Latest Videos

ದರ್ಶನ್ ಗ್ಯಾಂಗ್ ಮೇಲೆ ಮತ್ತೊಂದು ಡೌಟ್, ಮೋರಿ ಪಾಲಾದ್ರಾ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್?

By Contributor AsianetFirst Published Jun 14, 2024, 12:26 PM IST
Highlights

ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು ಮಲ್ಲಿಕಾರ್ಜುನ್.  ದರ್ಶನ್ ಮ್ಯಾನೇಜರ್ 1 ಕೋಟಿ ರೂಪಾಯಿ ವಂಚಿಸಿದ ಬಗ್ಗೆ ದೂರು ನೀಡಿದ್ದರು ಅರ್ಜುನ್ ಸರ್ಜಾ.

ನಟ ದರ್ಶನ್ ಅವರು ತಮ್ಮ ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪೋಲೀಸ್ ಕಸ್ಟಡಿಯಲ್ಲಿ ಸದ್ಯ  ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್, ದಶ್ನ್ ಸ್ನೇಹಿತೆ-ನಟಿ ಪವಿತ್ರಾ ಗೌಡ ಸೇರಿದಂತೆ 13 ಜನ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ, ಈ ವೇಳೆ, ದರ್ಶನ್ ಹಳೆಯ ಮ್ಯಾನೇಜಯ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣದ ಬಗ್ಗೆ ಆತಂಖ ಮೂಡತೊಡಗಿದೆ. ಕಾರಣ, ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಸಂಕನಗೌಡರ್ 2018ರಿಂದಲೂ ನಾಪತ್ತೆಯಾಗಿದ್ದಾರೆ. 

ನಟ ದರ್ಶನ್ ಗ್ಯಾಂಗ್ ಮೇಲೆ ಶುರುವಾಗಿದೆ ಮತ್ತೊಂದು ಡೌಟ್. ನಟ ದರ್ಶನ್ ಮ್ಯಾನೇಜ್ ಮಲ್ಲಿಕಾರ್ಜು್ ನಾಪತ್ತೆ ಪ್ರಕರಣ ಈಗ ಎಲ್ಲರಿಗೆ ನೆನಪಾಗತೊಡಗಿದೆ. 2011 ರಿಂದ 2018ರವರೆಗೂ ದರ್ಶನ್ ಮ್ಯಾನೇಜರ್ ಆಗಿದ್ದವರು ಮಲ್ಲಿಕಾರ್ಜುನ್. ಅದರೆ, 2018ರಿಂದ ಏಕಾಏಕಿ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಮಲ್ಲಿಕಾರ್ಜುನ್‌ ಬಗ್ಗೆ ಮಾಹಿತಿ ನೀಡಿ, ಈ  ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲು ಕೋರ್ಟ್ ಸೂಚನೆ ನೀಡಿತ್ತು. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. 

ವಿಜಯಲಕ್ಷ್ಮೀನೇ ತಪ್ಪು ಮಾಡ್ಬಿಟ್ಟು, ಆವತ್ತೇ ಜಾಸ್ತಿ ಜೈಲೂಟ ಮಾಡ್ಸಿದಿದ್ರೆ ಇವತ್ತು ಹೀಗಾಗ್ತಿರ್ಲಿಲ್ಲ!

ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು ಮಲ್ಲಿಕಾರ್ಜುನ್.  ದರ್ಶನ್ ಮ್ಯಾನೇಜರ್ 1 ಕೋಟಿ ರೂಪಾಯಿ ವಂಚಿಸಿದ ಬಗ್ಗೆ ದೂರು ನೀಡಿದ್ದರು ಅರ್ಜುನ್ ಸರ್ಜಾ. ಈ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಮೇಲೆ ಗರಂ ಆಗಿದ್ದರು ನಟ ದರ್ಶನ್. ಬಳಿಕ ರಾತ್ರೋರಾತ್ರಿ ನಾಪತ್ತೆಯಾಗಿದ್ದರು  2011ರಿಂದಲೂ ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಸಂಕನಗೌಡರ್. 

ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನ; ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ ವಿಜಯಲಕ್ಷ್ಮೀ

ದರ್ಶನ್‌ಗೆ ಸೇರಿದ 10 ಕೋಟಿ ಹಣ ವಂಚನೆ ಮಾಡಿದ್ದಾಗಿ ಮಲ್ಲಿಕಾರ್ಜುನ್ ಮೇಲೆ ಆರೋಪ ಬಂದಿತ್ತು. ನಾಪತ್ತೆಯಾಗುವ ಮುನ್ನ ಮಲ್ಲಿಕಾರ್ಜುನ್ ತಮ್ಮ ಪತ್ನಿಗೆ ಪತ್ರವೊಂದನ್ನು ಬರೆದಿದ್ದರು ಎನ್ನಲಾಗಿದೆ. ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಬಗ್ಗೆ ಅನುಮಾನ ಮೂಡತೊಡಗಿದೆ. ನಟ ದರ್ಶನ್ ಅವರ ಹಳೆಯ ಮ್ಯಾನೇಜರ್ ಮಲ್ಲಿಕಾರ್ಜುನ್ ಸಂಕನಗೌಡರ್ ಬದುಕಿದ್ದಾರಾ ಅಥವಾ ರೇಣುಕಾಸ್ವಾಮಿಯಂತೆ ಕೊಲೆಯಾಗಿ ಹೋಗಿರಬಹುದೇ ಎಂಬ ಸಂದೇಶ ಮೂಡತೊಡಗಿದೆ. 

ನಟಿ ಖುಷ್ಬೂ ರವಿಚಂದ್ರನ್‌ಗೆ ಯಾಕೆ ಹಣ ಕೊಟ್ರು? ಮಾಲಾಶ್ರೀಗೂ ಅದಕ್ಕೂ ಲಿಂಕ್ ಏನು?

click me!