ಭಾರತದ ಸಿನಿಮಾಗಳಿಗೆ ಪಾಕ್‌ ನಿಷೇಧ

By Web DeskFirst Published Aug 9, 2019, 11:52 AM IST
Highlights

ಜಮ್ಮು ಕಾಶ್ಮೀರಕ್ಕೆ ವಿಶೇಷ  ಸ್ಥಾನಮಾನ ಕಲ್ಪಿಸಿದ ಬಳಿಕ  ಇದೀಗ ಪಾಕಿಸ್ತಾನ ಭಾರತದ ವಿರುದ್ಧ ಕೆಂಡ ಕಾರುತ್ತಿದೆ. ಇದರ ಎಫೆಕ್ಟ್ ಸಿನಿಮಾ ಕ್ಷೇತ್ರಕ್ಕೂ ತಟ್ಟಿದ್ದು ಭಾರತದ ಸಿನಿಮಾಗಳನ್ನು ಬ್ಯಾನ್ ಮಾಡಲಾಗಿದೆ. 

ಇಸ್ಲಮಾಬಾದ್‌ (ಆ.09):  ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ.

ಜಮ್ಮು ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಯುದ್ಧ ಸಂದೇಶ ರವಾನಿಸಿದ ಬೆನ್ನಲ್ಲೇ ಸಿನಿಮಾ ಕ್ಷೇತ್ರದ ಮೇಲೂ ತನ್ನ ಸಿಟ್ಟು ತೀರಿಸಿಕೊಳ್ಳುತ್ತಿದೆ. 

ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳಿಗೂ ನಿಷೇಧ ಹೇರಲಾಗಿದೆ. ಇಲ್ಲಿ ಯಾವ ಸಿನಿಮಾಗಳ ಪ್ರದರ್ಶನವನ್ನೂ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ.

ಪಾಕ್‌ ಸಚಿವನಿಂದ ಬಂತು ಯುದ್ಧ ಎಚ್ಚರಿಕೆ! 

‘ಪಾಕಿಸ್ತಾನದ ಯಾವುದೇ ಥಿಯೇಟರ್‌ಗಳಲ್ಲಿ ಭಾರತದ ಸಿನಿಮಾಗಳು ಪ್ರಸಾರವಾಗಕೂಡದು’ ಎಂದು ಪಾಕ್‌ ಮಾಹಿತಿ ಮತ್ತು ಪ್ರಸಾರ ಇಲಾಖೆ ಟ್ವೀಟ್‌ ಮಾಡಿದೆ.

click me!