ಡಿಕೆ ಶಿವಕುಮಾರ್‌ ಮಾತು ಬೆಂಬಲಿಸಿದ್ದ ರಮ್ಯಾ, ಸೋಶಿಯಲ್‌ ಮೀಡಿಯಾದಲ್ಲಿ ಯು ಟರ್ನ್‌!

Published : Mar 03, 2025, 09:02 PM ISTUpdated : Mar 03, 2025, 09:05 PM IST
ಡಿಕೆ ಶಿವಕುಮಾರ್‌ ಮಾತು ಬೆಂಬಲಿಸಿದ್ದ ರಮ್ಯಾ, ಸೋಶಿಯಲ್‌ ಮೀಡಿಯಾದಲ್ಲಿ ಯು ಟರ್ನ್‌!

ಸಾರಾಂಶ

ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ರಮ್ಯಾ ಮೊದಲು ಬೆಂಬಲಿಸಿ ನಂತರ ಯು ಟರ್ನ್ ಹೊಡೆದಿದ್ದಾರೆ. ಕಲಾವಿದರು ರಾಜಕಾರಣಿಗಳ ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.


ಬೆಂಗಳೂರು (ಮಾ.3): ಚಿತ್ರರಂಗದ ಕಲಾವಿದರ ನಟ್ಟು ಬೋಲ್ಟು ಟೈಟ್‌ ಮಾಡ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿರುವ ಮಾತು ಸ್ಯಾಂಡಲ್‌ವುಡ್‌ ಹಾಗೂ ರಾಜಕಾರಣಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್‌ ಮಾತುಗಳನ್ನು ಬೆಂಬಲಿಸಿ ಮಾತನಾಡಿದ್ದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಸೋಶಿಯಲ್‌ ಮೀಡಿಯಾದಲ್ಲಿ ಯು ಟರ್ನ್‌ ಹೊಡೆದಿದ್ದಾರೆ. ಡಿ ಕೆ ಶಿವಕುಮಾರ್ ಮಾತು ಸಂಪೂರ್ಣ ತಪ್ಪಲ್ಲ ಆದರೆ, ಎಲ್ಲದ್ದಕ್ಕೂ ಕಲಾವಿದರನ್ನು ದೂಷಿಸುವುದು ತಪ್ಪು. ರಾಜಕಾರಣಿಗಳಿಗೆ ಕಲಾವಿದರು ಸಾಫ್ಟ್ ಟಾರ್ಗೆಟ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ  ರಮ್ಯಾ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರೆ.

ರಮ್ಯಾ ಬರೆದುಕೊಂಡಿರುವ ಪೋಸ್ಟ್‌..

ಡಿಕೆ ಶಿವಕುಮಾರ್‌ ಅವರು ಆಡಿದ್ದ ಮಾತು ಸಂಪೂರ್ಣವಾಗಿ ತಪ್ಪಲ್ಲ.
ನಟರು ಸಾರ್ವಜನಿಕರ ಮೇಲೆ ದೊಡ್ಡ ಮಟ್ಟದ ಪ್ರಭಾವವನ್ನು ಬೀರುತ್ತಾರೆ ಮತ್ತು (ವೈಯಕ್ತಿಕ ಅಭಿಪ್ರಾಯ). ಸಂವಾದವು ಪ್ರಜಾಪ್ರಭುತ್ವದಲ್ಲಿ ಅವಶ್ಯಕ.ಡಾ. ರಾಜ್‌ಕುಮಾರ್ ಅವರು ಗೋಕುಲ್ ಆಂದೋಲನಕ್ಕೆ ಬೆಂಬಲ ನೀಡಿದಂತಹ ಅದ್ಭುತ ಉದಾಹರಣೆಯಾಗಿದೆ.
ಕಲಾವಿದರು ಯಾವುದೇ ಕಾರ್ಯಕ್ಕೆ ತಮ್ಮ ಹೆಸರನ್ನು ನೀಡಬೇಕೋ ಇಲ್ಲವೋ ಎಂಬುದು ಅವರ ಆದ್ಯತೆ. ಚಿತ್ರರಂಗದಲ್ಲಿರುವ ನನ್ನ ಸ್ನೇಹಿತರಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ಖಾಸಗಿಯಾಗಿ ಹಂಚಿಕೊಳ್ಳುತ್ತಾರೆ, ಆದರೆ ಸಾರ್ವಜನಿಕವಾಗಿ ಹೇಳುವುದನ್ನು ದೂರ ಇಡುತ್ತಾರೆ, ಏಕೆಂದರೆ ಅವರ ಕೆಲಸ ನಿರಂತರವಾಗಿ ವಿಮರ್ಶೆಗೆ ಒಳಗಾಗಬಹುದು ಅಥವಾ ಅವರ ಪ್ರಚಾರಗಳು ಪ್ರಭಾವಿತವಾಗಬಹುದು.
ನಟಿ ಮಹಿಳೆಯರು ರಾಜಕೀಯ ನಾಯಕರಿಗೆ ಸುಲಭ ಗುರಿಯಾಗುತ್ತಾರೆ. ವಿಶೇಷವಾಗಿ, ನಾಯಕರು ಅವರ ವಿರುದ್ಧ ಬೆದರಿಕೆ ಒಡ್ಡುವುದು ಮತ್ತು ದೌರ್ಜನ್ಯ ನಡೆಸುವುದನ್ನು ತೊರೆದು, ಈ ಧೋರಣೆಯನ್ನು ಬಿಡಬೇಕು. ಇದೇ ಕಾರಣಕ್ಕೆ ಅವರಂತವರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ.

'ಸಾಹೇಬ್ರು ಹೇಳಿದ್ರಲ್ಲಿ ತಪ್ಪೇನಿಲ್ಲ' ಕಲಾವಿದರಿಗೆ ಡಿಕೆ ಶಿವಕುಮಾರ ವಾರ್ನಿಂಗ್ ಸಮರ್ಥಿಸಿಕೊಂಡ ನಟಿ ರಮ್ಯಾ!

ಕಲಾವಿದರ ಕುರಿತಾಗಿ ಡಿಕೆ ಶಿವಕುಮಾರ್‌ ಆಡಿದ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ನೇರವಾಗಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಚಿತ್ರರಂಗದ ಕೆಲವು ನಟ-ನಟಿಯರು ಕೂಡ ಪರ-ವಿರೋಧ ಮಾತು ಆಡಿದ್ದಾರೆ. 

 

ಮದ್ವೆ ಆದ್ಮೇಲೆ ಗಂಡನ ಬಗ್ಗೆ ಕೆಲವೊಂದು ವಿಚಾರ ಗೊತ್ತಾಗಿ ಅಮ್ಮ ಬಿಟ್ಟು ಬಂದರು: ಫ್ಯಾಮಿಲಿ ವಿಚಾರ ಬಿಚ್ಚಿಟ್ಟ ಅಮೃತಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ