ಕೋಯಿ ಲಡ್ಕಿ ಹೈ... ಹಿಂದಿ ಹಾಡಿಗೆ ತಾತನ ಬಿಂದಾಸ್ ಡಾನ್ಸ್: ನೆಟ್ಟಿಗರೂ ಫಿದಾ

By Anusha Kb  |  First Published Jul 17, 2023, 5:23 PM IST

ಇಲ್ಲಿ ವೃದ್ಧರೊಬ್ಬರು ಶಾರೂಕ್ ಖಾನ್ ನಟನೆಯ ದಿಲ್ ತೋ ಪಾಗಲ್ ಹೈ ಸಿನಿಮಾದ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 


ಸಾಮಾಜಿಕ ಜಾಲತಾಣ ಬಂದ ನಂತರ ಹಿರಿಯರು ಕಿರಿಯರು ಎಂಬ ಬೇಧವಿಲ್ಲದೇ ಹಿರಿಜೀವಗಳು ಕೂಡ ಬಿಂದಾಸ್ ಅಗಿ ಡಾನ್ಸ್ ಮಾಡುವ ಮೂಲಕ ನೋಡುಗರಿಗೆ ಮನೋರಂಜನೆ ನೀಡುತ್ತಿದ್ದಾರೆ. ತಮ್ಮ ಕಾಲದ ಹಳೆಯ ಹಾಡುಗಳಿಗೆ ಅಜ್ಜಂದಿರು, ಅಜ್ಜಿಯರು, ಹೆಂಗಸರು ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ತಮ್ಮದೇ ರೀತಿಯ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಅದೇ ರೀತಿ ಇಲ್ಲಿ ವೃದ್ಧರೊಬ್ಬರು ಶಾರೂಕ್ ಖಾನ್ ನಟನೆಯ ದಿಲ್ ತೋ ಪಾಗಲ್ ಹೈ ಸಿನಿಮಾದ ಹಾಡಿಗೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ವೀಡಿಯೋದಲ್ಲೇನಿದೆ?

Tap to resize

Latest Videos

ಸಮಾನ ಮನಸ್ಕರು ಹಾಗೂ ಕೆಲ ಸಮಾನ ವಯಸ್ಕರ ಬಳಗವೊಂದು ಪುಟ್ಟ ಬಸ್ ನಿಲ್ದಾಣದಂತೆ ಕಾಣುವ ಸ್ಥಳದಲ್ಲಿ ಕುಳಿತುಕೊಂಡಿದ್ದು, ತಾತ ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿದ್ದರೆ, ಹಿಂದೆ ಕುಳಿತಿದ್ದವರೆಲ್ಲಾ ಅಷ್ಟೇ ಖುಷಿಯಿಂದ ಚಪ್ಪಾಳೆ ತಟ್ಟುವ ಮೂಲಕ ತಾತನಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಈ ವೀಡಿಯೋವನ್ನು Vijay Kharote ಎಂಬುವವರು ಇನಸ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, 6 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. 'ಕೋಯಿ ಲಡ್ಕಿ ಹೈ ಜಬ್ ವೋ ಹಸ್ತಿ ಹೈ ಬಾರೀಷ್ ಹೋತಿ ಹೈ ಎಂಬ ಹಾಡಿನ ಕೆಲ ಲಿರೀಕ್ಸ್‌ ಆದ 'ಆಗೇ ಹೇ ಬರ್ಸಾತ್ ಪೀಚೆ ಹೇ ತೂಪಾನ್, ಮೌಸಮ್ ಮೇರಿ ಮಾ ಕಹಾ ಚಲೇ ಹಮ್ ತುಮ್ ಎಂಬ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. 

ಏನ್‌ ಸ್ಟೆಪ್‌ ಗುರು: ಬಸ್‌ ಸ್ಟ್ಯಾಂಡ್‌ನಲ್ಲಿ ತಾತನ ಡಾನ್ಸ್‌ಗೆ ಯುವಕರೇ ಪೆಚ್ಚು

ಈ ಹಾಡು ಶಾರೂಕ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಅಭಿನಯದ ಸುಪ್ರಸಿದ್ಧ ಸಿನಿಮಾ ದಿಲ್ ತೋ ಪಾಗಲ್ ಹೈ ಸಿನಿಮಾದ ಹಾಡಾಗಿದೆ. ಈ ಹಾಡಿನಲ್ಲಿ ಡಾನ್ಸ್ ಮಾಡಿರುವ ವೃದ್ಧ ಸ್ವತಃ ವಿಜಯ್ ಕರೋಟೆ ಅವರಾಗಿದ್ದು,  ಇವರು ಡಾನ್ಸ್ ಮಾಡಿ ಬದುಕನ್ನು ಸಂಭ್ರಮಿಸುವುದಕ್ಕೆ ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ಸಾಬೀತುಪಡಿಸಿದ್ದಾರೆ.  ಕಳೆದ ವಾರ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 

ವಿಜಯ್ ಕರೋಟೆ ಅವರ ಈ ಹಾಡಿಗೆ ನೆಟ್ಟಿಗರು ಕೂಡ ಫಿದಾ ಆಗಿದ್ದು, ತಾತ ಹೀಗೆ ನಗುತ್ತೀರಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ನೋಡಿದ ನಂತರ ನನ್ನ ತಾತ ನೆನಪಾದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ದೇಹಕ್ಕೆ ವಯಸ್ಸಾದರೂ ಹೃದಯವನ್ನು ಸದಾ ಚಿರಯುವಕನಂತಿರಿಸಬೇಕು. ನೀವು ನಿಮ್ಮ ಖುಷಿಯನ್ನು ಹುಡುಕಿಕೊಂಡಿದ್ದೀರಾ ಧನ್ಯವಾದಗಳು ಅಂಕಲ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ಈ ತಾತ ಸಾಬೀತುಪಡಿಸಿದ್ದಾರೆ.

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ.... 1954ರ 10ನೇ ಕ್ಲಾಸ್ ಮಕ್ಕಳ ಪುನರ್ಮಿಲನ


 

click me!