Khaby Lame ಜೊತೆ ಸೋನು ಸೂದ್ ರೀಲ್ಸ್: 21 ಮಿಲಿಯನ್‌ಗೂ ಹೆಚ್ಚು ಜನರಿಂದ ವೀಕ್ಷಣೆ

Published : Dec 15, 2022, 06:16 PM IST
Khaby Lame ಜೊತೆ ಸೋನು ಸೂದ್ ರೀಲ್ಸ್: 21 ಮಿಲಿಯನ್‌ಗೂ ಹೆಚ್ಚು ಜನರಿಂದ ವೀಕ್ಷಣೆ

ಸಾರಾಂಶ

ಬಾಲಿವುಡ್ ನಟ ಸೋನು ಸೂದ್ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಟಿಕ್‌ಟಾಕರ್, ಖಾಬಿ ಜೊತೆ ಸೇರಿಕೊಂಡು ತಮಾಷೆಯಾದ ವಿಡಿಯೋವೊಂದನ್ನು ಮಾಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ 21.5 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಟಿಕ್‌ಟಾಕರ್, ಖಾಬಿ ಜೊತೆ ಸೇರಿಕೊಂಡು ತಮಾಷೆಯಾದ ವಿಡಿಯೋವೊಂದನ್ನು ಮಾಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ 21.5 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಇರುವ ಸೋನು ಸೂದ್ ಅವರ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಸದಾ ಸ್ಪೂರ್ತಿಗಳಿಂದ ತುಂಬಿ ಪೋಸ್ಟ್‌ಗಳು ಇರುತ್ತವೆ. ವೈಯಕ್ತಿಕ ಬದುಕಿನಿಂದ ಆರಂಭಿಸಿ ಆಹಾರ ಪದ್ಧತಿಯವರೆಗೆ ಅವರು ಪ್ರೊಫೈಲ್‌ನಲ್ಲಿ ಹಲವು ವೈವಿಧ್ಯದ ವಿಡಿಯೋಗಳನ್ನು ನೋಡಬಹುದು. ಅಲ್ಲದೇ ಸೋನು ಸೂದ್ ಅವರು ತಮ್ಮ ನಟನೆ ಅಲ್ಲದೇ ಸಾಮಾಜಿಕ ಕಾರ್ಯಗಳಿಂದ ಸಾಕಷ್ಟು ಖ್ಯಾತಿ ಗಳಿಸಿದ್ದು, ಅವರ ಮಾನವೀಯ ಮೌಲ್ಯದ ಹಲವು ಕಾರ್ಯಗಳಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ಸೋನು ಅವರು ಗಂಭೀರ ಸ್ವರೂಪದ ವಿಡಿಯೋಗಳಲ್ಲೇ ನೋಡಿದ ಜನ ಅವರ ಈ ಹಾಸ್ಯ ಪ್ರವೃತ್ತಿಯ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ಖಾಬಿ (Khaby Lame) ಹಾಗೂ ಸೋನು ಸೋದ್ (sonu sood) ಇಬ್ಬರು ಸೋಫಾದಲ್ಲಿ ಕುಳಿತುಕೊಂಡಿದ್ದು, ಇಬ್ಬರು ಜ್ಯೂಸ್ ಕುಡಿಯಲು ಸಿದ್ಧತೆ ಮಾಡುತ್ತಿದ್ದಾರೆ. ಸೋನು ಎರಡು ಗ್ಲಾಸ್‌ಗಳನ್ನು ಇಟ್ಟು ಅವುಗಳಿಗೆ ಒಂದು ಗ್ಲಾಸ್‌ಗೆ ಹೆಚ್ಚು ಒಂದು ಗ್ಲಾಸ್‌ಗೆ ಕಡಿಮೆ ಐಸ್ ಹಾಕುತ್ತಾರೆ. ನಂತರ ಜಗ್‌ನಲ್ಲಿರುವ ಜ್ಯೂಸ್ ಅನ್ನು ತಮ್ಮ ಕಾಬಿ ಮುಂದೆ ಇರುವ ಗ್ಲಾಸ್‌ಗೆ (Glass) ಸಂಪೂರ್ಣವಾಗಿ ಹಾಕಿ ಅದು ಗ್ಲಾಸ್ ತುಂಬಿದ ನಂತರ ಉಳಿವ ಸ್ವಲ್ಪವೇ ಸ್ವಲ್ಪವನ್ನು ತಮ್ಮ ಮುಂದಿದ್ದ ಗ್ಲಾಸ್‌ಗೆ ಹಾಕುತ್ತಾರೆ. ನಂತರ ತಮ್ಮ ಬಳಿ ಇದ್ದ ಒಂದು ಸ್ಟ್ರಾವನ್ನು ಗ್ಲಾಸ್‌ಗೆ ಹಾಕುತ್ತಾರೆ. ಈ ವೇಳೆ ಖಾಬಿ ಪೂರ್ತಿ ಜ್ಯೂಸ್ ತುಂಬಿರುವ ಗ್ಲಾಸ್ ಬಿಟ್ಟು ಸ್ವಲ್ಪವೇ ಜ್ಯೂಸ್ ಇರುವ ಗ್ಲಾಸ್‌  ತೆಗೆದುಕೊಳ್ಳಲು ಮುಂದಾಗುವಂತೆ ಕಾಣುತ್ತಾರೆ ಆದರೆ ಅವರು ಕಣ್ಣು ಹಾಕಿದ್ದು, ಕಡಿಮೆ ಜ್ಯೂಸ್ ಇರುವ ಗ್ಲಾಸ್ ಮೇಲಲ್ಲ. ಅದರಲ್ಲಿರುವ ಸ್ಟ್ರಾದ ಮೇಲೆ. ಆದರೆ ಸೋನು ಭಾವಿಸುವುದು, ಕಾಬಿ ತನಗೆ ಹೆಚ್ಚು ಜ್ಯೂಸ್ ಇರುವ ಗ್ಲಾಸ್‌ ಅನ್ನು ನಾನು ಕುಡಿಯಲಿ ಎಂದು ಭಾವಿಸಿ ಆತ ಕಡಿಮೆ ಜ್ಯೂಸ್ ಇರುವ ಗ್ಲಾಸ್ ತೆಗೆದುಕೊಂಡಿದ್ದಾನೆ ಎಂದು ಭಾವಿಸುತ್ತಾರೆ. ಹೀಗಾಗಿ ಕಡಿಮೆ ಇರುವ ಜ್ಯೂಸ್  ಗ್ಲಾಸ್‌ನ್ನು ಸೋನು ತೆಗೆಯಲು ಬಿಡುವುದಿಲ್ಲ. ಆದರೆ ಖಾಬಿ ಮಾತ್ರ ನೋಡುವಷ್ಟು ನೋಡಿ ಸೋನು ಗ್ಲಾಸ್‌ನಲ್ಲಿದ್ದ ಸ್ಟ್ರಾ ಎತ್ತಿಕೊಂಡು ಏನು ಆಗದವಂತೆ ಜ್ಯೂಸ್ (Juice) ಕುಡಿಯುತ್ತಾನೆ. 

Humanitarian Award ದೇಗುಲ ನನಗಲ್ಲ, 350 ಕನ್ನಡಿಗರ ಕಣ್ಣೀರು ನನ್ನ ಗುರಿ ಬದಲಾಯಿಸಿತ್ತು: ಸೋನು ಸೂದ್

ಈ ವೇಳೆ ದಂಗಾಗುವ ಸ್ಥಿತಿ ಸೋನು ಸೂದ್‌ದಾಗಿದ್ದು, ಸೋನು ಕೈ ಕೈ ಹಿಸುಕುತ್ತಾ ಜ್ಯೂಸ್ ತಮ್ಮ ಗ್ಲಾಸ್‌ನಲ್ಲಿರುವ ಸ್ವಲ್ಪ ಜ್ಯೂಸ್ ಅನ್ನು ಕುಡಿಯುತ್ತಾರೆ. ಈ ವಿಡಿಯೋವನ್ನು 21.5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 3.7 ಮಿಲಿಯನ್‌ಗೂ ಹೆಚ್ಚು ಜನ ಮೆಚ್ಚುಗೆ ಸೂಚಿಸಿದ್ದಾರೆ. 38 ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಭಾರತೀಯರು ವಿಶಾಲ ಹೃದಯವನ್ನು ಹೊಂದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇಬ್ಬರು ಲೆಜೆಂಡ್‌ಗಳು ಒಂದೇ ಪ್ರೇಮ್‌ನಲ್ಲಿದ್ದಾರೆ ಎಂದು ಸಂತೋಷದಿಂದ ಕಾಮೆಂಟ್ ಮಾಡಿದ್ದಾರೆ. ಬಹುಶಃ ಇದು ತಮಾಷೆಯ ವಿಡಿಯೋ ಆಗಿದ್ದರೂ ಅನೇಕರಿಗೆ ಈ ರೀತಿಯ ಸೋನುಗಾದ ಅನುಭವ ಆಗಿರಬಹುದು. ಕೆಲವರು ಅವರ ಕಷ್ಟಸುಖವನ್ನಷ್ಟೇ ನೋಡುತ್ತಾರೆ. ಆದರೆ ಕೆಲವರು ಇಡೀ ಜಗತ್ತನೇ ತಮ್ಮದೆಂಬಂತೆ ಭಾವಿಸುತ್ತಾರೆ. ಅಂತವರಿಗೆ ಕಷ್ಟ ಹೆಚ್ಚು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ತಮಾಷೆಯಾಗಿರುವುದರ ಜೊತೆ ಕಾಮನ್ ಸೆನ್ಸ್ ಎಂಬುದು ನೋಟ್ ಸೋ ಕಾಮನ್ ಎಂಬುದನ್ನು ಕೂಡ ಅರ್ಥ ಮಾಡಿಸುತ್ತಿದೆ. 

ಚಂಡೀಗಢ ವಿವಿ ವೀಡಿಯೋ ಲೀಕ್ ಪ್ರಕರಣ: ವಿಡಿಯೋ ಶೇರ್ ಮಾಡ್ಬೇಡಿ, ಜವಾಬ್ದಾರರಾಗಿರಿ: ಜನತೆಗೆ ಸೋನು ಸೂದ್ ಮನವಿ


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?