಶ

ಕೆಲ ವರ್ಷಗಳ ಹಿಂದೆ ಗುಲಾಬಿ ಆಂಖೆನ್ ಜೋ ತೆರಿ ದೇಖಾ ಹಾಡು ಹಾಡಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಮೂಡಿಸಿದ ಪೋರನ ನೆನಪಿದೆಯೇ ಈಗ ಆತ ಮತ್ತೊಂದು ಹಿಂದಿ ಹಾಡಿನೊಂದಿಗೆ ಬಂದಿದ್ದು, ನೆಟ್ಟಿಗರು ಮತ್ತೆ ಆತನ ಕಂಠಸಿರಿಗೆ ತಲೆಬಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಗುಲಾಬಿ ಆಂಖೆನ್ ಜೋ ತೆರಿ ದೇಖಾ ಹಾಡು ಹಾಡಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಮೂಡಿಸಿದ ಪೋರನ ನೆನಪಿದೆಯೇ ಈಗ ಆತ ಮತ್ತೊಂದು ಹಿಂದಿ ಹಾಡಿನೊಂದಿಗೆ ಬಂದಿದ್ದು, ನೆಟ್ಟಿಗರು ಮತ್ತೆ ಆತನ ಕಂಠಸಿರಿಗೆ ತಲೆಬಾಗಿದ್ದಾರೆ. ಆಗ ಇನ್ನು ಪುಟ್ಟವನಿದ್ದ ಬಾಲಕ ಈಗ ಸ್ವಲ್ಪ ಬೆಳೆದವನಂತೆ ಕಾಣುತ್ತಿದ್ದು, ಈತನ ಹಾಡು ಮಾತ್ರ ಎಲ್ಲರನ್ನು ಸೆಳೆಯುತ್ತಿದೆ. ಛತ್ತೀಸ್‌ಗಡ್‌ ಕೇಡಾರ್‌ನ ಭಾರತೀಯ ಆಡಳಿತ ಸೇವೆ ಅಧಿಕಾರಿ ಅವನೀಶ್‌ ಶರಣ್ (Awanish Sharan) ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ಈ ಬಾಲಕ ಗುಲಾಬಿ ಆಂಕೆನ್ ಹಾಡಿದ ಸಮಯದಲ್ಲಿ ನೆಟ್ಟಿಗರು, ಈ ಮುದ್ದಾದ ಮಗುವಿನ ಧ್ವನಿಗೆ ಸಂಪೂರ್ಣ ಫಿದಾ ಆಗಿದ್ದರು. ಈಗ ಈತ ಮೆರಿ 1964 ರ ಸಿನಿಮಾ 'ಮಿಸ್ಟರ್‌ ಎಕ್ಸ್‌ ಇನ್‌ ಬಾಂಬೆ'ಯ ಹಾಡು ಮೆರೆ ಮೆಹಾಬೂಬಾ ಕಾಯಾಮತ್ ಹೋಗಯಿ ( Mehboob Qayamat Hogi) ಹಾಡಿದ್ದಾನೆ. ಹಾಡಿನ ಜೊತೆಗೆ ಈತ ಕೀಬೋರ್ಡ್‌ ಕೂಡ ನುಡಿಸುತ್ತಿದ್ದಾನೆ. ಮೂಲತಃ ಈ ಹಾಡನ್ನು ಖ್ಯಾತ ಹಿಂದಿ ಸಿನಿಮಾಗಳ ಹಿನ್ನೆಲೆ ಗಾಯಕ ಕಿಶೋರ್‌ ಕುಮಾರ್ ಹಾಡಿದ್ದಾರೆ. ಇದನ್ನು 50 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. 

ಅಪ್ಪನ ಪಿಸ್ತೂಲ್‌ನಲ್ಲಿ ಮಕ್ಕಳ ಆಟ, ಅಚಾನಕ್ಕಾಗಿ ಸಿಡಿದ ಗುಂಡಿನಿಂದ 2 ವರ್ಷದ ಪುತ್ರ ಸಾವು!

ಸಾಮಾಜಿಕ ಜಾಲತಾಣಗಳಲ್ಲಿ ಇಂತ ಹಲವರು ವಿಡಿಯೋಗಳು ಇತ್ತೀಚೆಗೆ ಸಾಕಷ್ಟು ವೈರಲ್‌ ಆಗುತ್ತಿವೆ. ಕೆಲ ದಿನಗಳ ಹಿಂದೆ ಪುಟ್ಟ ಬಾಲಕನೋರ್ವ ಫ್ರೈಡ್ ರೈಸ್‌ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ಸ್ಟಾಗ್ರಾಮ್‌ (Instagram) ಬಳಕೆದಾರ @sonikabhasin ಎಂಬುವವರು ಅಪ್‌ಲೋಡ್ ಮಾಡಿದ ಈ ವೀಡಿಯೊದಲ್ಲಿ, ಅಡುಗೆ ಮನೆಯ ಸ್ಟೌಗೆ, ನಿಂತರು ಕೈಗೆಟುಕದಷ್ಟು ಪುಟ್ಟ ಬಾಲಕನೋರ್ವ ಸ್ಟೂಲ್‌ ಮೇಲೆ ನಿಂತು ರುಚಿಕರವಾದ ಫ್ರೈಡ್ ರೈಸ್ ಅನ್ನು ಮಾಡುತ್ತಿರುವುದನ್ನು ನೋಡಬಹುದು. ವೀಡಿಯೊದ ಆರಂಭದಲ್ಲಿ, ಮಗು ಸ್ಟೂಲ್ ಮೇಲೆ  ನಿಂತು ಸ್ಟೌ ಮೇಲೆ ಏನೋ ಅಡುಗೆ ಮಾಡುವಂತೆ ಕಾಣುತ್ತಾನೆ ನಂತರ, ಅವನ ತಾಯಿ ಅವನನ್ನು ಏನು ಅಡುಗೆ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ, ಅದಕ್ಕೆ ಅವನು "ಫ್ರೈಡ್ ರೈಸ್" ಎಂದು ಮುದ್ದಾಗಿ ಹೇಳುತ್ತಾನೆ. ನಂತರ ಅವರು ಫ್ರೈಡ್‌ರೈಸ್‌ಗೆ ಏನೆಲ್ಲಾ ಹಾಕುತ್ತಿದ್ದಿಯಾ ಎಂದು ಕೇಳುತ್ತಾರೆ. ಅದಕ್ಕೆ ಆತ ತರಕಾರಿಗಳನ್ನು ಉಲ್ಲೇಖಿಸಿ 'ಈರುಳ್ಳಿ, ಬೆಳ್ಳುಳ್ಳಿ, ಬೀನ್ಸ್ ಮತ್ತು ಕ್ಯಾಪ್ಸಿಕಂ ಎಂದು ಹೇಳುತ್ತಾನೆ. 

ನಂತರ ಸ್ವಲ್ಪ ಸಹಾಯದಿಂದ, ಅವರು ಬಾಣಲೆಗೆ ಅನ್ನವನ್ನು ಸೇರಿಸಿ ಮತ್ತು ಅದನ್ನು ಬೆರೆಸುತ್ತಾರೆ. ಈ ವೇಳೆ ಆತನ ತಾಯಿ(Mother) ಈಗ ನಾವು ಏನನ್ನು ಬರೆಸಿದೆವು ಎಂದು ಕೇಳುತ್ತಾರೆ. ಆಗ ಮಗು ಫ್ರೈಡ್‌ರೈಸ್‌ (Friedrice) ಎಂದು ಹೇಳುತ್ತಾನೆ. ನಂತರ ಒಮ್ಮೆ ಫ್ರೈಡ್‌ ರೈಸ್‌ ಬೆಂದ ನಂತರ ನಾನು ಸ್ವಲ್ಪ ಮೊಟ್ಟೆಗಳನ್ನು ಹಾಕುತ್ತೇನೆ ಎಂದು ಬಾಲಕ ಹೇಳುತ್ತಾನೆ. ನಂತರ ಫ್ರೈಡ್‌ರೈಸ್ ರೆಡಿಯಾಗುತ್ತದೆ. ಈ ಫ್ರೈಡ್ ರೈಸ್ ಅನ್ನು ಬಾಲಕನ ತಾಯಿ ಆತನಿಗೆ ಫ್ಲೇಟ್‌ನಲ್ಲಿ ಹಾಕಿ ಕೊಡುತ್ತಾರೆ. ನಂತರ ಯಾರು ಮಾಡಿದ್ದು, ಫ್ರೈಡ್‌ ರೈಸ್ ಎಂದು ಕೇಳುತ್ತಾರೆ. ಈ ವೇಳೆ ನಾನು ಎಂದು ಬಾಲಕ ಹೇಳುತ್ತಾನೆ. ಹೇಗಿದೆ ಎಂದು ಅಮ್ಮ ಆತನಲ್ಲಿ ಕೇಳಿದಾಗ ಬಾಲಕ ಯಮ್ಮಿ ಎನ್ನುತ್ತಾನೆ. 

ಬೂಮ್ರಾಗೆ ಚೀಯರ್ಸ್‌ ಮಾಡ್ತಿರುವ ಪುಟ್ಟ ಬಾಲಕ: ಹಳೆ ವಿಡಿಯೋ ಮತ್ತೆ ವೈರಲ್

ಈ ವೀಡಿಯೊವನ್ನು ಪೋಸ್ಟ್ ಮಾಡಿದಾಗಿನಿಂದ, ಇದನ್ನು 2 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅತ್ಯಂತ ಪ್ರತಿಭಾವಂತ ಬಾಲಕ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ವಾವ್‌ ಈತ ಸ್ವಾಭಿಮಾನಿ ನಿಮಗೆ ಅಭಿನಂದನೆಗಳು. ಈ ವಿಡಿಯೋ ತುಂಬಾ ಮುದ್ದಾಗಿದೆ ಬಾಲಕನೂ ಮುದ್ದಾಗಿದ್ದಾನೆ ಎಂದು ವಿಡಿಯೋ ನೋಡಿದವರು ಕಾಮೆಂಟ್ ಮಾಡಿದ್ದಾರೆ.

ಬಾಲಕನ(Boy) ತಾಯಿ ಹಳೇ ಸಂಪ್ರದಾಯಗಳನ್ನು ಮುರಿಯುತ್ತಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕನ ತಾಯಿ ಹಳೆ ಸಂಪ್ರದಾಯಗಳನ್ನು ಮುರಿಯುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಸ್ಟೀರಿಯೊಟೈಪ್‌ಗಳನ್ನು ಮುರಿಯುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಅವರಿಗೆ ಮೊದಲು ಹ್ಯಾಟ್ಸ್ ಆಫ್, ಅಡುಗೆ ಮನೆ ಸ್ತ್ರೀಗೆ ಮೀಸಲು ಎಂಬುದನ್ನು ಮರೆತು ಹೆಚ್ಚಿನ ಗಂಡುಮಕ್ಕಳ ಪೋಷಕರು ಇದನ್ನು ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?