ಈ ವಾರ ತೆರೆ ಕಾಣಲಿದೆ ’ನಾತಿ ಚರಾಮಿ’

By Web Desk  |  First Published Dec 25, 2018, 4:26 PM IST

ಶೃತಿ ಹರಿಹರನ್ ಅಭಿನಯದ ’ನಾತಿ ಚರಾಮಿ’ ಸಿನಿಮಾ ಇದೇ ವಾರ ಬಿಡುಗಡೆಯಾಗಲಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರ ಇದಾಗಿದೆ. ಶೃತಿ ತುಂಬಾ ವಿಭಿನ್ನವಾಗಿ ಕಾಣಿಸುತ್ತಾರೆ. 


ಬೆಂಗಳೂರು (ಡಿ. 25): ರಮೇಶ್ ರೆಡ್ಡಿ(ನಂಗಲಿ) ಅವರ ತೇಜಸ್ವಿನಿ ಎಂಟರ್ ಪ್ರೈಸಸ್ ಅರ್ಪಿಸುವ, ಜಗನ್ಮೋಹನ್ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಅವರು ನಿರ್ಮಿಸಿರುವ `ನಾತಿಚರಾಮಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

’ನಾತಿ ಚರಾಮಿ’ ಯಲ್ಲಿ ಶೃತಿ ಹರಿಹರನ್ ಲುಕ್ ಹೀಗಿದೆ

ಸಂಧ್ಯಾರಾಣಿ ಹಾಗೂ ಮಂಜುನಾಥ್ ಎಸ್(ಮಂಸೋರೆ) ಕಥೆ ಬರೆದಿರುವ ಈ ಚಿತ್ರಕ್ಕೆ ಮಂಸೋರೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಿಂದುಮಾಲಿನಿ ಸಂಗೀತ ನೀಡಿದ್ದಾರೆ. ನಾಗೇಂದ್ರ ಕೆ ಉಜ್ಜನಿ ಸಂಕಲನ ಹಾಗೂ ಸಂತೋಷ್ ಪಾಂಚಾಲ್  ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಸಂಧ್ಯಾರಾಣಿ ಹಾಗೂ ಅಭಯ್ ಸಿಂಹ ಸಂಭಾಷಣೆ ಬರೆದಿದ್ದಾರೆ. ಕಿರಣ್ ಕಾವೇರಪ್ಪ, ನಂದಿನಿ ನಂಜಪ್ಪ, ಮದನ್ ಬೆಳ್ಳಿಸಾಲು ಹಾಗೂ ಮಂಸೋರೆ ಚಿತ್ರದ ಗೀತೆಗಳನ್ನು ರಚಿಸಿದ್ದಾರೆ.

Tap to resize

Latest Videos

click me!