ನನ್ನ ಹೆಣ್ಣುಮಕ್ಕಳು ಈಗಾಗಲೇ ಸೆಕ್ಸ್‌ನಲ್ಲಿ ಎಕ್ಸ್‌ಪರ್ಟ್‌: ಹೆಮ್ಮೆಯಿಂದ ಹೇಳಿದ ಸುಶ್ಮಿತಾ ಸೆನ್‌!

By Santosh Naik  |  First Published Jul 26, 2024, 7:18 PM IST

ಬಾಲಿವುಡ್‌ನ ಹಿರಿಯ ನಟಿ ಸುಶ್ಮಿತಾ ಸೆನ್‌ ಹೇಳಿರುವ ಮಾತು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದರಲ್ಲಿ ಸುಶ್ಮಿತಾ ಸೆನ್‌ ತಮ್ಮ ಹೆಣ್ಣುಮಕ್ಕಳು ಈಗಾಗಲೇ ಸೆಕ್ಸ್‌ನಲ್ಲಿ ಸಾಕಷ್ಟು ಎಕ್ಸ್‌ಪರ್ಟ್‌ ಆಗಿದ್ದಾರೆ ಎಂದು ಹೇಳಿದ್ದಾರೆ.
 


ಬಾಲಿವುಡ್‌ನ ಪ್ರಖ್ಯಾತ ನಟಿ ಸುಶ್ಮಿತಾ ಸೆನ್‌ ಇತ್ತೀಚೆಗೆ ಆರ್ಯ ವೆಬ್‌ ಸಿರೀಸ್‌ನ ಮೂರನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲಿಯೇ ರಿಯಾ ಚಕ್ರವರ್ತಿ ಅವರ ಪಾರ್ಟ್‌ 2 ಪಾಡ್‌ಕಾಸ್ಟ್‌ನಲ್ಲಿ ಅವರು ಮಾತನಾಡಿದ್ದು, ತಮ್ಮ ಲೈಂಗಿಕ ಶಿಕ್ಷಣದ ಭಾಗವಾಗಿ ತಮ್ಮ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ವಿವರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸುಶ್ಮಿತಾ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಲೈಂಗಿಕತೆಯ ಬಗ್ಗೆ ಮಾತನಾಡುವುದು ರೀತಿ ಬಹಳ ಭಿನ್ನವಾಗಿದೆ. ನಾನು ನನ್ನ ತಾಯಿಯೊಂದಿಗೆ ಸೆಕ್ಸ್‌ ಕುರಿತಾಗಿ ಮಾತನಾಡಿದ್ದ ರೀತಿಗೂ ನನ್ನ ಹೆಣ್ಣುಮಕ್ಕಳು ಈ ವಿಚಾರವಾಗಿ ನನ್ನೊಂದಿಗೆ ಮಾತನಾಡುವ ರೀತಿಗೂ ಬಹಳ ವ್ಯತ್ಯಾಸವಿದೆ. ನನ್ನ ಹೆಣ್ಣುಮಕ್ಕಳು ಬಹಳ ಮುಕ್ತವಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ನಾನು ನನ್ನ ಹೆಣ್ಣುಮಕ್ಕಳಿಗೆ ಆಕ್ಟ್‌ ಆಫ್‌ ಸೆಕ್ಸ್‌ಅನ್ನು ವಿವರಿಸುವ ಅಗತ್ತವೇ ಇಲ್ಲ. ಈಗಾಗಲೇ ಅವರು ಈ ವಿಚಾರದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಅವರೆಲ್ಲರಿಗೂ ಈ ವಿಷಯ ಗೊತ್ತಿದೆ ಎಂದು ಸುಶ್ಮಿತಾ ಸೆನ್‌ ತಿಳಿಸಿದ್ದಾರೆ.
ಇನ್ನು ಸುಶ್ಮಿತಾ ಸೆನ್‌ ಅವರ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾಗಿ ಯೂಸರ್‌ ಒಬ್ಬರುಕಾಮೆಂಟ್‌ ಮಾಡಿದ್ದಯ, 'ಬಾಲಿವುಡ್ ಮಕ್ಕಳ ಮೇಲೆ ಲೈಂಗಿಕ ಶಿಕ್ಷಣವನ್ನು ಬೃಹತ್ ಮಾರ್ಕೆಟಿಂಗ್ ಮೂಲಕ ತಳ್ಳುತ್ತಿದೆ, ಆಗಾಗ್ಗೆ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದೆ. ಅವರು ತಮ್ಮ ಪ್ರಭಾವಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಪಡೆಯುತ್ತಾರೆ." ಎಂದು ಟೀಕೆ ಮಾಡಿದ್ದಾರೆ.

ಮನಸ್ಸಿಗೆ ಬಂದಾಗ ತನ್ನ ಬಾಯ್‌ಫ್ರೆಂಡ್‌ಅನ್ನು ಬದಲಾಯಿಸುವ ಸುಶ್ಮಿತಾ ಸೆನ್‌ ತನ್ನ ಮಕ್ಕಳಿಗೆ ಸೆಕ್ಸ್‌ ಬಗ್ಗೆ ಪಾಠ ಮಾಡುತ್ತಾಳೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಹಾಗಿದ್ದರೂ, ಈ ಪ್ರತಿಕ್ರಿಯೆಗಳು ಆಕೆಯ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡವು ಮತ್ತು ಆಕೆಯ ಮೇಲೆ ಆಕ್ರಮಣ ಮಾಡಿತು.

Tap to resize

Latest Videos

ಸುಶ್ಮಿತಾ ಸೆನ್‌ ನಿಜವಾಗಿಯೂ ಅಲ್ಲಿ ಹೇಳಿದ್ದೇನೆಂದರೆ, 'ನಾನು ನನ್ನ ಹೆಣ್ಣುಮಕ್ಕಳಿಗೆ ಆಕ್ಟ್‌ ಆಫ್‌ ಸೆಕ್ಸ್‌ಅನ್ನು ವಿವರಿಸಬೇಕಾಗಿಲ್ಲ. ಈ ವಿಚಾರದಲ್ಲಿ ಅವರು ಈಗಾಗಲೇ ಪಿಎಚ್‌ಡಿ ಮಾಡಿದ್ದಾರೆ. ಎಲ್ಲರೂ ಕೂಡ ಎಕ್ಸ್‌ಪರ್ಟ್‌. ನನ್ನ ಕಿರಿಯ ಮಗಳು ಜೀವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದಾಳೆ, ಆದ್ದರಿಂದ ಆಕೆಗೆ ತಾಂತ್ರಿಕ ಪದಗಳು ತಿಳಿದಿವೆ. ನಾನು ಚರ್ಚೆಗಳನ್ನು ಸಾರ್ವತ್ರಿಕವಾಗಿರಿಸಲು ಮತ್ತು ಲೈಂಗಿಕತೆಗೆ ಸರಿಯಾದ ಸಮಯ ಮತ್ತು ಸಂದರ್ಭದ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ' ಎಂದಿದ್ದರು.

ನಾನು ಸಿಂಗಲ್​ ಎಂದ ಸುಷ್ಮಿತಾ: ನಿನ್​ ಜೊತೆ ಆರು ವರ್ಷ ಇದ್ದೋನು ನಾನೇ ಕಣೆ ಅಂದ ಈ ತರುಣ!

"ಸೆಕ್ಸ್ ಅನ್ನು ಗೌರವದಿಂದ ಸಮೀಕರಿಸಬೇಕು ಮತ್ತು ಗೆಳೆಯರ ಒತ್ತಡದಿಂದ ಮಾಡಬಾರದು ಎಂದು ನಾನು ಒತ್ತಿಹೇಳುತ್ತೇನೆ. ಅದು ನಿಮಗೆ ಒಳ್ಳೆಯ ಭಾವನೆ ಮೂಡಿಸುವುದು ಮುಖ್ಯವಾಗಿದೆ ಮತ್ತು ನಿಮಗಾಗಿ ನೀವು ಮಾಡುವ ನಿರ್ಧಾರ' ಎಂದು ಹೇಳಿದ್ದಾರೆ.

ಹುಟ್ಟಿದ ವರ್ಷವನ್ನು 2023 ಎಂದು ಬದಲಿಸಿದ ನಟಿ ಸುಷ್ಮಿತಾ ಸೇನ್​! ಇದರ ಹಿಂದಿದೆ ಕುತೂಹಲದ ಕಥೆ...

click me!