ಮಹಾಕುಂಭ ಮೇಳದಲ್ಲಿ ತಮನ್ನಾ ಜೊತೆ ಪುಣ್ಯಸ್ನಾನ ಮಾಡಿದ ವಸಿಷ್ಟ ಸಿಂಹ!

Published : Feb 22, 2025, 07:23 PM ISTUpdated : Feb 22, 2025, 09:55 PM IST
ಮಹಾಕುಂಭ ಮೇಳದಲ್ಲಿ ತಮನ್ನಾ ಜೊತೆ ಪುಣ್ಯಸ್ನಾನ ಮಾಡಿದ ವಸಿಷ್ಟ ಸಿಂಹ!

ಸಾರಾಂಶ

ನಟಿ ತಮನ್ನಾ ಭಾಟಿಯಾ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಕನ್ನಡದ ನಟ ವಸಿಷ್ಟ ಸಿಂಹ ಅವರೊಂದಿಗೆ ಪುಣ್ಯಸ್ನಾನ ಮಾಡಿದರು. ಬಳಿಕ, ಅವರು ಒಟ್ಟಾಗಿ ನಟಿಸಿರುವ 'ಒಡೇಲಾ 2' ಸಿನಿಮಾದ ಟೀಸರ್‌ಅನ್ನು ಅನಾವರಣಗೊಳಿಸಿದರು.

ಪ್ರಯಾಗ್‌ರಾಜ್‌ (ಫೆ.22): ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈಗ ಈ ಲಿಸ್ಟ್‌ಗೆ ಬಾಲಿವುಡ್‌ನ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೇರಿದ್ದಾರೆ. ಮಹಾ ಕುಂಭಮೇಳಕ್ಕೆ ಆಗಮಿಸಿದ ತಮನ್ನಾ ಹಾಗೂ ಕನ್ನಡದ ನಟ ವಸಿಷ್ಟ ಸಿಂಹ ಒಟ್ಟಾಗಿ ಪುಣ್ಯ ಸ್ನಾನ ಮಾಡಿದರು. ತಮನ್ನಾ ಹಾಗೂ ವಸಿಷ್ಟ ಸಿಂಹ ಒಟ್ಟಾಗಿ ಒಡೇಲಾ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಚಿತ್ರದ ಟೀಸರ್‌ಅನ್ನು ಪ್ರಯಾಗ್‌ರಾಜ್‌ನಲ್ಲಿಯೇ ಅನಾವರಣ ಮಾಡಿದ್ದಾರೆ. ಇವರೊಂದಿಗೆ ಕನ್ನಡದ ಹೆಸರಾಂತ ಮ್ಯೂಸಿಕ್‌ ಡೈರೆಕ್ಟರ್‌ ಅಜನೀಶ್‌ ಲೋಕನಾಥ್‌ ಕೂಡ ತಮ್ಮ ಕುಟುಂಬದೊಂದಿಗೆ ಪ್ರಯಾಜ್‌ರಾಜ್‌ಗೆ ಭೇಟಿ ನೀಡಿದ್ದರು. ಎಲ್ಲರೂ ಜೊತೆಯಲ್ಲಿರುವ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ತಮ್ಮ ಡಾನ್ಸ್‌ ಹಾಗೂ ನಟನೆಯ ಕಾರಣಕ್ಕೆ ಪ್ರಸಿದ್ಧರಾಗಿರುವ 35 ವರ್ಷದ ತಮನ್ನಾ ಭಾಟಿಯಾ ಈಗ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಶಿವಭಕ್ತೆಯಾಗಿ ಕಾಣಿಸಿಕೊಳ್ಳುವ ಸಿದ್ದತೆಯಲ್ಲಿದ್ದಾರೆ. ಒಡೇಲಾ-2 ಸಿನಿಮಾದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆ ಇದ್ದು, ಇದರಲ್ಲಿ ಶಿವನ ಭಕ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಿರ್ಮಾಕರು ಮಹಾಕುಂಭ ಮೇಳದಲ್ಲಿಯೇ ಇದರ ಭರ್ಜರಿ ಟೀಸರ್‌ಅನ್ನು ಕುಡ ಬಿಡುಗಡೆ ಮಾಡಿದ್ದಾರೆ.

ತಮನ್ನಾ ಭಾಟಿಯಾ ಅವರ ಮುಂಬರುವ ಚಿತ್ರ ಒಡೇಲಾ 2 ರ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯಿತು. ಏಕೆಂದರೆ, ಈ ಚಿತ್ರದಲ್ಲಿ, ತಮನ್ನಾ ಭಾಟಿಯಾ ನಾಗ ಸಾಧುವಿನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ, ಈ ಚಿತ್ರದ ಟೀಸರ್ ಅನ್ನು ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ನಾಗ ಸಾಧುಗಳ ನಡುವೆ ಬಿಡುಗಡೆ ಮಾಡಲಾಗಿದೆ. ಒಡೆಲಾ 2 ರ ಟೀಸರ್ ಬಿಡುಗಡೆಯಾದ ತಕ್ಷಣವೇ ಜನರು ಇದನ್ನು ಅಪಾರವಾಇ ಮೆಚ್ಚಿಕೊಂಡಿದ್ದಾರೆ.

ಭಯಬೀಳಿಸುವಂತೆ ಒಡೇಲಾ-2 ಟೀಸರ್: ಒಡೇಲಾ-2 ಸಿನಿಮಾದ ಟೀಸರ್ ಭಯಗೊಳಿಸುವಂತೆ ಇದ್ದು, ಅದರಲ್ಲಿ ಅನೇಕ ಅಲೌಕಿಕ ವಿಷಯಗಳನ್ನು ಸಹ ತೋರಿಸಲಾಗಿದೆ. ಶಿಕ್ಷಕಿ ಪಾತ್ರದಲ್ಲಿ ತಮನ್ನಾ ಅವರ ನೋಟ ಮತ್ತು ಪಾತ್ರವು ಸಾಕಷ್ಟು ಹೊಸದು ಮತ್ತು ಶಕ್ತಿಶಾಲಿಯಾಗಿದೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟವನ್ನು ಟೀಸರ್‌ನಲ್ಲಿ ಅದ್ಭುತವಾಗಿ ತೋರಿಸಲಾಗಿದೆ. 'ಒಡೇಲಾ 2' ನಲ್ಲಿ ತಮನ್ನಾ ಒಳ್ಳೆಯತನದ ಸಂಕೇತವಾಗಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರ ಈ ಶಕ್ತಿಶಾಲಿ ಅವತಾರವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

19ರ ಹರೆಯದ ಈ ನಟಿ ಮುಂದೆ ತುಂಬಾ ಡಲ್ ಆದ್ರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಯಾರೀ ಹೊಸ ಚೆಲುವೆ?

ಅಶೋಕ್ ತೇಜ ನಿರ್ದೇಶನ: ನಿರ್ದೇಶಕ ಅಶೋಕ್ ತೇಜ ಒಡೆಲಾ 2 ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಟೀಸರ್ ನೋಡಿದ ನಂತರ ಅಭಿಮಾನಿಗಳು ಅದನ್ನು ಹೊಗಳುವುದರಲ್ಲಿ ಬ್ಯುಸಿಯಾಗಿದ್ದಾರೆ.. ಬಿಡುಗಡೆಯಾದ ಮೂರು ಗಂಟೆಗಳಲ್ಲಿ, 'ಒಡೇಲಾ 2' ಚಿತ್ರದ ಟೀಸರ್ ಅನ್ನು ಯೂಟ್ಯೂಬ್‌ನಲ್ಲಿ 1.45 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ರಮ್ಯಾ ಧರಿಸಿರುವ ಕಪ್ಪು ಸೀರೆ ಬೆಲೆಗೆ 3 ತಿಂಗಳು ಬಡವರ ದಿನಸಿ ಬರ್ತಿತ್ತಂತೆ; ಫೋಟೋ ವೈರಲ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!