ಕಮಿಶನ್ ಪಡೆಯುತ್ತಿದ್ರಾ ಮಲ್ಲಿಕಾರ್ಜುನ್? ಕಮಿರ್ಷಿಯಲ್ ಶಾಪ್ ಉದ್ಘಾಟನೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ದರ್ಶನ್ ಬರಬೇಕು ಅಂದ್ರೆ ಮೊದಲು ಮಲ್ಲಿಕಾರ್ಜುನ್ ಒಪ್ಪಬೇಕಿತ್ತಂತೆ. ಹಾಗೇ ಮಲ್ಲಿಕಾರ್ಜುನ್ ಒಪ್ಪಿಕೊಳ್ಳಬೇಕು ಅಂದ್ರೆ ಕಮಿಶನ್..
ಶಿವನ ಮುಂದೆ ನಂದಿ ಹೇಗೋ ಹಾಗೇ, 'ಚಕ್ರವರ್ತಿ' ಸಾಮ್ರಾಜ್ಯದ ಮಂತ್ರಿಯಂತೆ ನಟ ದರ್ಶನ್ ಜೊತೆಗೆ ಸದಾ ಇರುತ್ತಿದ್ದವರು ಮಲ್ಲಿಕಾರ್ಜುನ್. ದರ್ಶನ್ ರವರ ಕಾಲ್ ಶೀಟ್, ಸಂಭಾವನೆ, ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದವರು ಇದೇ ಮಲ್ಲಿಕಾರ್ಜುನ್. ಸಿನಿಮಾ ನಿರ್ಮಾಪಕರು, ಮೀಡಿಯಾದವರು, ಪತ್ರಕರ್ತರು ಇವರೆಲ್ಲ ದರ್ಶನ್ ನ ಭೇಟಿ ಮಾಡಬೇಕು ಅಂದ್ರೆ ಮಲ್ಲಿಕಾರ್ಜುನ್ ರಿಂದಲೇ ಅಪಾಯಿಟ್ಮೆಂಟ್ ಪಡೆಯಬೇಕಿತ್ತು. ಅಷ್ಟರಮಟ್ಟಿಗೆ 'ಚಕ್ರವರ್ತಿ' ಸಾಮ್ರಾಜ್ಯದ ಶಕ್ತಿಶಾಲಿ ಮಂತ್ರಿಯಾಗಿದ್ದವರು ಈ ಮಲ್ಲಿಕಾರ್ಜುನ್. ಬಿ. ಸಂಕನಗೌಡರ್.
ದರ್ಶನ್ ವ್ಯವಹಾರಗಳ ಮಾನಿಟರ್, ದರ್ಶನ್ ರವರ ಎಲ್ಲಾ ಹಣಕಾಸು ವ್ಯವಹಾರಗಳನ್ನು ಮಾನಿಟರ್ ಮಾಡುತ್ತಿದ್ದರು ಮಲ್ಲಿಕಾರ್ಜುನ್. ದರ್ಶನ್ ಒಡೆತನದ ಪ್ರೊಡಕ್ಷನ್ ಸಂಸ್ಥೆ ಹಾಗೂ ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಉಸ್ತುವಾರಿ ವಹಿಸಿಕೊಂಡಿದ್ದೂ ಕೂಡ ಇದೇ ಮಲ್ಲಿಕಾರ್ಜುನ್.
ಮ್ಯಾನೇಜರ್ ಮಲ್ಲಿಕಾರ್ಜುನ್ ಇದ್ದಕ್ಕಿದ್ದಂತೆ ಪರಾರಿ ಆಗಲು ಕಾರಣ ಬರೋಬ್ಬರಿ 10 ಕೋಟಿ ರೂಪಾಯಿ ಸಾಲ ಎನ್ನಲಾಗಿದೆ. ಹೌದು, ಕೋಟ್ಯಾಂತರ ರೂಪಾಯಿ ಸಾಲ ಮಾಡಿರುವ ಈ ಭೂಪ ಈಗ ತಲೆಮರೆಸಿಕೊಂಡಿದ್ದಾರೆ.
ದರ್ಶನ್ ಗ್ಯಾಂಗ್ ಮೇಲೆ ಮತ್ತೊಂದು ಡೌಟ್, ಮೋರಿ ಪಾಲಾದ್ರಾ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್?
ಕೆಲವರ ಜೊತೆ ಸೇರಿಕೊಂಡು ಯಶ್ ಅಭಿನಯದ 'ಮೊದಲಾ ಸಲ' ಚಿತ್ರವನ್ನ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದರು. 'ಮೊದಲಾ ಸಲ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಕಲೆಕ್ಷನ್ ಮಾತ್ರ ಆಗಲಿಲ್ಲ. ಹೀಗಾಗಿ ಮಲ್ಲಿಕಾರ್ಜುನ್ ಗೆ ನಷ್ಟ ಆಯ್ತು. 80 ಲಕ್ಷ ಸಾಲದ ಹೊರೆ ಮಲ್ಲಿಕಾರ್ಜುನ್ ತಲೆ ಮೇಲೆ ಬಿತ್ತು. ನಟ ದರ್ಶನ್ ರಿಂದ 90 ಲಕ್ಷ ಸಾಲ ತೆಗೆದುಕೊಂಡಿದ್ದರಂತೆ ಮಲ್ಲಿಕಾರ್ಜುನ್! ಅಂದರೆ, ದರ್ಶನ್ ಒಬ್ಬರೇ ಮಲ್ಲಿಕಾರ್ಜುನ್ ಗೆ 90 ಲಕ್ಷ ಕೊಟ್ಟಿದ್ದಾರೆ. ಇನ್ನೂ ಮಲ್ಲಿಕಾರ್ಜುನ್ ಕೇಳಿ ಕೇಳಿದಾಗೆಲ್ಲ ದಿನಕರ್ ಕೂಡ ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ.
ವಿಜಯಲಕ್ಷ್ಮೀನೇ ತಪ್ಪು ಮಾಡ್ಬಿಟ್ಟು, ಆವತ್ತೇ ಜಾಸ್ತಿ ಜೈಲೂಟ ಮಾಡ್ಸಿದಿದ್ರೆ ಇವತ್ತು ಹೀಗಾಗ್ತಿರ್ಲಿಲ್ಲ!
ಈ ಹಣವನ್ನೆಲ್ಲ ಪಡೆದು ಹಳೆಯ ಸಾಲವನ್ನೂ (ಮೊದಲಾ ಸಲ-80 ಲಕ್ಷ) ತೀರಿಸದೆ, ದರ್ಶನ್ ಕೈಗೂ ಸಿಗದೆ 2018ರಲ್ಲಿ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ಎಸ್ಕೇಪ್ ಆಗಿದ್ದಾರೆ. ಒಟ್ಟು ಸಾಲದ ಮೊತ್ತ 10-12 ಕೋಟಿ ಎನ್ನಲಾಗಿದೆ. ಸಂಪಾದನೆ, ಹಣದ ಹರಿವು ಚೆನ್ನಾಗಿಯೇ ಇದ್ದರೂ, ತಮ್ಮ ಸಾಲವನ್ನ ಮಾತ್ರ ಮಲ್ಲಿಕಾರ್ಜುನ್ ತೀರಿಸಿರಲಿಲ್ಲ. ಹೀಗಾಗಿ ಸಾಲ ಬೆಳೆದು ಬೆಳೆದು ಇದೀಗ 10-12 ಕೋಟಿ ಆಗಿದೆ. ಸಾಲ ಕೊಟ್ಟಿರುವವರು ಇದೀಗ ದರ್ಶನ್ ಹಾಗೂ ದಿನಕರ್ ಅವರನ್ನು ಕೇಳ್ತಿದ್ದಾರಂತೆ!
ನಟಿ ಖುಷ್ಬೂ ರವಿಚಂದ್ರನ್‌ಗೆ ಯಾಕೆ ಹಣ ಕೊಟ್ರು? ಮಾಲಾಶ್ರೀಗೂ ಅದಕ್ಕೂ ಲಿಂಕ್ ಏನು?
ಹಾಗಿದ್ದರೆ ಕಮಿಶನ್ ಪಡೆಯುತ್ತಿದ್ರಾ ಮಲ್ಲಿಕಾರ್ಜುನ್? ಕಮಿರ್ಷಿಯಲ್ ಶಾಪ್ ಉದ್ಘಾಟನೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ದರ್ಶನ್ ಬರಬೇಕು ಅಂದ್ರೆ ಮೊದಲು ಮಲ್ಲಿಕಾರ್ಜುನ್ ಒಪ್ಪಬೇಕಿತ್ತಂತೆ. ಹಾಗೇ ಮಲ್ಲಿಕಾರ್ಜುನ್ ಒಪ್ಪಿಕೊಳ್ಳಬೇಕು ಅಂದ್ರೆ ಕಮಿಶನ್ ಕೊಡಬೇಕಿತ್ತಂತೆ ಅನ್ನೋದು ಮತ್ತೊಂದು ಗಾಸಿಪ್. 'ಮಲ್ಲಿ' ಮೇಲೆ ನಂಬಿಕೆ ಇಟ್ಟು ಅವರು ಹೇಳಿದ ಕಡೆಯೆಲ್ಲಾ ದರ್ಶನ್ ಹೋಗ್ತಿದ್ರು. ಆದ್ರೆ, ಈ ಕಮಿಶನ್ ಮ್ಯಾಟರ್ 'ದಾಸ'ನಿಗೆ ಗೊತ್ತಿರ್ಲಿಲ್ವಾ ಎಂಬ ಸಂದೇಹವಿದೆ.
ಒಟ್ಟಿನಲ್ಲಿ, ಇದೀಗ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿರುವ ಹೊತ್ತಲ್ಲಿ, ನಟ ದರ್ಶನ್ ಅವರ ಹಳೆಯ ಮ್ಯಾನೇಜರ್ ನಾಪತ್ತೆ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಕೋರ್ಟ್ ಸೂಚನೆ ಕೊಟ್ಟರೂ ಮಲ್ಲಿಕಾರ್ಜುನ್ ಪತ್ತೆಯಾಗಿಲ್ಲ ಅಂದರೆ ಅವರೂ ಕೂಡ ರೇಣುಕಾಸ್ವಾಮಿ ಅವರಂತೆ ಕೊಲೆ ಆಗಿರಬಹುದೇ ಎಂಬ ಪ್ರಶ್ನೆ ಮೂಡತೊಡಗಿದೆ. ಏಕೆಂದರೆ, ಅಂದು 2018ರಲ್ಲಿ, ಬರೋಬ್ಬರಿ 10 ಕೋಟಿ ರೂಪಾಯಿಗಳ ಮೋಸ ಆದಾಗ ಸಹಜವಾಗಿಯೇ ನಟ ದರ್ಶನ್ ತಮ್ಮ ಮ್ಯಾನೇಜರ್ ವಿರುದ್ಧ ಕೋಪಗೊಂಡಿದ್ದರು.
ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?