ಇತ್ತೀಚೆಗಷ್ಟೇ ಗಂಡು ಮಗುವಿನಗೆ ಜನ್ಮ ನೀಡಿರುವ ಅಮಲಾ ಪೌಲ್ ತಮ್ಮ ಲೆವೆಲ್ ಕ್ರಾಸ್ ಚಿತ್ರದ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ, ಕಾಲೇಜ್‌ವೊಂದರಲ್ಲಿ ಸಿನಿಮಾದ ಪ್ರಮೋಷನ್ ವೇಳೆ ಆಕೆ ಧರಿಸಿದ್ದ ಮಿನಿ ಡ್ರೆಸ್ ಟೀಕೆಗೆ ಗುರಿಯಾಗಿತ್ತು.
ಬೆಂಗಳೂರು (ಜು.25): ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ಹೀರೋಯಿನ್ ಆಗಿದ್ದ ಅಮಲಾ ಪೌಲ್ ಕೆಲ ತಿಂಗಳ ಹಿಂದಷ್ಟೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಈಗ ಅವರು ಮತ್ತೆ ಸಿನಿಮಾ ಕೆಲಸ ಶುರು ಮಾಡಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮುಂಬರುವ ಚಿತ್ರ ಲೆವಲ್ ಕ್ರಾಸ್‌ನ ಪ್ರಮೋಷನ್‌ಗಾಗಿ ಕೊಚ್ಚಿ ಕಾಲೇಜಿಗೆ ಹೋಗಿದ್ದರು. ಇದೀಗ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅಮಲಾ ಪೌಲ್ ತಮ್ಮ ಸಿನಿಮಾವನ್ನು ಕಾಲೇಜಿನಲ್ಲಿ ಪ್ರಚಾರ ಮಾಡಿದ್ದು ತಪ್ಪಲ್ಲ. ಆದರೆ, ಪ್ರಚಾರಕ್ಕೆ ಬಂದ ರೀತಿಯೇ ತಪ್ಪಾಗಿದೆ. ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ತೊಡೆ ಕಾಣಿಸುವಂತೆ ಬಂದಿದ್ದ ಅಮಲಾ ಪೌಲ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾಲೇಜಿಗೆ ಬಂದು ಸಿನಿಮಾವನ್ನು ಪ್ರಮೋಷನ್ ಮಾಡುವಾಗ ಅಭ್ಯವಾಗಿ ಬಟ್ಟೆ ಧರಿಸಿಕೊಂಡು ಬರಬೇಕು. ಮೈ ಕೈ ಕಾಣುವಂತೆ ಬಟ್ಟೆ ಧರಿಸಿಕೊಂಡು ಬರಬಾರದು ಎಂದು ಅವರಿಗೆ ನೆಟ್ಟಿಗರು ಬುದ್ದಿಹೇಳಿದ್ದಾರೆ. ಇದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಅಮಲಾ ಪೌಲ್ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ವಿವಾದದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಲಾ ಪೌಲ್, 'ನನ್ನ ಡ್ರೆಸಿಂಗ್ ಸ್ಟೈಲ್‌ಅನ್ನು ನಿಮ್ಮ ಕ್ಯಾಮೆರಾ ಆಂಗಲ್‌ಗಳು ತೋರಿಸಿದ ರೀತಿಯೇ ಸರಿ ಇಲ್ಲ' ಎಂದು ಹೇಳಿದ್ದಾರೆ. ಕೊಚ್ಚಿನ ಸೇಂಟ್ ಆಲ್ಬರ್ಟ್ ಕಾಲೇಜಿನಲ್ಲಿ ತಮ್ಮ ಮಲಯಾಳಂ ಸಿನಿಮಾದ ಪ್ರಮೋಷನ್‌ಗಾಗಿ ತೆರಳಿದ್ದರು. ಈ ವೇಳೆ ಮಂಡಿಗಿಂತ ಮೇಲೆ ಇರುವ ಮಿನಿ ಡ್ರೆಸ್‌ಅನ್ನು ಅವರು ಧರಿಸಿದ್ದರು. "ಕ್ಯಾಮೆರಾಗಳು ನನ್ನ ಡ್ರೆಸ್ಸಿಂಗ್ ಶೈಲಿಯನ್ನು ಹೇಗೆ ತೋರಿಸಿದವು ಅನ್ನೋದೇ ಇಲ್ಲಿನ ಸಮಸ್ಯೆ. ಆ ಡ್ರೆಸ್ ನನಗೆ ಕಂಪರ್ಟಬಲ್ ಆಗಿತ್ತು. ಅದಕ್ಕಾಗಿ ಧರಿಸಿದ್ದೇನೆ. ಆ ಫಂಕ್ಷನ್‌ಗೆ ನನ್ನ ಡ್ರೆಸ್ ಅಸಭ್ಯವಾಗೇನೂ ಇದ್ದಿರಲಿಲ್ಲ. ನನ್ನ ಡ್ರೆಸ್‌ಗಳನ್ನು ಮೀಡಿಯಾದ ಕ್ಯಾಮೆರಾಗಳು ತೋರಿಸಿದ ರೀತಿ ಅಸಭ್ಯವಾಗಿದ್ದವು. ಅವರ ಮೇಲೆ ನನಗೆ ಯಾವುದೇ ನಿಯಂತ್ರಣ ಇಲ್ಲ' ಎಂದು ಅಮಲಾ ಪೌಲ್ ಹೇಳಿದ್ದಾರೆ.
ಆಡುಜೀವಿತಂ ಸಿನಿಮಾದ ಮೂಲಕ ದೊಡ್ಡ ಯಶಸ್ಸು ಕಂಡಿರುವ ಅಮಲಾ ಪೌಲ್, ನನ್ನ ಡ್ರೆಸ್‌ನಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದಿದ್ದಾರೆ. 'ನಾನು ಹಾಕಿದ ಡ್ರೆಸ್‌ನಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ನಾನು ಎಲ್ಲಾ ರೀತಿಯ ಡ್ರೆಸ್ ಹಾಕ್ತೇನೆ. ಸಾಂಪ್ರದಾಯಿಕ ಡ್ರೆಸ್‌ಗಳು, ವೆಸ್ಟರ್ನ್ ಡ್ರೆಸ್‌ಗಳನ್ನೂ ಹಾಕ್ತೇನೆ. ಈಗ ವಿವಾದವಾಗಿರುವ ಡ್ರೆಸ್‌ಗಳನ್ನು ಹಾಕುವ ಮೂಲಕ ವಿದ್ಯಾರ್ಥಿನಿಯರಿಗೆ ಇಂಥ ಡ್ರೆಸ್‌ಗಳ ವಿಚಾರದಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮದ್ದಾದ ಗಂಡುಮಗುವಿಗೆ ಜನ್ಮ ನೀಡಿದ ಹೆಬ್ಬುಲಿ ಬೆಡಗಿ, ಇಳಯ್ ಎಂದು ಹೆಸರಿಟ್ಟಿ ನಟಿ!
ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್ ಅವರ ಡ್ರೀಮ್ ಪ್ರಾಜೆಕ್ಟ್ ಆಡುಜೀವಿತಂ: ದಿ ಗೋಟ್ ಲೈಫ್ ನಲ್ಲಿ ನಟಿಸಿದ್ದ ಅಮಲಾ ಪೌಲ್ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದರು. ನಟಿ ತನ್ನ ಸಹ-ನಟರಾದ ಆಸಿಫ್ ಅಲಿ ಮತ್ತು ಶರಾಫುದ್ದೀನ್ ಜೊತೆಗೆ ಲೆವೆಲ್ ಕ್ರಾಸ್ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜುಲೈ 26ರಂದು ಚಿತ್ರ ತೆರೆಗೆ ಬರಲಿದೆ.
ಯೆಲ್ಲೋ ಗೌನ್ ತೊಟ್ಟು ಬೇಬಿ ಬಂಪ್ ತೋರಿಸಿದ 'ಹೆಬ್ಬುಲಿ' ನಟಿ ಅಮಲಾ ಪೌಲ್