Latest Videos

ಶಿವರಾಜ್‌ಕುಮಾರ್‌ ಕಾಲೇಜಿಗೆ ಹೋಗ್ವಾಗ ದಿನಾಲೂ ಎರಡೇ ರೂ. ಕೊಡ್ತಿದ್ರಂತೆ ಡಾ ರಾಜ್‌ಕುಮಾರ್‌!

By Shriram BhatFirst Published Jun 17, 2024, 8:47 PM IST
Highlights

ಆಗಿನ್ನೂ ಕಾಲೇಜಿಗೆ ಹೋಗುತ್ತಿದ್ದ ಶಿವರಾಜ್‌ಕುಮಾರ್ ಅವರಿಗೆ ಅಪ್ಪಾಜಿ ಡಾ ರಾಜ್‌ಕುಮಾರ್ ಅವರು ಎಂದೂ ಕಾರು ಕೊಡುತ್ತಿರಲಿಲ್ಲ ಎನ್ನಲಾಗಿದೆ. ಒಬ್ಬರಿಗೆ ಹೋಗೋದಕ್ಕೆ ಕಾರು ಯಾಕೆ ಬೇಕು ಎನ್ನುತ್ತಿದ್ದ ಅಣ್ಣಾವ್ರು, ರಜಾ ದಿನಗಳಲ್ಲಿ ಮನೆಯವರೆಲ್ಲರೂ..

ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್‌ಕುಮಾರ್ ಅವರು ಸರಳತೆಗೆ ಸಾಕ್ಷಿ ಎಂಬಂತಿದ್ದರು. ಅವರ ಸಜ್ಜನಿಕೆ, ಸರಳತೆ ಹಾಗೂ ಮಾನವೀಯತೆಯ ವ್ತಕ್ತಿತ್ವಕ್ಕೆ ಮಾರು ಹೋಗದವರಿಲ್ಲ. ಡಾ ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ದಂಪತಿಗಳಿಗೆ ಮೂರು ಗಂಡು, ಒಂದು ಹೆಣ್ಣು ಸೇರಿ ನಾಲ್ಕು ಮಕ್ಕಳು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಎಲ್ಲ ಮಕ್ಕಳೂ ದೊಡ್ಡವರಾದ ಹೊತ್ತಿಗೆ ಡಾ ರಾಜ್‌ಕುಮಾರ್ ಅವರ ಮನೆಯಲ್ಲಿ ಬಡತನವೇನೂ ಇರಲಿಲ್ಲ. 

ಹಿರಿಯ ಮಗ ಶಿವಣ್ಣ ಕಾಲೇಜು ಓದುವ ಹೊತ್ತಿಗೆ ಡಾ ರಾಜ್‌ ಮನೆಯಲ್ಲಿ ಕಾರು ಇತ್ತು ಎನ್ನಲಾಗಿದೆ. ಆದರೆ, ಶಿವರಾಜ್‌ಕುಮಾರ್ ಕಾಲೇಜಿಗೆ ಬಸ್ಸಿನಲ್ಲೇ ಹೋಗುತ್ತಿದ್ದರಂತೆ. ಅದಕ್ಕೆ ಶಿವರಾಜ್‌ಕುಮಾರ್‌ ಅವರಿಗೆ ಅಣ್ಣಾವ್ರು ಕೇವಲ ಎರಡು ರೂಪಾಯಿ ಕೊಡುತ್ತಿದ್ದರಂತೆ. ಆವಾಗ 2 ರೂಪಾಯಿ ಕೆಂಪು ನೋಟು ಚಾಲ್ತಿಯಲ್ಲಿತ್ತು. ಅದನ್ನು ದಿನಾಲು ಕೊಟ್ಟು ಕಳಿಸುತ್ತಿದ್ದರಂತೆ. ಅದು ಶಿವಣ್ಣ ಅವರಿಗೆ ಬಸ್ಸಿಗೆ ಮಾತ್ರ ಸಾಕಾಗುತ್ತಿತ್ತು, ಅದರಿಂದ ಬೇರೆ ಏನಕ್ಕೂ ಮನೆಯಲ್ಲಿ ಹೇಳದೇ ಖರ್ಚು ಮಾಡಲು ಸಾಧ್ಯವೇ ಇರಲಿಲ್ಲ. 

ತಾಳ್ಮೆ ಕೆಲವೊಮ್ಮೆ ಶಕ್ತಿ, ಇನ್ನೊಂದು ಪೋಸ್ಟ್; ಶೀತಲಯುದ್ಧ ಸಾರಿದ್ರಾ ಉಮಾಪತಿ ಗೌಡ..?

ಮಕ್ಕಳಿಗೆ ಅನಾವಶ್ಯಕ ದುಡ್ಡು ಕೊಟ್ಟರೆ ಅವಶ್ಯಕತೆ ಇಲ್ಲದಿದ್ದರೂ ಖರ್ಚು ಮಾಡುತ್ತಾರೆ. ಮಕ್ಕಳಿಗೆ ಮಕ್ಕಳ ಬುದ್ದಿಯೇ ಇರುವುದು ಸಹಜ. ನಾವು ಹಿರಿಯರು ಅದನ್ನೆಲ್ಲ ಯೋಚನೆ ಮಾಡಿ ಹೆಜ್ಜೆ ಇಡಬೇಕಾಗುತ್ತದೆ. ಮಕ್ಕಳ ಬುದ್ದಿಯೇನಿರುತ್ತದೆ ಎಂಬುದು ದೊಡ್ಡವರಾದ ನಮಗೇ ಗೊತ್ತಿಲ್ಲ ಅಂದ್ರೆ ಹೇಗೆ? ಹೀಗಾಗಿ ಅವರಿಗೆ ಅಗತ್ಯ ಇರುವುದಕ್ಕೆ ತೊಂದರೆ ಮಾಡುವುದಿಲ್ಲ, ಆದರೆ ಅನಗತ್ಯ ಖರೀದಿಗೆ ನಾವು ಅವಕಾಶ ಕೊಡುವುದಿಲ್ಲ. ನನ್ನ ಮಕ್ಕಳಿಗೆ ಈಗಿನಿಂದಲೇ ಜೀವನದಲ್ಲಿ ಅಗತ್ಯ ಯಾವುದು, ಅನಗತ್ಯ ಯಾವುದು ಎಂಬುದು ಅರ್ಥವಾಗಬೇಕು' ಎಂದಿದ್ದರಂತೆ ಡಾ ರಾಜ್‌ಕುಮಾರ್. 

ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ; ಉಮಾಪತಿ ಗೌಡ ಸ್ಟೇಟಸ್ ಏನ್ ಹೇಳ್ತಿದೆ..?

ಆಗಿನ್ನೂ ಕಾಲೇಜಿಗೆ ಹೋಗುತ್ತಿದ್ದ ಶಿವರಾಜ್‌ಕುಮಾರ್ ಅವರಿಗೆ ಅಪ್ಪಾಜಿ ಡಾ ರಾಜ್‌ಕುಮಾರ್ ಅವರು ಎಂದೂ ಕಾರು ಕೊಡುತ್ತಿರಲಿಲ್ಲ ಎನ್ನಲಾಗಿದೆ. ಒಬ್ಬರಿಗೆ ಹೋಗೋದಕ್ಕೆ ಕಾರು ಯಾಕೆ ಬೇಕು ಎನ್ನುತ್ತಿದ್ದ ಅಣ್ಣಾವ್ರು, ರಜಾ ದಿನಗಳಲ್ಲಿ ಮನೆಯವರೆಲ್ಲರೂ ಹೊರಗೆ ಹೋಗುವ ವೇಳೆ ಎಲ್ಲರನ್ನೂ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಆದರೆ, ಮಕ್ಕಳು ಒಬ್ಬೊಬ್ಬರೇ ಕಾಲೇಜಿಗೆ ಹೋಗುವಾಗ ಬಸ್‌ನಲ್ಲೇ ಓಡಾಡಲಿ ಎನ್ನುತ್ತಿದ್ದರಂತೆ. ಅಂದು ತಮ್ಮ ಅಪ್ಪಾಜಿಯಿಂದ ಕಲಿತ ಪಾಠವನ್ನು ಇಂದಿಗೂ ದೊಡ್ಮನೆ ಫ್ಯಾಮಿಲಿಯ ಯಾರೊಬ್ಬರ ಮರೆತಿಲ್ಲ ಎನ್ನಲಾಗುತ್ತದೆ. 

ನನ್ನ ಹೆಸರಿಗೆ ತಾತನ ಹೆಸರು ಸೇರಿಸಿಕೊಂಡು ಈ ಲೆಗ್ಗಸಿಯನ್ನು ಗೌರವಿಸುತ್ತಿದ್ದೇನೆ: ಧೀರೆನ್ ಆರ್‌ ರಾಜ್‌ಕುಮಾರ್

ಇಂದಿಗೂ ಕೂಡ, ಮನೆಯಲ್ಲಿ ಬೇಕಾದಷ್ಟಿದ್ದರೂ, ಎಲ್ಲರೂ ಚೆನ್ನಾಗಿಯೇ ಸಂಪಾದನೆ ಮಾಡುತ್ತಿದ್ದರೂ ಡಾ ರಾಜ್‌ಕುಮಾರ್ ಕುಟುಂಬದಲ್ಲಿ ಅನಾವಶ್ಯಕ ಶೋಕಿ ಕಂಡುಬರುವುದಿಲ್ಲ. ಸರಳತೆ, ವಿನಯವಂತಿಕೆ ಸಜ್ಜನಿಕೆ ಹಾಗು ಮಾನವೀಯತೆ ಇವೆಲ್ಲವೂ ನನಗೆ ನನ್ನ ಅಪ್ಪನಿಂದ ಬಂತು. ನಾನು ಅದನ್ನು ನನ್ನ ಮಕ್ಕಳಿಗೆ ಕೊಡಬೇಕು. ಇದು ಹೀಗೇ ಮುಂದಿನ ತಲೆಮಾರುಗಳಲ್ಲೂ ಮುಂದುವರೆದುಕೊಂಡು ಹೋಗಲಿ ಎನ್ನುತ್ತಿದ್ದರಂತೆ ಡಾ ರಾಜ್‌ಕುಮಾರ್. 

ಹ್ಯಾಪಿ ಫಾದರ್ಸ್ ಡೇ ಅಪ್ಪಾ, ಯೂ ಆರ್ ಫಾರ್ ಎವರ್ ಮೈ ಹೀರೋ; ವಿನೀಶ್ ತೂಗುದೀಪ

click me!