ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾಲಿವುಡ್​ ಪ್ರತಿಭಟನೆ: ಪ್ರಿಯಾಂಕಾ ಚೋಪ್ರಾಗೆ ಬಿಗ್​ ಶಾಕ್​!

By Suvarna News  |  First Published Jul 15, 2023, 9:58 PM IST

ಹಿಂದೆಂದೂ ಕಂಡರಿಯದ ರೀತಿಯಲ್ಲಿ  ಹಾಲಿವುಡ್​ ಪ್ರತಿಭಟನೆ ನಡೆಯುತ್ತಿದ್ದು ನಟಿ ಪ್ರಿಯಾಂಕಾ ಚೋಪ್ರಾಗೆ ಬಿಗ್‌​ ಶಾಕ್​ ಎದುರಾಗಿದೆ.
 


ನಾಲ್ಕು ದಶಕಗಳ ಇತಿಹಾಸಲ್ಲಿಯೇ  ಇದೇ ಮೊದಲ ಬಾರಿಗೆ ಹಾಲಿವುಡ್ (Hollywood) ಕಲಾವಿದರು ಬೀದಿಗೆ ಇಳಿದಿದ್ದಾರೆ. 63 ವರ್ಷಗಳ ಬಳಿಕ ಇಂಥದ್ದೊಂದು ಬೃಹತ್​ ಪ್ರತಿಭಟನೆ ನಡೆಯುತ್ತಿದೆ.  ಕಳೆದ  63 ವರ್ಷಗಳಲ್ಲಿ ಬರಹಗಾರರು ಮೊದಲಬಾರಿಗೆ ಕೆಲಸ ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದು ಅವರಿಗೆ ಹಾಲಿವುಡ್ ಕಲಾವಿದರೂ ಸಾಥ್ ಕೊಟ್ಟಿದ್ದಾರೆ. ನಟರು ಹಾಗೂ ಬರಹಗಾರರು ಸ್ಟ್ರೀಮಿಂಗ್ ಸರ್ವಿಸ್​ಗಳಿಂದ ವೇತನ ಹೆಚ್ಚಳವನ್ನು ಆಗ್ರಹಿಸಿದ್ದಾರೆ. ಇದೇ ವಿಚಾರವಾಗಿ ಹಾಲಿವುಡ್​ನಲ್ಲಿ ಕಲಾವಿದರ ಅಸಾಮಾಧಾನ ಹೆಚ್ಚಾಗುತ್ತಿದ್ದು ಎಲ್ಲರೂ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ.  ಒಂದೂವರೆ ಲಕ್ಷಕ್ಕೂ ಅಧಿಕ ಟಿವಿ ಹಾಗೂ ಸಿನಿಮಾ ಕಲಾವಿದರನ್ನು ಪ್ರತಿನಿಧಿಸುವ ಸಂಘಟನೆ  ಪ್ರತಿಭಟನೆ ಆರಂಭಿಸಿದೆ. ಆರ್ಥಿಕ ಭದ್ರತೆ ಖಚಿತಪಡಿಸಿಕೊಳ್ಳಲು ಬರಹಗಾರರು ಹಾಗೂ ನಟರು ತಮ್ಮ ಸಂಭಾವನೆ ಏರಿಸಬೇಕು ಎನ್ನುವುದು ಪ್ರತಿಭಟನಾಕಾರರ ಮನವಿ.  ಕೊರೋನಾದಿಂದಾಗಿ ಸ್ಟುಡಿಯೋಗಳಲ್ಲಿ ಒತ್ತಡ ಹೆಚ್ಚಾಗಿದೆ. ಬಹಳಷ್ಟು ಜನರು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ  ತಮ್ಮ ಸಂಭಾವನೆ ಏರಿಸುವಂತೆ ಹಾಲಿವುಡ್​ ಕಲಾವಿದರು ಪ್ರತಿಭಟನೆ ಆರಂಭಿಸಿದ್ದಾರೆ.
 
ಈ ಪ್ರತಿಭಟನೆಯಿಂದ ಹಾಲಿವುಡ್​ನಲ್ಲಿ ರಿಲೀಸ್ (Release) ಆಗಲು ಸಿದ್ಧವಾಗಿರುವ ಸಿನಿಮಾಗಳಿಗೆ ಭಾರಿ ತೊಂದರೆಯಾಗುತ್ತಿದೆ.  ಹಾಲಿವುಡ್​ನಲ್ಲಿ ಇನ್ನಷ್ಟೇ ರಿಲೀಸ್ ಆಗಲಿರುವ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆಯೂ  ಪರಿಣಾಮ ಬೀರಿದೆ.    ಬರಹಗಾರರು ಹಾಗೂ ಕಲಾವಿದರ ವೇತನ ಹೆಚ್ಚಿಸಬೇಕೆಂಬ ಈ ಬೇಡಿಕೆ ಹಾಲಿವುಡ್​ ಇಂಡಸ್ಟ್ರಿಗೆ ನುಂಗಲಾರದ ತುತ್ತಾಗಿದೆ. ಇದು ಒಂದೆಡೆಯಾದರೆ, ಕಲಾವಿದರು  ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​​ನಿಂದ ಕಂಗಾಲಾಗಿದ್ದಾರೆ. ಈಗ ಎಲ್ಲಾ ಕಡೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಪ್ರಭಾವ ಹೆಚ್ಚಾಗಿದ್ದು ತಮ್ಮ ಕೆಲಸವನ್ನು ಇದರಿಂದ ಮಾಡಿಸಬಾರದು ಎನ್ನುವುದೂ ಕಲಾವಿದರ ಕೂಗು. 

ಅಮೆಜಾನ್​ಗೆ ಬಿಗ್​ಶಾಕ್​ ನೀಡಿದ ಪ್ರಿಯಾಂಕಾ ಚೋಪ್ರಾ! ಸಮಂತಾಗೂ ಶುರುವಾಯ್ತು ಸಂಕಟ

Tap to resize

Latest Videos

ಈ ಪ್ರತಿಭಟನೆಯಿಂದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾಗೆ ಬಿಕ್​ ಶಾಕ್​ ಎದುರಾಗಿದೆ. ಇದಕ್ಕೆ ಕಾರಣ ಹಾಲಿವುಡ್​ನ ಇವರ ಹೆಡ್ಸ್​ ಆಫ್​  ಸ್ಟೇಟ್ಸ್​ ​ (Head of States) ಚಿತ್ರ ಸ್ಟಾಪ್​ ಆಗಿದೆ. ಪ್ರತಿಭಟನೆ ಮುಗಿಯುವವರೆಗೆ ಅವರು ವಿಶ್ವದ ಯಾವುದೇ ಮೂಲೆಯಲ್ಲಿಯೂ ಶೂಟಿಂಗ್​ ನಡೆಸುವಂತಿಲ್ಲ.  ಹಾಲಿವುಡ್​ನಲ್ಲಿ ಭವಿಷ್ಯ ಕಂಡು ಬಾಲಿವುಡ್​ನಿಂದ ಅಲ್ಲಿಗೆ ಹಾರಿದ್ದ ಪ್ರಿಯಾಂಕಾ ಅವರಿಗೆ ಇದು ಭಾರಿ ಹೊಡೆತ ಕೊಟ್ಟಿದೆ. ಪ್ರತಿಭಟನೆ ಯಾವಾಗ ಮುಗಿಯುತ್ತದೆಯೋ ತಿಳಿದಿಲ್ಲ. ಇದರ ರಿಸಲ್ಟ್​ ಕೂಡ ತಿಳಿದಿಲ್ಲ.  ಹಾಲಿವುಡ್​ನ ಎಲ್ಲಾ ಸಿನಿಮಾ ಶೂಟಿಂಗ್​ಗಳೂ ಸ್ಟಾಪ್​ ಆಗಿರುವ ರೀತಿಯಲ್ಲಿ ಪ್ರಿಯಾಂಕಾ ಅವರ ಚಿತ್ರವೂ ಸ್ಟಾಪ್​ ಆಗಿದೆ.

ಪ್ರತಿಭಟನೆ ಬರುವ ಸೆಪ್ಟೆಂಬರ್​ ಅಂತ್ಯದವರೆಗೂ ನಡೆಯಲಿರುವ ಸೂಚನೆ ಇರುವುದಾಗಿ ತಿಳಿದು ಬಂದಿದೆ. ಅಲ್ಲಿಯವರೆಗೂ ಪ್ರತಿಭಟನೆಯ ಕಾವು ಹೆಚ್ಚಾಗಿರಲಿದ್ದು, ಶೂಟಿಂಗ್​ ನಡೆಯುವುದಿಲ್ಲ. ಈ ಪ್ರತಿಭಟನೆಯಿಂದ ಖುದ್ದು ಕಲಾವಿದರು ಹಾಗೂ ಹಾಲಿವುಡ್​ ಸಿಬ್ಬಂದಿ ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ. ಆದರೆ ತಮ್ಮ ಬೇಡಿಕೆ ಈಡೇರಿಕೆಗೆ ಇವರು ಪಟ್ಟು ಹಿಡಿದಿರುವ ಕಾರಣ,ಎಲ್ಲಾ ಶೂಟಿಂಗ್​ಗಳನ್ನು ಸ್ಥಗಿತಗೊಳಿಸಿ ಬೀದಿಗೆ ಇಳಿದಿದ್ದಾರೆ. ಇದು ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರಿಗೂ ಪ್ರಭಾವ ಬೀರುತ್ತಿದೆ. ಅಂದಹಾಗೆ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ನಲ್ಲಿ ಈಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಂದ ಬೇಸತ್ತು ಬಾಲಿವುಡ್​ ಬಗ್ಗೆ ನಿರಾಸಕ್ತಿ ತೋರಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಅವರು ಹಾಲಿವುಡ್​ ಪ್ರವೇಶಿಸಿದ್ದರು. ಅಲ್ಲಿ ಹೆಡ್ಸ್​ ಆಫ್​ ದಿ ಸ್ಟೇಟ್​ನ ಶೂಟಿಂಗ್​ನಲ್ಲಿ ಬಿಜಿಯಾಗಿದ್ದರು. ಇದರ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಪ್ರಿಯಾಂಕಾ ಚೋಪ್ರಾ ಆಯಿತು, ಈಗ ಕತ್ರಿನಾ ಸಹ ಜೀ ಲೇ ಜರಾ ಸಿನಿಮಾದಿಂದ ಹೊರಗೆ?

click me!