
ಬೆಂಗಳೂರು[ಆ. 11] ಸನ್ನಿ ಲಿಯೋನ್ ನೆರೆ ಪರಿಹಾರಕ್ಕೆ 2 ಕೋಟಿ ರೂ. ನೀಡಿದ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಯಾವ ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲ.
ಕಳೆದ ವರ್ಷ ಕೇರಳದಲ್ಲಿ ಪ್ರವಾಹ ಬಂದಾಗಲೂ ಸನ್ನಿ ಲಿಯೋನ್ 5 ಕೋಟಿ ನೀಡಿದ್ದರು.. ಎರಡು ಕೋಟಿ ನೀಡಿದ್ದರು ಎಂಬ ಸುದ್ದಿ ಹರಿದಾಡಿದ್ದವು. ನಿಜಕ್ಕೂ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ ಮರುಗಿದ್ದರು. ಅಕ್ಕಿ, ಬೇಳೆ, ಸೋಪು ಮತ್ತಿತರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು. ಇದೀಗ ಕರ್ನಾಟಕ ಪ್ರವಾಹಕ್ಕೂ ದೇಣಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೇಣುಕಾಚಾರ್ಯ ತೆಪ್ಪದ ನಾಟಕ; ಶ್ರೀರಾಮುಲು ಕಬಡ್ಡಿ ಆಟ; ಸಾರ್ಥಕವಾಯ್ತು ಶಾಸಕರೇ!
ಆದರೆ ಸದ್ಯಕ್ಕೆ ಇರುವ ಮಾಹಿತಿಗಳು ಸನ್ನಿ ಲಿಯೋನ್ ಇಂಥ ಯಾವ ಉದಾರತೆಯನ್ನು ತೋರಿಸಿಲ್ಲ ಎಂದೇ ಹೇಳುತ್ತಿವೆ. ಯಾರೋ ಸನ್ನಿಯ ಕಟ್ಟಾ ಅಭಿಮಾನಿಗಳು ಈ ರೀತಿಯ ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದು ಫುಲ್ ವೈರಲ್ ಆಗುತ್ತಿದೆ.
ಸನ್ನಿ ಲಿಯೋನ್ ಕೇರಳಕ್ಕೆ 5 ಕೋಟಿ ನೀಡಿದ್ರಾ? ಸೋಶಿಯಲ್ ಮೀಡಿಯಾ ಕತೆ
ವದಂತಿಗಳ ಸತ್ಯಾಸತ್ಯತೆ ಬಗ್ಗೆ ಸನ್ನಿ ಲಿಯೋನ್ ಅವರ ಬಳಿ ಸ್ಪಷ್ಟನೆ ಕೇಳುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಸನ್ನಿ ಲಿಯೋನ್ ಕೇವಲ ಒಬ್ಬ ನೀಲಿ ಚಿತ್ರತಾರೆಯಾಗಿ ಅಥವಾ ಬಾಲಿವುಡ್ ತಾರೆಯಾಗಿ ಗುರುತಿಸಿಕೊಂಡಿಲ್ಲ. ಅನೇಕ ಅನಾಥ ಮಕ್ಕಳ ಪೋಷಣೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.