ಸೋಶಿಯಲ್ ಮೀಡಿಯಾದಲ್ಲಿ ಜಾಹ್ನವಿ ಕಪೂರ್ ಯಾವುದೇ ಫೋಟೋ ಹಾಕಿದ್ರೂ ಅದಕ್ಕೆ ಪಾಸಿಟಿವ್ ಕಾಮೆಂಟ್ಸ್ ಬರ್ತಿದೆ. ಇದೇ ವಿಚಾರವಾಗಿ ಅವರಿಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ನೀಡಿರುವ ಉತ್ತರ ಕೂಡ ಇಂಟ್ರಸ್ಟಿಂಗ್ ಆಗಿದೆ.
ಜಾಹ್ನವಿ ಕಪೂರ್ ಸಾಮಾನ್ಯವಾಗಿ ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡೋಕ್ಕೆ ಹಿಂಜರಿಯೋದಿಲ್ಲ. ಏನು ಅನಿಸುತ್ತೋ ಅದನ್ನು ಮುಕ್ತವಾಗಿ ಮಾತನಾಡುತ್ತಾರೆ. ಇತ್ತೀಚೆಗೆ, ಆಕೆಯ ಮೇಲೆ ದೊಡ್ಡ ಆರೋಪ ಕೇಳಿ ಬಂದಿದೆ. ಅದೇನೆಂದರೆ, ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಡುವ ಪ್ರತಿ ಪೋಸ್ಟ್‌ಗೆ ಪಾಸಿಟಿವ್ ಕಾಮೆಂಟ್ ಮಾಡುವ ಸಲುವಾಗಿಯೇ ಹಣ ಖರ್ಚು ಮಾಡುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಮಾತನಾಡಿರುವ ಆಕೆ, ನನ್ನ ಕುರಿತಾಗಿ ಪಾಸಿಟಿವ್ ಕಾಮೆಂಟ್ ಮಾಡಿದಲ್ಲಿ ಅವರಿಗೆ ಹಣ ನೀಡುವಷ್ಟು ಶ್ರೀಮಂತೆ ನಾನಾಗಿಲ್ಲ ಎಂದು ಹೇಳಿದ್ದಾರೆ. ಜಾಹ್ನವಿ ಕಪೂರ್ ಅಭಿನಯದ ಮುಂದಿನ ಸಿನಿಮಾ ಉಲ್ಜಾ ಆಗಸ್ಟ್ 2 ರಂದು ಬಿಡುಗಡೆಗೆ ಸಿದ್ಧವಾಗಿದೆ. ನಾನು ಆನ್‌ಲೈನ್‌ನಲ್ಲಿ ಯಾವುದೇ ರೀತಿಯ ಹೊಗಳಿಕೆ ಸ್ವೀಕರಿಸಿದರೂ ಅದನ್ನು ನನ್ನ ಪಿಆರ್ ಟೀಮ್‌ನ ಕೆಲಸ ಎಂದೇ ಹೇಳಲಾಗುತ್ತದೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಯಾರಾದರೂ ತಪ್ಪಾಗಿ ನನ್ನನ್ನು ಹೊಗಳಿ ಕಾಮೆಂಟ್ ಮಾಡಿದರೆ, ಮುಗಿದೇ ಹೋಯಿತು. ಈ ಟ್ರೋಲರ್ಸ್‌ಗಳು ಇದು ನನ್ನ ಪಿಆರ್ ಎಂದು ಹೇಳೋಕೆ ಶುರು ಮಾಡ್ತಾರೆ. ನಾನು ನಿಜವಾಗಲೂ ಹೇಳುತ್ತೇನೆ. ನನ್ನ ಹೊಗಳಿ ಪೋಸ್ಟ್ ಮಾಡುವವರಿಗೆ ದುಡ್ಡು ನೀಡುವಷ್ಟು ಹಣ ನನ್ನ ಬಳಿ ಖಂಡಿತಾ ಇಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಧರ್ಮ ಪ್ರೊಡಕ್ಷನ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕರಣ್ ಜೋಹರ್ ಜೊತೆ ಮಾತನಾಡಿದ್ದ ಜಾಹ್ನವಿ ಕಪೂರ್, ನಾನು ಸಿನಿಮಾ ಕುಡುಂಬದ ಹುಡುಗಿಯಾಗಿರುವ ಕಾರಣಕ್ಕೆ ಯಾವ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ ಅನ್ನೋದನ್ನು ತಿಳಿಸಿದ್ದಾರೆ. 'ಕರಣ್ ನಾನು ತುಂಬಾ ಯೋಚನೆ ಮಾಡುತ್ತೇನೆ. ನಾನು ಪ್ರತಿ ಬಾರಿ ಏನಾದರೂ ಮಾಡಿದಾಗ ಟ್ರೋಲ್ ಆಗುತ್ತೇನೆ. ನಾನು ಪ್ರಿವಿಲೆಜ್ಡ್ ಪ್ರಾಬ್ಲಮ್ ಆಗಿರುವ ಕಾರಣಕ್ಕೆ ಹೀಗೆ ಆಗುತ್ತಿದೆ' ಎಂದು ಹೇಳಿದ್ದಾರೆ.
ಈ ಸಂದರ್ಶನದಲ್ಲಿ ಜಾಹ್ನವಿ ಕಪೂರ್, ದೇವಾರದ ಸಹ ನಟ ಜೂನಿಯರ್ ಎನ್‌ಟಿಆರ್ ಅವರನ್ನೂ ಶ್ಲಾಘನೆ ಮಾಡಿದರು. ಅವರೊಬ್ಬ ಅದ್ಭುತ ಡಾನ್ಸರ್, ಅವರ ವೇಗ. ಸ್ಟೆಪ್ಸ್‌ಗಳನ್ನು ಪಿಕ್ ಮಾಡುವ ವೈಖರಿಯನ್ನು ನಾನು ಬೇರೆ ಯಾವ ನಟರಲ್ಲೂ ನೋಡಿಲ್ಲ. ಒಂದು ಸ್ಟೆಪ್‌ಗಾಗಿ 10 ದಿನ ಅಭ್ಯಾಸ ಮಾಡಿದ್ರೆ, ಅವರು ಜಸ್ಟ್ ಒಂದೇ ಸೆಕೆಂಡ್‌ನಲ್ಲಿ ಕಲಿಯುತ್ತಿದ್ದರು' ಎಂದು ಹೇಳಿದ್ದಾರೆ. ಅಕ್ಟೋಬರ್ 10ರಂದು ದೇವಾರ ರಿಲೀಸ್ ಆಗಲಿದ್ದು, ಇದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಜಾಹ್ನವಿ ಅವರ ಮೊದಲ ಸಿನಿಮಾ ಎನಿಸಿದೆ.
'ಚಿಕ್ಕ ವಯಸ್ಸಲ್ಲೇ ಮಕ್ಕಳಿಗೆ ಟ್ಯಾಕ್ಸ್ ಬಗ್ಗೆ ತಿಳಿಸಿಕೊಡಿ..' ವಿಕ್ಕಿಪಿಡಿಯಾ ಕಂಟೆಂಟ್‌ಗೆ ಫ್ಯಾನ್ಸ್ ಫಿದಾ!
ಜಾನ್ವಿ ಕಪೂರ್ ಅವರ ಮುಂಬರುವ ಚಿತ್ರ ಉಲ್ಜಾ ಅನ್ನು ಸುಧಾಂಶು ಸರಿಯಾ ನಿರ್ದೇಶಿಸಿದ್ದಾರೆ. ಇದರಲ್ಲಿ ಗುಲ್ಶನ್ ದೇವಯ್ಯ, ರೋಷನ್ ಮ್ಯಾಥ್ಯೂ ಮತ್ತು ಮೇಯಾಂಗ್ ಚಾಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ.