Latest Videos

ಒಬ್ಬ ನನ್‌ ಹಾರ್ಟ್‌ ಚೂರ್ ಮಾಡಿದ, ಇನ್ನೊಬ್ಬ ಬಂದು ಎಲ್ಲಾ ಸರಿ ಮಾಡಿದ: ದೀಪಿಕಾ ಪಡುಕೋಣೆ ಉವಾಚ!

By Shriram BhatFirst Published Jun 17, 2024, 1:47 PM IST
Highlights

ನಾನು ಅಂದುಕೊಂಡಂತೆ ನನ್ನ ಲವರ್ ಇಲ್ಲ, ನನ್ನ ಆಯ್ಕೆಯ ಪ್ರೀತಿ ಸರಿಯಾದುದಲ್ಲ, ನನಗೆ ಮೋಸ ಆಗುತ್ತಿದೆ ಎಂಬುದನ್ನು ಅರಿತೆ. ನಾನು ಈ ಲವ್‌ನಿಂದ ಹೊರಬರಬೇಕು ಎಂಬ ಯೋಚನೆ, ನಿರ್ಧಾರವೇ ನನ್ನನ್ನು ಖಿನ್ನತೆಗೆ ದೂಡಿ ಬಿಟ್ಟಿತು.

'ಆತ ನನಗೆ ಮೋಸ ಮಾಡಿದ ಮತ್ತು ನನ್ನ ಹೃದಯವನ್ನು ಸಂಪೂರ್ಣವಾಗಿ ಹಾಳು ಮಾಡಿ ಒಡೆದ' ಎಂದಿದ್ದಾರೆ (Deepika Padukone) ನಟಿ ದೀಪಿಕಾ ಪಡುಕೋಣೆ. ತಮ್ಮ ಹಳೆಯ ಲವ್ ಸ್ಟೋರಿಯನ್ನು ನಟಿ ದೀಪಿಕಾ ಪಡುಕೋಣೆ ಹಂಚಿಕೊಂಡಿರುವ ವೀಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ನಟಿ ದೀಪಿಕಾ ಪಡುಕೋಣೆ ತಮ್ಮ ಹಳೆಯ ಲವರ್, ಲವ್ ಹಾಗೂ ಬ್ರೇಕಪ್‌ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ದರೆ ನಟಿ ದೀಪಿಕಾ ಪಡುಕೋಣೆ ಏನು ಹೇಳಿದ್ದಾರೆ? 

ನಾನು ನನ್ನ ಸ್ವಂತ ಕೆರಿಯರ್ ಬಗ್ಗೆ ಆಗ ಯೋಚಿಸಿರಲೂ ಇಲ್ಲ. ಅಷ್ಟರಮಟ್ಟಿಗೆ ಆತನನ್ನು ನಂಬಿ ಪ್ರೀತಿಸಿದ್ದೆ. ನಾನು ಆತನಿಗಾಗಿ ನನ್ನ ನಟನೆಯನ್ನು, ನನ್ನ ವೃತ್ತಿಯನ್ನೂ ತೊರೆಯಲು ಯೋಚಿಸಿದ್ದೆ. ಅಷ್ಟರಮಟ್ಟಿಗೆ ಆತನ ಪ್ರೀತಿಗೆ ಮನಸೋತಿದ್ದೆ, ಪ್ರಾಮಾಣಿಕ ಪ್ರೀತಿಯನ್ನು ನಾನು ಮಾಡುತ್ತಿದ್ದೆ. ಆದರೆ ಕಾಲ ಕಳೆದಂತೆ, ನನಗೆ ಸತ್ಯ ಅರ್ಥವಾಗುತ್ತ ಹೋಯಿತು. ಆತ ನನ್ನ ಯಶಸ್ಸು ಹಾಗೂ ಪ್ರತಿಭೆಯನ್ನು ಗೌರವಿಸುವುದಿಲ್ಲ. ಆತನಿಗೆ ನನ್ನ ಪ್ರೀತಿಯ ಬಗ್ಗೆ ಅಥವಾ ನನ್ನ ವ್ಯಕ್ತಿತ್ವದ ಬಗ್ಗೆ ಗೌರವಾದರಗಳಿಲ್ಲ ಎಂಬುದು ತಿಳಿಯಿತು. 

ನನ್ನ ಹೆಸರಿಗೆ ತಾತನ ಹೆಸರು ಸೇರಿಸಿಕೊಂಡು ಈ ಲೆಗ್ಗಸಿಯನ್ನು ಗೌರವಿಸುತ್ತಿದ್ದೇನೆ: ಧೀರೆನ್ ಆರ್‌ ರಾಜ್‌ಕುಮಾರ್

ನಾನು ಅಂದುಕೊಂಡಂತೆ ನನ್ನ ಲವರ್ ಇಲ್ಲ, ನನ್ನ ಆಯ್ಕೆಯ ಪ್ರೀತಿ ಸರಿಯಾದುದಲ್ಲ, ನನಗೆ ಮೋಸ ಆಗುತ್ತಿದೆ ಎಂಬುದನ್ನು ಅರಿತೆ. ನಾನು ಈ ಲವ್‌ನಿಂದ ಹೊರಬರಬೇಕು ಎಂಬ ಯೋಚನೆ, ನಿರ್ಧಾರವೇ ನನ್ನನ್ನು ಖಿನ್ನತೆಗೆ ದೂಡಿ ಬಿಟ್ಟಿತು. ನಾನು ಏಕಾಂಗಿ, ನನಗೆ ಜಗತ್ತಿನಲ್ಲಿ ಯಾರೂ ಇಲ್ಲ ಎಂಬ ಭಾವನೆಯಿಂದ ನಾನು ಸಂಪೂರ್ಣವಾಗಿ ಬೆಂದುಹೋದೆ. ಕತ್ತಲೆಯಲ್ಲಿ, ಮೂಲೆಯಲ್ಲಿ ಕುಳಿತುಬಿಡುತ್ತಿದ್ದೆ. ಯಾವುದರಲ್ಲೂ ಆಸಕ್ತಿ ಇರಲಿಲ್ಲ, ತಿನ್ನುವುದರಲ್ಲಿ ಕೂಡ. ನಾನು ನನ್ನನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದೆ. 

ಹ್ಯಾಪಿ ಫಾದರ್ಸ್ ಡೇ ಅಪ್ಪಾ, ಯೂ ಆರ್ ಫಾರ್ ಎವರ್ ಮೈ ಹೀರೋ; ವಿನೀಶ್ ತೂಗುದೀಪ

ಆದರೆ, ಕಾಲ ಎಲ್ಲವನ್ನೂ ಸರಿ ಮಾಡಿತು. ನನ್ನ ಜೀವನದಲ್ಲಿ ಮತ್ತೊಬ್ಬ ಬಂದ. ಆತ ನನ್ನ ವ್ಯಕ್ತಿತ್ವವನ್ನು ಗೌರವಿಸುತ್ತಿದ್ದ, ನನ್ನ ಕೆರಿಯರ್ ಹಾಗು ಸಕ್ಸಸ್‌ ಮೆಚ್ಚಿಕೊಳ್ಳುತ್ತಿದ್ದ. ನನಗೆ ಆತನ ಪ್ರೀತಿ ಮರುಜನ್ಮ ನೀಡಿತು. ಆತ ನನ್ನ ಜತೆ ನಟಿಸಿದ್ದ, ಒಟ್ಟಿಗೇ ಕಾಲ ಕಳೆದಿದ್ದ. ಆತ ನನ್ನ ಯಶಸ್ಸನ್ನು ಅದೆಷ್ಟು ಗೌರವಿಸುತ್ತಿದ್ದ ಎಂದರೆ, ನಾನು ಆತನ ಪ್ರೀತಿಯನ್ನು ಯಾವುದೇ ರೀತಿಯಲ್ಲಿ ಸಂದೇಹಿಸಲು ಸಾಧ್ಯವೇ ಆಗದಷ್ಟು. ಒಮ್ಮೆ ಪೆಟ್ಟು ತಿಂದಿದ್ದ ನಾನು ಅದೆಷ್ಟೇ ಯೋಚಿಸಿದರೂ ಆತನ ಪ್ರೀತಿಗೆ ನಾನು ಶರಣಾಗದಿರಲು ಸಾಧ್ಯವೇ ಇರಲಿಲ್ಲ. 

ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

ಹೀಗೆ ನನ್ನ ಬಾಳಲ್ಲಿ ಎರಡನೇ ಬಾರಿಗೆ ಬೆಳಕಾಗಿ ಬಂದವನೇ ರಣವೀರ್ ಸಿಂಗ್ (Ranveer Singh) ಎಂದಿದ್ದಾರೆ. ನನ್ನ ಜೀವನದಲ್ಲಿ ಮೊದಲ ಬಾರಿ ಬಂದು, ಮೋಸದ ಪ್ರೀತಿಯ ಮೂಲಕ ನನ್ನ ಹೃದಯ ಒಡೆದು, ಬ್ರೇಕಪ್‌ ಆಗಲು ಕಾರಣನಾದವನ ಹೆಸರು ಈಗ ಬೇಡ ಬಿಡಿ. ಏಕೆಂದರೆ, ಈಗ ಆತನಿಗೂ ಮದುವೆಯಾಗಿದೆ, ನನ್ನಂತೆ ಯಶಸ್ವೀ ನಟಿ ಆತನ ಪತ್ನಿ ಆಗಿದ್ದಾಳೆ, ಅವರಿಗೆ ನನ್ನಂತೆ ಅವರದೇ ಆದ ಸಂಸಾರವಿದೆ. ಆದರೆ, ಆತನ ಮೋಸದ ಪ್ರೀತಿ, ಹೃದಯ ಒಡೆದ ರೀತಿ ಇದ್ಯಾವುದನ್ನೂ ನಾನು ಯಾವತ್ತೂ ಮರೆಯಲಾರೆ' ಎಂದಿದ್ದಾರೆ ನಟಿ ದೀಪಿಕಾ ಪಡುಕೋಣೆ.

ಹತ್ತು ಎಕರೆ ಬೇಕಾ, ಜನಕ್ಕೆ ಉಪಯೋಗ ಆಗುತ್ತೆ ಅಂದ್ರೆ ನಾನೇ ಕೊಡ್ತೀನಿ; ರಾಕಿಂಗ್ ಸ್ಟಾರ್ ಯಶ್!

click me!