ಕನ್ನಡದ ಹಿರಿಯ ನಟ ಶಿವರಂಜನ್ ಮೇಲೆ ಗುಂಡಿನ ದಾಳಿ

Published : Jul 13, 2022, 07:50 AM ISTUpdated : Jul 13, 2022, 08:02 AM IST
ಕನ್ನಡದ ಹಿರಿಯ ನಟ ಶಿವರಂಜನ್ ಮೇಲೆ ಗುಂಡಿನ ದಾಳಿ

ಸಾರಾಂಶ

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

ಬೆಳಗಾವಿ (ಜು.13): ಉದ್ಯಮಿ, ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಶಿವರಂಜನ್ ಬೋಳಣ್ಣವರ್ ಮನೆ ಎದುರು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದ್ದು,  ಅದೃಷ್ಟವಶಾತ್ ಮಿಸ್ ಫೈರ್ ಆಗಿ ಶಿವರಂಜನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ಘಟನೆ ನಡೆದಿದ್ದು, ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಬೈಲಹೊಂಗಲದ ಹಳೆಯ ಹನುಮಂತ ದೇವರ ದೇವಸ್ಥಾನ ಬಳಿ ಶಿವರಂಜನ್ ಅವರ ಮನೆ ಇದ್ದು, ಶಿವರಂಜನ್ ಸೋದರ ಸಂಬಂಧಿಯಿಂದಲೇ ಗುಂಡಿನ ದಾಳಿ  ನಡೆದಿದೆ ಎನ್ನಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ ಪಾಟೀಲ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.  ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ರಾತ್ರಿ ಏಳರಿಂದ ಎಂಟು ಗಂಟೆ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಶಿವರಂಜನ್‌ ಅವರ ಮೇಲೆ ಶೂಟೌಟ್‌ ನಡೆದಿರಬಹುದು ಎಂದು ಶಂಕಿಸಲಾಗಿದೆ. ಶಿವರಂಜನ್‌ ಅವರು ಈ ಹಿಂದೆ ನಟಿ ಶ್ರುತಿ ಅವರೊಂದಿಗೆ ಅಮೃತ ಸಿಂಧು, ಮತ್ತು ರಾಘವೇಂದ್ರ ರಾಜಕುಮಾರ್‌ ಅವರೊಂದಿಗೆ ಆಟ ಹುಡುಗಾಟ ಸೇರಿದಂತೆ ಸತ್ಯ ಸಂದೇಶ, ಬನ್ನಿ ಒಂದ್ಸಲ ನೋಡಿ,  ಬಿಸಿರಕ್ತ, ಕನಸೆಂಬ ಕುದುರೆಯನೇರಿ , ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?