ರಾಕಿಂಗ್ ಸ್ಟಾರ್ ಯಶ್ ಅವರು ಸಂದರ್ಶನಗಳಲ್ಲಿ ಆಗಾಗ ಕೆಲವು ಸೀಕ್ರೆಟ್‌ಗಳನ್ನು ಹೇಳುತ್ತಿರುತ್ತಾರೆ. ನಟ ಯಶ್ ಅವರು ಒಮ್ಮೆ ಹೀಗೆ ಹೇಳಿದ್ದಾರೆ. 'ಸಾಧನೆ ಅಂದ್ರೆ ಹೇಗಿರಬೇಕು? ಸಾಧನೆ ಅಂದರೆ, ಎಲ್ಲಿ ನಿಮ್ಮನ್ನು ಗುರುತಿಸಿರಲ್ಲವೋ..
ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಸಂದರ್ಶನಗಳಲ್ಲಿ ಆಗಾಗ ಕೆಲವು ಸೀಕ್ರೆಟ್‌ಗಳನ್ನು ಹೇಳುತ್ತಿರುತ್ತಾರೆ. ನಟ ಯಶ್ ಅವರು ಒಮ್ಮೆ ಹೀಗೆ ಹೇಳಿದ್ದಾರೆ. 'ಸಾಧನೆ ಅಂದ್ರೆ ಹೇಗಿರಬೇಕು? ಸಾಧನೆ ಅಂದರೆ, ಎಲ್ಲಿ ನಿಮ್ಮನ್ನು ಗುರುತಿಸಿರಲ್ಲವೋ, ಅಥವಾ ನಿಮ್ಮನ್ನು ಎಲ್ಲಿ ಜನರು ಹಿಯಾಳಿಸಿದ್ದಾರೋ, ಎಲ್ಲಿ ಟೀಕಿಸಿದಾರೋ ಅಲ್ಲಿ ನೀವು ಬೆಳೀಬೇಕು. ಅವರಿಂದಲೇ ನೀವು ಹೊಗಳಿಸಿಕೊಳ್ಳಬೇಕು. ಹಾಗಂತ ಅವ್ರದ್ದು ಏನೂ ತಪ್ಪಿರಲ್ಲ. ಸಮಯ ಅವ್ರಿಗೆ ಗೊತ್ತಿರಲ್ಲ, ಅವ್ರು ಏನೋ ಅಂದ್ಕೊಂಡು ತಮ್ಮ ಕರ್ತವ್ಯ ಅಂತ ಮಾಡ್ತಾ ಇರ್ತಾರೆ.
ಜನ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಶೇ. 90% ಜನರು ಕುಗ್ಗಿಹೋಗಿಬಿಡುತ್ತಾರೆ. ಆದರೆ, ಹಾಗೆ ಮಾಡಬಾರದು. ಯಾರು ಕುಗ್ಗೋದಿಲ್ವೋ ಅವನು ದೊಡ್ಡ ಸಾಧನೆ ಮಾಡ್ತಾನೆ' ಎಂದಿದ್ದಾರೆ ನಟ ಯಶ್. ಯಶ್ ಮಾತನಿ ಅರ್ಥ ಇದು ಎನ್ನಬಹುದು- ಜನರು ನಮ್ಮ ಬಗ್ಗೆ ಹೇಳಿದ್ದರಲ್ಲೇನಾದರೂ ಸರಿಯಾದ ಸಂಗತಿ ಇದ್ದರೆ ಖಂಡಿತವಾಗಿಯೂ ಅದನ್ನು ನಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸುಮ್ಮನಿದ್ದುಬಿಡಬೇಕು.
ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?
ಜನರು ಟೀಕೆ ಮಾಡಿದಾಗ ಯಾರು ಕುಗ್ಗದೇ ಇರುತ್ತಾನೋ ಅವನು ಮತ್ತೆ ಎದ್ದು ಬರುತ್ತಾನೆ. ಅವನೇ ದೊಡ್ಡ ಸಾಧನೆ ಮಾಡುತ್ತಾನೆ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಹಾಗಂತ ಜನರದ್ದು, ಅಂದರೆ ಸಮಾಜದ್ದೂ ತಪ್ಪೇನಿಲ್ಲ. ಯಾಕೆ ಅಂದ್ರೆ ಜನರು ಅವ್ರಿಗೆ ಏನು ತೋಚುತ್ತೋ ಅದನ್ನು ಹೇಳ್ತಾರೆ, ಮಾಡ್ತಾರೆ ಮತ್ತು ಬೇರೆಯವರಿಗೂ ಮಾಡೋದಕ್ಕೆ ಹೇಳ್ತಾರೆ. ಆದರೆ, ನಮಗೆ ನಾವು ಸಾಧಿಸಿಬೇಕು ಎಂಬ ಛಲ ಒಳಗಡೆ ಇರ್ಬೇಕು.
ನಾಪತ್ತೆಯಾಗಿರೋ ದರ್ಶನ್ ಮ್ಯಾನೇಜರ್ ಏನ್ ಮಾಡಿದ್ರು; ಏನ್ ಆಗಿರ್ಬಹುದು ಅವ್ರ ಕಥೆ?
ರಾಕಿಂಗ್ ಸ್ಟಾರ್ ನಟ ಯಶ್ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಸ್ನೇಹ, ಗೆಳೆತನದ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಸ್ನೇಹ ತುಂಬಾ ಮುಖ್ಯವಾದುದು. ಸ್ನೇಹ ಅಂದ್ರೆ ಏನು ಅಂದ್ರೆ, ನಾವು ಏನ್ ಮಾಡಿದೀವೋ ಅದು ವಾಪಸ್ ಬರುತ್ತೆ ಪ್ರಪಂಚದಲ್ಲಿ. ಅದೇ ಅಲ್ವಾ ಜೀವನದ ಬೇಸಿಕ್? ನಟ ಯಶ್ ಕೂಡ ಅದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಅದನ್ನೇ ಅವರು ಹೇಳಿದ್ದಾರೆ ಕೂಡ.
ಆ್ಯಂಕರ್ ಅನುಶ್ರೀ ಜತೆ ಉಪೇಂದ್ರ ; ಸಿನಿಮಾನ ಹೇಳಿಕೊಡದೇ ಹೇಳಿಕೊಡೋರು ಕಾಶೀನಾಥ್!
ನಟ ಯಶ್ ಮಾತು ಅದೆಷ್ಟು ಸತ್ಯ ಅಲ್ಲವೇ? ಸನಾತನ ಧರ್ಮದ ತಿರಳೇ ಅದು, ಸಿದ್ದಾಂತವೇ ಅದು. ಅದನ್ನೇ ಕರ್ಮ ಸಿದ್ಧಾಂತ ಎಂದು ಕರೆಯುವುದು. ನಾವು ಏನು ಮಾಡಿದ್ದೇವೋ ಅದೇ ನಮಗೆ ಸಿಗುತ್ತದೆ. ಅದನ್ನು ಜನ್ಮಜನ್ಮಾಂತರಕ್ಕೆ ಅಳವಿಡಿಸಿ ಹೇಳಿದ್ದಾರೆ. ಆದರೆ, ಸ್ನೇಹದ ವಿಷಯದಲ್ಲಿ ಅದು ತತ್ ಕ್ಷಣದ ಪರಿಣಾಮ. ಅಂದರೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ. ನಾವು ಯಾವ ರೀತಿಯಲ್ಲಿ ಎಷ್ಟು ಒಳ್ಳೆಯ ಸ್ನೇಹವನ್ನು ಕೊಡುತ್ತೇವೆಯೋ ಅಷ್ಟು ನಮಗೆ ಅದು ವಾಪಸ್ ಬರುತ್ತದೆ.
ಅಭಿಮಾನಿ ಅಶ್ಲೀಲ ಸಂದೇಶಕ್ಕೆ ಕಾನೂನು ಕೈಗೆತ್ತಿಕೊಂಡಿದ್ಯಾಕೆ ನಟ ದರ್ಶನ್? ಅಜ್ಞಾನದ ಪರಮಾವಧಿಯೇ?
ಯಾವುದಾದರೂ ಅಷ್ಟೇ. ನಾವು ಕೊಡುವುದೇ ನಮಗೆ ವಾಪಸ್ ಬರುತ್ತದೆ. ಅದು ಪ್ರೀತಿ, ಕರುಣೆ, ದ್ವೇಷ, ದಯೆ ಅಥವಾ ಸ್ನೇಹ ಹೀಗೆ ಯಾವುದೇ ಆಗಿರಲಿ, ನಾವೇನು ನೀಡಿದ್ದೇವೆಯೋ ಅದೇ ನಮಗೆ ವಾಪಸ್ ಬರುತ್ತದೆ. ಈ ಪ್ರಪಂಚ ನಡೆಯುವುದೇ ಹೀಗೆ. ಅದನ್ನು ಚೆನ್ನಾಗಿ ಅರಿತಿರುವ ಯಶ್ ಯಾವುದೋ ಒಂದು ವೇದಿಕೆಯಲ್ಲಿ ಈ ಮಾತು ಹೇಳಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಹೇಳಿ ಕೇಳಿ ನಟ ಯಶ್ ಈಗ ಪ್ಯಾನ್ ಇಂಡಿಯಾ ನಟ. ಅಷ್ಟೇ ಅಲ್ಲ, ಚಿಕ್ಕ ವಯಸ್ಸಿನಲ್ಲೇ ಪ್ರಪಂಚದ ತುಂಬಾ ಹೆಸರು ಮಾಡಿರುವ ವ್ಯಕ್ತಿ.
ದರ್ಶನ್ ಗ್ಯಾಂಗ್ ಮೇಲೆ ಮತ್ತೊಂದು ಡೌಟ್, ಮೋರಿ ಪಾಲಾದ್ರಾ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್?